ಶ್ರೇಯಾ ಸಂಗೀತ ಧಾರೆ

7

ಶ್ರೇಯಾ ಸಂಗೀತ ಧಾರೆ

Published:
Updated:

ದೇವದಾಸ್ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪ್ರವೇಶಿಸಿ ಮನೆಮಾತಾದ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ಅದೆಷ್ಟೋ ಸಂಗೀತಾಸಕ್ತರ ನೆಚ್ಚಿನ ಗಾಯಕಿಯಾಗಿದ್ದಾರೆ. ಕನ್ನಡಿಗರಿಗೂ ಅವರ ಕಂಠವೀಗ ಸಿನಿಮಾ ಹಾಡುಗಳ ಮೂಲಕ ಚಿರಪರಿಚಿತ. ನಗರದ ಸಂಗೀತಪ್ರಿಯರಿಗೆ ಈ ಹಾಡುಹಕ್ಕಿಯ ಧ್ವನಿ ಕೇಳುವ ಅವಕಾಶ. ಹಿತೈಷಿ ಮಹಿಳಾ ಮನೆಯಂಗಳ ಟ್ರಸ್ಟ್ ಹಾಗೂ `ಫಿಲ್ಮ್ ಕಾನ್ಸೆಫ್ಟ್ಸ್~ ಶನಿವಾರ (ಮೇ.12) ಶ್ರೇಯಾ ಘೋಷಾಲ್ ಸಂಗೀತ ರಸಸಂಜೆ ಕಾರ್ಯಕ್ರಮ ಆಯೋಜಿಸಿವೆ.

`ದೇವದಾಸ್~ ಚಿತ್ರದಿಂದ `ದಿ ಡರ್ಟಿ ಪಿಕ್ಚರ್~ವರೆಗೆ ಶ್ರೇಯಾ ಹಿನ್ನೆಲೆ ಗಾಯನ ಸಂಗೀತಾಸಕ್ತರನ್ನು ಮೋಡಿ ಮಾಡಿದೆ. ಬಾಲಿವುಡ್ ಚಿತ್ರಗಳೇ ಅಲ್ಲದೇ ದಕ್ಷಿಣ ಭಾರತದ ಚಿತ್ರಗಳ ಗೀತೆಗಳಿಗೂ ಧ್ವನಿ ನೀಡಿ ಜನಪ್ರಿಯ ಗಾಯಕಿ ಎನಿಸಿಕೊಂಡಿದ್ದಾರೆ. ಕನ್ನಡದಲ್ಲಿ `ಮುಂಗಾರು ಮಳೆ~ `ಮಿಲನ~, ಸೇವಂತಿ ಸೇವಂತಿ~, `ಚಂಡ~, `ಚೆಲುವಿನ ಚಿತ್ತಾರ~, `ಸಂಜು ವೆಡ್ಸ್ ಗೀತಾ~ ಸೇರಿದಂತೆ ಅನೇಕ ಚಿತ್ರಗಳಲ್ಲಿ ಹಿನ್ನೆಲೆ ಗಾಯಕಿಯಾಗಿ ಮಿಂಚಿದ್ದಾರೆ.

ಇವರ ಹಿನ್ನೆಲೆ ಗಾಯನಕ್ಕೆ `ನ್ಯಾಷನಲ್ ಫಿಲ್ಮ್‌ಫೇರ್~, `ಆರ್.ಡಿ.ಬರ್ಮನ್ ಪ್ರಶಸ್ತಿ~ ಸೇರಿದಂತೆ ನಾಲ್ಕು ಬಾರಿ ಫಿಲ್ಮ್ ಫೇರ್ ಪ್ರಶಸ್ತಿ ಕೂಡ ಸಂದಿದೆ. 1993ರಲ್ಲಿ ಆರಂಭವಾದ ಹಿತೈಷಿ ಮನೆಯಂಗಳ ಟ್ರಸ್ಟ್ ಕಡೆಗಣನೆಗೆ ಒಳಗಾದ ವೃದ್ಧರನ್ನು ಸಂತೈಸಿ ಸಲಹುವ ಕೆಲಸ ಮಾಡಿಕೊಂಡು ಬರುತ್ತಿದೆ. ಈ ನಿಟ್ಟಿನಲ್ಲಿ ಜನರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಮತ್ತು ವೃದ್ಧಾಶ್ರಮ ಕಟ್ಟಡ ನಿರ್ಮಾಣ ಮಾಡುವ ಉದ್ದೇಶದಿಂದ ದೇಣಿಗೆ ಸಂಗ್ರಹಿಸಲು ಈ ಕಾರ್ಯಕ್ರಮ ಆಯೋಜಿಸಲಾಗಿದೆ.

ಸಂಜೆ 6.30ಕ್ಕೆ `ಜಾಗತಿಕ ತಾಪಮಾನ~ ಮತ್ತು ಕರ್ನಾಟಕ ಸಂಸ್ಕೃತಿ ವಿಷಯವನ್ನಿಟ್ಟುಕೊಂಡು ಫ್ಯಾಷನ್ ಶೋ ಸಹ ಆಯೋಜಿಸಲಾಗಿದೆ. ಟಿಕೆಟ್ ಬೆಲೆ; 1500, 1000 ಮತ್ತು 500. ಆನ್‌ಲೈನ್ ಬುಕಿಂಗ್‌ಗೆ www.buzzintown.com, www.superseva.com www.bookmyshow.com,www.zomato.com.

ಸ್ಥಳ: ಗಾಯತ್ರಿ ವಿಹಾರ, ಅರಮನೆ ಮೈದಾನ. ಮಾಹಿತಿಗೆ 99454 97070.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry