ಗುರುವಾರ , ನವೆಂಬರ್ 21, 2019
27 °C

`ಶ್ರೀವಿಜಯ ಸಾಹಿತ್ಯ' ಪ್ರಶಸ್ತಿಗೆ ಜ.ನಾ. ತೇಜಶ್ರೀ ಆಯ್ಕೆ

Published:
Updated:

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು ನೀಡುವ 2011-12ನೇ ಸಾಲಿನ `ಶ್ರೀವಿಜಯ ಸಾಹಿತ್ಯ' ಪ್ರಶಸ್ತಿಗೆ ಸಾಹಿತ್ಯ ಕ್ಷೇತ್ರಕ್ಕೆ ಸಮೃದ್ಧ ಮತ್ತು ಮೌಲಿಕ ಕೊಡುಗೆ ನೀಡುತ್ತಿರುವ ಜ.ನಾ.ತೇಜಶ್ರೀ ಅವರು ಆಯ್ಕೆಯಾಗಿದ್ದಾರೆ.ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ 40 ವರ್ಷ ವರ್ಷದೊಳಗಿನ ಯುವ ಸಾಹಿತಿಗಳಿಗೆ ನೀಡುವ ಪ್ರಶಸ್ತಿ ಇದಾಗಿದ್ದು, ಪುರಸ್ಕೃತರಿಗೆ ರೂ 1,11,111 ನಗದು ಬಹುಮಾನವಿದೆ. ಕಸಾಪ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರ ಅಧ್ಯಕ್ಷತೆಯಲ್ಲಿ ಈಚೆಗೆ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ತೇಜಶ್ರೀ ಅವರನ್ನು ಆಯ್ಕೆ ಮಾಡಲಾಯಿತು. ಹಾಸನ ಮೂಲದವರಾದ ತೇಜಶ್ರೀ, 4 ಕಾವ್ಯಗಳು ಸೇರಿದಂತೆ 13 ಕೃತಿಗಳನ್ನು ಬರೆದಿದ್ದಾರೆ.

ಪ್ರತಿಕ್ರಿಯಿಸಿ (+)