ಶ್ರೀಲಂಕಾ ಸೇನಾ ಅಧಿಕಾರಿಗಳಿಗೆ ತರಬೇತಿ: ಅರ್ಜಿ ವಜಾ

7

ಶ್ರೀಲಂಕಾ ಸೇನಾ ಅಧಿಕಾರಿಗಳಿಗೆ ತರಬೇತಿ: ಅರ್ಜಿ ವಜಾ

Published:
Updated:

ನವದೆಹಲಿ (ಪಿಟಿಐ): ಶ್ರೀಲಂಕಾ ಸೇನೆಯ ಅಧಿಕಾರಿಗಳಿಗೆ ದೇಶದಲ್ಲಿ ತರಬೇತಿ ನೀಡುತ್ತಿರುವುದಕ್ಕೆ ತಡೆ ನೀಡಲು ಕೇಂದ್ರಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಸೋಮವಾರ ವಜಾ ಮಾಡಿದೆ.`ಇದು ಸರ್ಕಾರದ ಕಾರ್ಯನೀತಿಯಾಗಿದ್ದು,  ಮಧ್ಯಪ್ರವೇಶಿಸುವುದಿಲ್ಲ~ ಎಂದು ನ್ಯಾಯಮೂರ್ತಿ ಅಫ್ತಾಬ್ ಅಲಂ ನೇತೃತ್ವದ ಪೀಠ ಹೇಳಿದೆ.ದೇಶದಲ್ಲಿ ಶ್ರೀಲಂಕಾ ಸೇನೆಯ ಅಧಿಕಾರಿಗಳಿಗೆ ತರಬೇತಿ ನೀಡುತ್ತಿರುವುದನ್ನು ವಿರೋಧಿಸಿ ತಮಿಳುನಾಡಿನಲ್ಲಿ ಸಾರ್ವಜನಿಕರು ಮತ್ತು ರಾಜಕಾರಣಿಗಳು ಪ್ರತಿಭಟನೆ ನಡೆಸಿದ್ದರು. ರಾಜಾ ರಮಣ್ ಎಂಬುವವರು ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ ಅರ್ಜಿಯನ್ನೂ ಸಲ್ಲಿಸಿದ್ದರು.

 

ಶ್ರೀಲಂಕಾ ಸೇನೆಯ ಒಂಬತ್ತು ಮಂದಿ ಕರ್ನಾಟಕದ ಭಾರತೀಯ ವಾಯುನೆಲೆಯಲ್ಲಿ ತರಬೇತಿ ಪಡೆಯುತ್ತಿರುವ ಬಗ್ಗೆಯೂ ಈ ಅರ್ಜಿಯಲ್ಲಿ ಉಲ್ಲೇಖಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry