ಶ್ರೀ ಸಂಗೀತ ಕಲೆ ಸಮ್ಮೇಳನ

7

ಶ್ರೀ ಸಂಗೀತ ಕಲೆ ಸಮ್ಮೇಳನ

Published:
Updated:

 ಶ್ರೀ ಅಕಾಡೆಮಿ ಆಫ್ ಮ್ಯೂಸಿಕ್ ಅಂಡ್ ಆರ್ಟ್ಸ್: ಬುಧವಾರ ಸಂಗೀತ, ಕಲೆ ಮತ್ತು ಭಾರತೀಯ ಸಂಸ್ಕೃತಿ ಕುರಿತು ಸಮ್ಮೇಳನ, ಪ್ರಾತ್ಯಕ್ಷಿಕೆ. ಬೆಳಿಗ್ಗೆ 9ಕ್ಕೆ ಉದ್ಘಾಟನೆ: ರಾಮಣ್ಣ. ನಂತರ ಎಂ.ಆರ್. ವಿಜಯಲಕ್ಷ್ಮಿ ಸ್ಮರಣಾರ್ಥ ಕಲೆ ಮತ್ತು ಸಂಸ್ಕೃತಿ ಬಹುಮಾನ ಹಾಗೂ ಆನೂರು ರಾಮಕೃಷ್ಣ ಮತ್ತು ಅಲಸೂರು ಚಂದ್ರಶೇಖರ ಸ್ಮರಣಾರ್ಥ ವಯಲಿನ್, ವೀಣೆ ಮತ್ತು ಕೊಳಲು ವಾದನ ಸ್ಪರ್ಧಾ ವಿಜೇತರಿಗೆ ಹಂಗಾಮಿ ಡಿಜಿಪಿ ಎಸ್.ಟಿ ರಮೇಶ್ ಮತ್ತು ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರಿಂದ ಬಹುಮಾನ ವಿತರಣೆ. ವಿದ್ವಾನ್ ಡಿವಿ.ನಾಗರಾಜ್ ಮತ್ತು ವಿದ್ವಾನ್ ಟಿ.ಎಸ್.ಚಂದ್ರಶೇಖರ್ ಅವರಿಗೆ ಸನ್ಮಾನ. ಬೆಳಿಗ್ಗೆ 10ಕ್ಕೆ ಯುವಜನರಲ್ಲಿ ಸಂಸ್ಕೃತಿ ಪ್ರಜ್ಞೆ ಕುರಿತು ವಿದುಷಿ ಡಾ. ಟಿ.ಎಸ್.ಸತ್ಯವತಿ ಅವರಿಂದ ಭಾಷಣ. ವಿದ್ವಾನ್ ಬಿ.ಸಿ.ಮಂಜುನಾಥ್ ಮತ್ತು ವಿದ್ವಾನ್ ವ್ಯಾಸವಿಠಲ್ ಅವರಿಂದ ಮೃದಂಗ-ಖಂಜೀರಾ ವಿಶೇಷ ಲಯವಿನ್ಯಾಸ. ಸ್ಪರ್ಧಿಗಳು ಮತ್ತು ಬಹುಮಾನ ವಿಜೇತರಿಂದ ಕಾರ್ಯಕ್ರಮಗಳು.ಮಧ್ಯಾಹ್ನ 2ರಿಂದ 3ರ ವರೆಗೆ ಮಕ್ಕಳು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಸ್ವಾಮಿ ವಿವೇಕಾನಂದರ ರೇಖಾಚಿತ್ರ ಬಿಡಿಸುವ ಸ್ಪರ್ಧೆ. ಕಾಲೇಜು ವಿದಾರ್ಥಿಗಳಿಗೆ ‘ಯುವಜನರು ಮತ್ತು ರಾಷ್ಟ್ರ ನಿರ್ಮಾಣ’ ಎಂಬ ವಿಷಯದ ಮೇಲೆ ಪ್ರಬಂಧ ಸ್ಪರ್ಧೆ.3ಕ್ಕೆ ‘ಯುವಜನರು ಮತ್ತು ರಾಷ್ಟ್ರ ನಿರ್ಮಾಣ’ ಎಂಬ ವಿಷಯದ ಕುರಿತು ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಕೆ. ಶ್ರೀಧರ್ ಅವರಿಂದ ಭಾಷಣ. ವೆಂಕಟಸುಬ್ಬರಾವ್ ಅವರಿಂದ ವೇದ ಗಣಿತದ ಕುರಿತು ಉಪನ್ಯಾಸ ಮತ್ತು ಪ್ರಾತ್ಯಕ್ಷಿಕೆ.ಶ್ಯಾಮಶಾಸ್ತ್ರಿ ಸ್ವರಜತಿ ಪ್ರಸ್ತುತಿಯಲ್ಲಿ ಅನಂತಪದ್ಮನಾಭರಾವ್ (ಗಾಯನ), ಮೀರಾ ರಾಜಕುಮಾರ (ವಯಲಿನ್), ಅನಂತರಾಮ ರಾಜಕುಮಾರ (ಮೃದಂಗ). ಛಾಯಾಗ್ರಾಹಕ ಡಿ.ಕೆ. ಭಾಸ್ಕರ್ ಅವರಿಂದ ‘ಬ್ರೆಜಿಲಿಯನ್ ಅಮೇಜೋನಿಯದ ಒಳಗಿನ ಅರಣ್ಯ’ ಕುರಿತು ಭಾಷಣ.ಸಂಜೆ 5.30ಕ್ಕೆ ಪದ್ಮಭೂಷಣ ಡಾ. ಆರ್.ಕೆ. ಶ್ರೀಕಂಠನ್ ಅವರಿಗೆ ಡಾ. ಅಜಯಕುಮಾರ ಸಿಂಗ್ ಅವರಿಂದ ಸನ್ಮಾನ.

ನಂತರ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿಯಲ್ಲಿ ಡಾ. ಆರ್.ಕೆ. ಶ್ರೀಕಂಠನ್ ಮತ್ತು ವಿದ್ವಾನ್ ರುದ್ರಪಟ್ನಂ ಎಸ್. ರಮಾಕಾಂತ ಗಾಯನ. ವಿದ್ವಾನ್ ನಳಿನಾ ಮೋಹನ್ (ವಯಲಿನ್), ಎಚ್.ಎಸ್.ಸುಧೀಂದ್ರ (ಮೃದಂಗ), ಗಿರಿಧರ ಉಡುಪ (ಘಟ). ಅತಿಥಿ: ಗಾಯನ ಸಮಾಜದ ಅಧ್ಯಕ್ಷ ಡಾ. ಎಂ.ಆರ್.ವಿ. ಪ್ರಸಾದ್.ಸ್ಥಳ: ಗಾಯನ ಸಮಾಜ, ಕೆ.ಆರ್.ರಸ್ತೆ. (ಸಂಜೆ 5.30ರ ಸಂಗೀತ ಕಾರ್ಯಕ್ರಮಕ್ಕೆ ಟಿಕೆಟ್ ಪಡೆಯಬೇಕು. ಈ ಹಣವನ್ನು ಸಮಾ ಪ್ರತಿಷ್ಠಾನಕ್ಕೆ ನೀಡಲಾಗುವುದು).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry