ಶ್ರೀಲಂಕಾ ಅಲ್ಪ ಮೊತ್ತ

ಶನಿವಾರ, ಜೂಲೈ 20, 2019
23 °C

ಶ್ರೀಲಂಕಾ ಅಲ್ಪ ಮೊತ್ತ

Published:
Updated:

ಸೌದಾಂಪ್ಟನ್: ಶ್ರೀಲಂಕಾ ತಂಡ ಇಂಗ್ಲೆಂಡ್ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ತನ್ನ ಮೊದಲ ಇನಿಂಗ್ಸ್‌ನಲ್ಲಿ 184 ರನ್‌ಗಳಿಗೆ ಆಲೌಟಾಯಿತು. ಇದಕ್ಕೆ ಉತ್ತರವಾಗಿ ತನ್ನ ಮೊದಲ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಮೂರನೇ ದಿನದ ಚಹಾ ವಿರಾಮದ ಬಳಿಕ ಎರಡು ವಿಕೆಟ್‌ಗೆ 78 ರನ್ ಗಳಿಸಿದ್ದ ಸಂದರ್ಭ ಮಳೆ ಸುರಿದ ಕಾರಣ ಪಂದ್ಯಕ್ಕೆ ಅಡ್ಡಿಉಂಟಾಯಿತು.ಈ ವೇಳೆ ಅಲಿಸ್ಟರ್ ಕುಕ್ (32) ಮತ್ತು ಕೆವಿನ್ ಪೀಟರ್‌ಸನ್ (36) ಅವರು ಕ್ರೀಸ್‌ನಲ್ಲಿದ್ದರು. ಆತಿಥೇಯ ತಂಡದ ಆರಂಭ ಆಘಾತಕಾರಿಯಾಗಿತ್ತು. ಅ್ಯಂಡ್ರ್ಯೂ ಸ್ಟ್ರಾಸ್ (4) ಮತ್ತು ಜೊನಾಥನ್ ಟ್ರಾಟ್ (4) ಅವರು ತಂಡದ ಮೊತ್ತ 14 ಆಗುವಷ್ಟರಲ್ಲಿ ಪೆವಿಲಿಯನ್‌ಗೆ ಮರಳಿದ್ದರು. ಈ ಹಂತದಲ್ಲಿ ಜೊತೆಗೂಡಿದ ಕುಕ್ ಹಾಗೂ ಪೀಟರ್‌ಸನ್ ಅವರು ತಂಡಕ್ಕೆ ಆಸರೆಯಾದರು.ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ: ಮೊದಲ ಇನಿಂಗ್ಸ್: 64.2 ಓವರ್‌ಗಳಲ್ಲಿ 184. ಇಂಗ್ಲೆಂಡ್: ಮೊದಲ ಇನಿಂಗ್ಸ್: 22 ಓವರ್‌ಗಳಲ್ಲಿ 2 ವಿಕೆಟ್‌ಗೆ 78 (ಅಲಿಸ್ಟರ್ ಕುಕ್ ಬ್ಯಾಟಿಂಗ್ 32, ಕೆವಿನ್ ಪೀಟರ್‌ಸನ್ ಬ್ಯಾಟಿಂಗ್ 36, ವೆಲೆಗೆಡರಾ 18ಕ್ಕೆ 1).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry