ಬುಧವಾರ, ನವೆಂಬರ್ 20, 2019
27 °C

ಶ್ರೀಲಂಕಾಕ್ಕೆ ತೆರಳಬೇಕಿದ್ದ ನತದೃಷ್ಟ ಪ್ರವಾಸಿ

Published:
Updated:

ಲಂಡನ್ (ಪಿಟಿಐ): ಜಮ್ಮು ಮತ್ತು ಕಾಶ್ಮೀರದಲ್ಲಿ ಡಚ್ (ನೆದರ್ಲೆಂಡ್) ಪ್ರಜೆಯೊಬ್ಬನಿಂದ ಹತ್ಯೆಗೀಡಾದ ಬ್ರಿಟನ್ ಯುವತಿ ಸಾರಾ ಗ್ರೋವ್ಸ್ ಪ್ರವಾಸಕ್ಕಾಗಿ ಶ್ರೀಲಂಕಾಗೆ ಹೋಗಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ತನ್ನ ಯೋಜನೆ ಬದಲಾಯಿಸಿ ಕಣಿವೆ ರಾಜ್ಯಕ್ಕೆ ತೆರಳಿದ್ದಳು ಎಂದು ಆಕೆಯ ಪೋಷಕರು ಹೇಳಿದ್ದಾರೆ.ಶವ ಹಸ್ತಾಂತರ (ಶ್ರೀನಗರ ವರದಿ): ಈ ಮಧ್ಯೆ, ಯುವತಿಯ ಶವವನ್ನು ಮಂಗಳವಾರ ಬ್ರಿಟನ್ ಹೈಕಮಿಷನ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದ್ದು,  ಬ್ರಿಟನ್‌ಗೆ ಕೊಂಡೊಯ್ಯಲಿದ್ದಾರೆ. ಶವ ಪರೀಕ್ಷೆ ವರದಿ ಇನ್ನಷ್ಟೇ ಬರಬೇಕಿದೆ.

ಪ್ರತಿಕ್ರಿಯಿಸಿ (+)