ಶ್ರೀಲಂಕಾದಲ್ಲಿ ವಿಶ್ವಸಂಸ್ಥೆ ವ್ಯವಸ್ಥೆ ವಿಫಲ: ಬಾನ್‌

7

ಶ್ರೀಲಂಕಾದಲ್ಲಿ ವಿಶ್ವಸಂಸ್ಥೆ ವ್ಯವಸ್ಥೆ ವಿಫಲ: ಬಾನ್‌

Published:
Updated:

ವಿಶ್ವಸಂಸ್ಥೆ (ಪಿಟಿಐ): ಶ್ರೀಲಂಕಾದಲ್ಲಿ 2009ರಲ್ಲಿ ನಡೆದಿದ್ದ ಜನಾಂಗೀಯ ಸಮರದ ಕೊನೆಯ ದಿನಗಳಲ್ಲಿ ಸೂಕ್ತ ಕ್ರಮ­ಗಳನ್ನು ಕೈಗೊಳ್ಳಲು ವಿಶ್ವಸಂಸ್ಥೆ ವಿಫಲವಾಗಿತ್ತು ಎಂದು ಮಹಾ ಪ್ರಧಾನ ಕಾರ್ಯದರ್ಶಿ ಬಾನ್‌ ಕಿ ಮೂನ್ ಒಪ್ಪಿಕೊಂಡಿದ್ದಾರೆ.ವಿಶ್ವಸಂಸ್ಥೆಯ 68ನೇ ಸಾಮಾನ್ಯ ಸಭೆ­ಯನ್ನು ಉದ್ದೇಶಿಸಿ ಮಂಗಳವಾರ ಮಾತ­ನಾಡಿದ ಸಂದರ್ಭದಲ್ಲಿ ಬಾನ್‌ ಈ ವಿಷಯ ಪ್ರಸ್ತಾಪಿಸಿ­ದ್ದಾರೆ. ಶ್ರೀಲಂಕಾ ಅಧ್ಯಕ್ಷ ಮಹಿಂದಾ ರಾಜಪಕ್ಸೆ  ಕೂಡ ಈ ವೇಳೆ ಉಪಸ್ಥಿತರಿದ್ದರು.ಶ್ರೀಲಂಕಾದಲ್ಲಿ ವಿಶ್ವಸಂಸ್ಥೆ ಕೈಗೊಂಡಿ­ರುವ ಕ್ರಮಗಳ ಕುರಿತಂತೆ ಅಧ್ಯಯನ ನಡೆಸಲು ನೇಮಿಸಲಾಗಿದ್ದ ಆಂತರಿಕ ಸಮಿತಿಯು ‘ವ್ಯವಸ್ಥೆ ವಿಫಲ’ಗೊಂಡಿರು­ವು­­ದರ ಬಗ್ಗೆ ಪ್ರಸ್ತಾಪಿಸಿದೆ. ಸದಸ್ಯ ರಾಷ್ಟ್ರ­ಗಳು ಕೂಡ ಈ ನಿಟ್ಟಿನಲ್ಲಿ ವಿಶ್ವಸಂಸ್ಥೆಗೆ ಬೆಂಬಲ ನೀಡಲಿಲ್ಲ. ನಮ್ಮ ಯೋಜನೆ, ಕಾರ್ಯಕ್ರಮಗಳನ್ನು ಅಲ್ಲಿ ಪೂರ್ಣವಾಗಿ ಜಾರಿಗೆ ತರಲು ಸಾಧ್ಯವಾಗಲಿಲ್ಲ ಎಂದು ಬಾನ್‌ ಹೇಳಿದ್ದಾರೆ.ಎಲ್‌ಟಿಟಿಇ ವಿರುದ್ಧ ಶ್ರೀಲಂಕಾದಲ್ಲಿ ಸೇನೆ ಕೈಗೊಂಡಿದ್ದ ಯುದ್ಧದ ಸಂದರ್ಭ­ದಲ್ಲಿ ವಿಶ್ವಸಂಸ್ಥೆ ಕೈಗೊಂಡಿದ್ದ ಕಾರ್ಯ­ಗಳ ಬಗ್ಗೆ ಪರಿಶೀಲನೆ ನಡೆಸುವುದಕ್ಕಾಗಿ ಬಾನ್‌, 2012ರಲ್ಲಿ ಆಂತರಿಕ ಪರಿಶೀ­ಲನಾ ಸಮಿತಿ (ಐಆರ್‌ಪಿ) ನೇಮಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry