ಮಂಗಳವಾರ, ಏಪ್ರಿಲ್ 20, 2021
30 °C

ಶ್ರೀಲಂಕಾ ಹೇಳಿಕೆಗೆ ಭಾರತದ ತೀಷ್ಣ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ಕೊಲೊಂಬೊ(ಪಿಟಿಐ): ಎಲ್.ಟಿ.ಟಿ.ಇ ಸಂಘಟನೆ ಭಾರತದಲ್ಲಿ ಶಿಬಿರಗಳನ್ನು ಹೊಂದಿದೆ ಎಂಬ ಶ್ರೀಲಂಕಾ ಪ್ರಧಾನಿ ಅವರ ಹೇಳಿಕೆಗೆ ಭಾರತ ಗುರುವಾರ ಅತ್ಯಂತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

ಭಾರತದಲ್ಲಿ ಇಂತಹ ಯಾವುದೇ ಶಿಬಿರಗಳಿಲ್ಲ ಎಂದು ಖಂಡತುಂಡವಾಗಿ ಹೇಳಿರುವ ಭಾರತ ಊಹಾತ್ಮಕ ಹಾಗೂ ಆಧಾರರಹಿತ ವರದಿಗಳ ಮೇಲೆ ಪ್ರತಿಕ್ರಿಯಿಸಬಾರದು ಎಂದು ಶ್ರೀಲಂಕಾಕ್ಕೆ ಸೂಚಿಸಿದೆ.

ತಾವು ಶ್ರೀಲಂಕಾ ಪ್ರಧಾನಿಯವರು ಸಂಸತ್ತಿನಲ್ಲಿ ನೀಡಿದ ಹೇಳಿಕೆಯನ್ನು ಕೂಲಂಕಷವಾಗಿ ಪರಿಶೀಲಿಸಿದ್ದು, ಅಂತಹ ಯಾವುದೇ ಶಿಬಿರಗಳು ಭಾರತದಲ್ಲಿಲ್ಲ ಎಂದು ಸ್ಪಷ್ಟಪಡಿಸಿರುವ ವಿದೇಶಾಂಗ ಇಲಾಖೆಯ ವಕ್ತಾರರು ಶ್ರೀಲಂಕಾ ಹಿಂದೆ ಯಾವತ್ತೂ ಈ ವಿಷಯವನ್ನು ಭಾರತದೊಂದಿಗೆ ಪ್ರಸ್ತಾಪಿಸಿಲ್ಲ ಎಂದರು.

ಇದಕ್ಕೂ ಮುನ್ನ ಬುಧವಾರ ಶ್ರೀಲಂಕಾ ಪ್ರಧಾನಿ ಡಿ.ಎಂ.ಜಯರತ್ನೆ ಅವರು ಸಂಸತ್ತಿನಲ್ಲಿ ಭಾರತದಲ್ಲಿ ವಿನಯಾಂಗಮ್ ನೇತೃತ್ವದಲ್ಲಿ ಎಲ್.ಟಿ.ಟಿ.ಇ ಸಂಘಟನೆಯ ತರಬೇತಿ ಶಿಬಿರಗಳು ಸಕ್ರಿಯವಾಗಿದ್ದು, ಅದರಲ್ಲಿ ತರಬೇತಿ ಹೊಂದಿದ ಉಗ್ರರು ಲಂಕೆಯ ಮೇಲೆ ದಾಳಿ ಮಾಡಬಹುದು ಎಂದು ತಿಳಿಸಿದ್ದರು. 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.