ಶ್ರೀ ಅಮರೇಶ್ವರ ಮಹಾತ್ಮೆ ಚಿತ್ರಕ್ಕೆ ಡಬ್ಬಿಂಗ್ ಪೂರ್ಣ

7

ಶ್ರೀ ಅಮರೇಶ್ವರ ಮಹಾತ್ಮೆ ಚಿತ್ರಕ್ಕೆ ಡಬ್ಬಿಂಗ್ ಪೂರ್ಣ

Published:
Updated:

ಬಸವರಾಜ್ ಹಿರೇಮಠ್ ನಿರ್ಮಿಸುತ್ತಿರುವ `ಶ್ರಿ ಅಮರೇಶ್ವರ ಮಹಾತ್ಮೆ~ ಚಿತ್ರಕ್ಕೆ ಮಾತುಗಳ ಧ್ವನಿಮುದ್ರಣ ಕಾರ್ಯ ನಡೆಯಿತು. ಪೌರಾಣಿಕ ಹಾಗೂ ಭಕ್ತಿ ಪ್ರಧಾನ ಕಥಾ ಹಂದರವುಳ್ಳ ಈ ಚಿತ್ರವನ್ನು ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ. ಅರವಿಂದ್ ಮುಳಗುಂದ ಚಿತ್ರಕಥೆ ರಚಿಸಿ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಮಹಾಬಲೇಶ್ ಛಾಯಾಗ್ರಹಣ, ಎಂ.ಎಸ್. ಮಾರುತಿ ಸಂಗೀತ, ಮಹೇಶ್ ಮನ್ನಾಪುರ್ ಸಂಭಾಷಣೆ, ಶಿವು ಬೆರಡಗಿ ಸಾಹಿತ್ಯ, ಥ್ರಿಲ್ಲರ್ ಮಂಜು ಸಾಹಸ, ಮದನ್ ಹರಿಣಿ ನೃತ್ಯ ನಿರ್ದೇಶನ, ರಮೇಶ್ ದೇಸಾಯಿ ಕಲಾ ನಿರ್ದೇಶನ ಇದೆ.ಅಭಿಜಿತ್, ಅಭಯ್, ಉಜ್ವಲಾ, ಗೌತಮಿ, ಮಾಸ್ಟರ್ ಶ್ರಿನಿವಾಸ್, ಬ್ಯಾಂಕ್ ಜನಾರ್ದನ್, ಬಿರಾದರ್, ಮಾಲತಿ ಶಂಕರ್ ಪಾಟೀಲ್ ತಾರಾಗಣವಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry