ಶ್ರೀ ಗಜಾನನ ತಂಡಕ್ಕೆ ಜಯ

7

ಶ್ರೀ ಗಜಾನನ ತಂಡಕ್ಕೆ ಜಯ

Published:
Updated:

ಬೆಂಗಳೂರು: ಶ್ರೀ ಗಜಾನನ ತಂಡದವರು ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಆಶ್ರಯದ ರಾಜ್ಯ `ಬಿ~ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಗೆಲುವು ಪಡೆದರು.ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಗಜಾನನ ತಂಡ 2-1 ಗೋಲುಗಳಿಂದ ಸನ್‌ರೈಸಿಂಗ್ ವಿರುದ್ಧ ಜಯ ಸಾಧಿಸಿತು. ವಿನೋದ್ (8ನೇ ನಿಮಿಷ) ಮತ್ತು ಮಾದೇಶ್ (24) ವಿಜೇತ ತಂಡದ ಪರ ಗೋಲು ಗಳಿಸಿದರು. ಹರೀಶ್ ತಂದಿತ್ತ ಗೋಲಿನ ನೆರವಿನಿಂದ 5ನೇ ನಿಮಿಷದಲ್ಲೇ ಮುನ್ನಡೆ ಪಡೆದಿದ್ದ ಸನ್ ರೈಸಿಂಗ್ ಬಳಿಕ ಪಂದ್ಯದ ಮೇಲಿನ ಹಿಡಿತ ಕೈಬಿಟ್ಟಿತು.ಮತ್ತೊಂದು ಪಂದ್ಯದಲ್ಲಿ ಜವಾಹರ್ ಯೂನಿಯರ್ ತಂಡ `ವಾಕ್ ಓವರ್~ ಪಡೆಯಿತು. ಯಂಗ್ ಮುಸ್ಲಿಮ್ಸ ತಂಡ ಕ್ರೀಡಾಂಗಣಕ್ಕೆ ಆಗಮಿಸದ್ದು ಇದಕ್ಕೆ ಕಾರಣ. ಜವಾಹರ್ ತಂಡ ಪೂರ್ಣ ಪಾಯಿಂಟ್ ಗಿಟ್ಟಿಸಿದರೆ, ಯಂಗ್ ಮುಸ್ಲಿಮ್ಸ ತಂಡ `ಸಿ~ ಡಿವಿಷನ್‌ಗೆ ಹಿಂಬಡ್ತಿ ಪಡೆಯಿತು.ಶುಕ್ರವಾರ ನಡೆಯುವ ಪಂದ್ಯಗಳಲ್ಲಿ ಜುಪಿಟರ್- ಓರಿಯಂಟಲ್ ಮತ್ತು ಬಿಡಬ್ಲ್ಯುಎಸ್‌ಎಸ್‌ಬಿ- ಸರ್ಕಾರಿ ಮುದ್ರಣಾಲಯ ತಂಡಗಳು ಪೈಪೋಟಿ ನಡೆಸಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry