ಗುರುವಾರ , ಏಪ್ರಿಲ್ 22, 2021
30 °C

ಶ್ರೀಲಂಕಾ ನೌಕಾಪಡೆಯಿಂದ ಹಲ್ಲೆ: ಭಾರತೀಯ ಮೀನುಗಾರರ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮೇಶ್ವರಂ (ಪಿಟಿಐ): ಪಾಲಕ್ ಜಲಸಂಧಿಯ ಕಟ್ಚಾತೀವು ಬಳಿ ಶ್ರೀಲಂಕಾ ನೌಕಾಪಡೆ ತಮ್ಮ ಮೇಲೆ ಹಲ್ಲೆ ಮಾಡಿದೆ ಎಂದು ಗಾಯಗೊಂಡ ಆರು ತಮಿಳುನಾಡು ಮೀನುಗಾರರು ಆರೋಪಿಸಿದ್ದಾರೆ. ಆದರೆ, ಇದನ್ನು ಶ್ರೀಲಂಕಾ ಸರ್ಕಾರ ತಳ್ಳಿ ಹಾಕಿದೆ.3 ದೋಣಿಗಳು, 13 ಮೀನುಗಾರರನ್ನು ವಶಕ್ಕೆ ತೆಗೆದುಕೊಂಡ ಶ್ರೀಲಂಕಾದ ನೌಕಾಪಡೆ ನೆದುನ್‌ತೀವುಗೆ ಕರೆದುಕೊಂಡು ಹೋಯಿತು. ಶ್ರೀಲಂಕಾದಿಂದ ಸಂದೇಶ ಬಂದ ಮೇಲೆ ವಶದಲ್ಲಿದ್ದ ಮೀನುಗಾರರನ್ನು ಬಿಡುಗಡೆ ಮಾಡುವಂತೆ ಅಧಿಕಾರಿಗಳು ಆದೇಶ ನೀಡಿದರು. ಅವರನ್ನು ಬಿಡುಗಡೆ ಮಾಡುವುದಕ್ಕೂ ಮುನ್ನ ಮೀನುಗಾರರಿಗೆ ಶ್ರೀಲಂಕಾದ ನೌಕಾಪಡೆಯವರು ದೊಣ್ಣೆಗಳಿಂದ ಹೊಡೆದರು ಎಂದು ಮೂಲಗಳು ತಿಳಿಸಿವೆ.ವಯಲಾರ್ ರವಿಗೆ ವಿಲಾಸರಾವ್ ಖಾತೆ

ನವದೆಹಲಿ (ಐಎಎನ್‌ಎಸ್):
ವಿಲಾಸರಾವ್ ದೇಶಮುಖ ನಿಧನದಿಂದಾಗಿ ಅವರು ನಿರ್ವಹಿಸುತ್ತಿದ್ದ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆಯನ್ನು ವಯಲಾರ್ ರವಿ ಅವರಿಗೆ ನೀಡಲಾಗಿದೆ. ವಯಲಾರ್ ಈಗಾಗಲೆ ಸಾಗರೋತ್ತರ ವ್ಯವಹಾರಗಳ ಖಾತೆಯನ್ನೂ ನಿರ್ವಹಿಸುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.