ಶ್ರೀ ರಾಘವೇಂದ್ರ ಗುರುಸ್ಮರಣೆ

7

ಶ್ರೀ ರಾಘವೇಂದ್ರ ಗುರುಸ್ಮರಣೆ

Published:
Updated:
ಶ್ರೀ ರಾಘವೇಂದ್ರ ಗುರುಸ್ಮರಣೆ

ಶ್ರೀ ಸುಶಮೀಂದ್ರ ತೀರ್ಥರ ನಾಲ್ಕನೇ ವರ್ಷದ ಗುರುಸ್ಮರಣೆ ಹಾಗೂ ಸಂಸ್ಥೆಯ ವಾರ್ಷಿಕೋತ್ಸವ ಪ್ರಯುಕ್ತ ಶ್ರೀ ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನ ಟ್ರಸ್ಟ್ ಭಾನುವಾರ ಮತ್ತು ಸೋಮವಾರ (ಮೇ.27, 28) `ಶ್ರೀ ಪ್ರಹ್ಲಾದ ಪ್ರಶಸ್ತಿ~ ಪ್ರದಾನ ಸಮಾರಂಭವನ್ನು ಆಯೋಜಿಸಿದೆ.ಭಾನುವಾರ (ಮೇ.27) ಬೆಳಿಗ್ಗೆ 7ಕ್ಕೆ ಗಣಹೋಮ, ಪವಮಾನ ಹೋಮ, ಆಯುಷ್ಯ ಹೋಮ. ಸಂಜೆ 6ಕ್ಕೆ ಉಡುಪಿ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥರಿಗೆ ಗೌರವ ಸಮರ್ಪಣೆ. ನಂತರ ಶ್ರೀಗಳಿಂದ ಆಶೀರ್ವಚನ. ಆಮೇಲೆ ಡಾ.ನಾಗಸಂಪಿಗೆ ಅವರಿಂದ ಪ್ರವಚನ. ಸಂಜೆ 7ಕ್ಕೆ ವಿದ್ವಾನ್ ಪಟ್ಟಾಭಿರಾಮ ಪಂಡಿತ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ಎಸ್. ಶೇಷಗಿರಿರಾವ್ (ವಯೊಲಿನ್), ವಿ.ಎಸ್.ರಾಜಗೋಪಾಲ್ (ಮೃದಂಗ), ಶ್ರೀಶೈಲಂ (ಘಟಂ), ಎಂ.ಗುರುರಾಜ್ (ಮೋರ್ಚಿಂಗ್).ಜಯನಗರದ ನಂಜನಗೂಡು ರಾಘವೇಂದ್ರ ಸ್ವಾಮಿ ಮಠದ ಅರ್ಚಕ ಮದ್ವೇಶಚಾರ್ಯ ಅವರಿಗೆ ಗೌರವ ಸಮರ್ಪಣೆ.ಸೋಮವಾರ (ಮೇ.28) ಸಂಜೆ 6ಕ್ಕೆ ವಿದ್ವಾನ್ ವಿದ್ಯಾಭೂಷಣ ಅವರಿಂದ ದಾಸಾಮೃತ. ಟಿ.ಎ.ಎಸ್. ಮಣಿ (ಮೃದಂಗ). ಸಂಜೆ 7ಕ್ಕೆ ಆರ್.ಕೆ.ಪದ್ಮನಾಭ ಅವರಿಂದ ಅಭಿನಂದನಾ ಭಾಷಣ. ಸಾನ್ನಿಧ್ಯ ಮತ್ತು ಉದ್ಘಾಟನೆ- ಮುಳಬಾಗಿಲು ಶ್ರೀಪಾದರಾಜ ಮಠದ ಶ್ರೀ ಕೇಶವನಿಧಿತೀರ್ಥರು. ನಂತರ ನಿವೃತ್ತ ಪೊಲಿಸ್ ಅಧಿಕಾರಿ ಗರುಡಾಚಾರ್, ತಿರುಪತಿಯ ರಾಷ್ಟ್ರೀಯ ಸಂಸ್ಕೃತಿ ವಿದ್ಯಾಪೀಠದ ಮಾಜಿ ಉಪಕುಲಪತಿ ಡಾ.ಡಿ.ಪ್ರಹ್ಲಾದಾಚಾರ್ಯ, ಸಂಗೀತ ವಿದ್ವಾಂಸರಾದ ಕುರುಡಿ ವೆಂಕಣ್ಣಚಾರ್ಯ, ಆರ್.ವಿಶ್ವೇಶ್ವರನ್, ಪೂರ್ಣಪ್ರಜ್ಞ ವಿದ್ಯಾಪೀಠದ ನೀರ್ದೇಶಕ ಡಾ.ಎ.ವಿ.ನಾಗಸಂಪಿಗೆ ಅವರಿಗೆ `ಶ್ರೀ ಪ್ರಹ್ಲಾದ ಪುರಸ್ಕಾರ~ ಪ್ರದಾನ.ಮಂತ್ರಾಲಯ ಮಠದ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸುಯಮೀಂದ್ರಚಾರ್ಯ, ಮೂಲ ಬೃಂದಾವನದ ಪ್ರಧಾನ ಅರ್ಚಕ ಯದುರಾಜಾಚಾರ್ಯ ಹಾಗೂ ಹೈದರಾಬಾದ್‌ನ ಶ್ರೀನಿವಾಸಚಾರ್ಯ ಅವರಿಗೆ ವಿಶೇಷ ಸನ್ಮಾನ.ಅಂಗವಿಕಲ ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ.ಸ್ಥಳ: ರಾಗೀಗುಡ್ಡ ಶ್ರೀ ಪ್ರಸನ್ನ ಆಂಜನೇಯ ದೇವಸ್ಥಾನ, ಶ್ರೀ ಕುಚಲಾಂಭ ಸಾಂಸ್ಕೃತಿಕ ಮಂದಿರ, ಜಯನಗರ 9ನೇ ಬ್ಲಾಕ್.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry