ಶ್ರೇಷ್ಠ ಪ್ರದರ್ಶನ ನೀಡಿದ್ದೆವು: ಹಫೀಜ್

7

ಶ್ರೇಷ್ಠ ಪ್ರದರ್ಶನ ನೀಡಿದ್ದೆವು: ಹಫೀಜ್

Published:
Updated:

ಲಾಹೋರ್ (ಪಿಟಿಐ): ಪಾಕಿಸ್ತಾನ ತಂಡ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಅಭಿಮಾನಿಗಳ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಿಲ್ಲ ಎಂಬುದನ್ನು ನಾಯಕ ಮೊಹಮ್ಮದ್ ಹಫೀಜ್ ಒಪ್ಪಿಕೊಂಡಿದ್ದಾರೆ. ಆದರೆ ತಂಡದ ಆಟಗಾರರು ಟೂರ್ನಿಯಲ್ಲಿ ತಮ್ಮಿಂದಾದ ಶ್ರೇಷ್ಠ ಆಟ ತೋರಿದ್ದಾರೆ ಎಂದು ನುಡಿದಿದ್ದಾರೆ.ಸೆಮಿಫೈನಲ್‌ನಲ್ಲಿ ಶ್ರೀಲಂಕಾ ಎದುರು ಸೋಲು ಅನುಭವಿಸಿದ್ದ ಪಾಕ್ ತಂಡದ ಆಟಗಾರರು ಶನಿವಾರ ತವರಿಗೆ ಆಗಮಿಸಿದ್ದರು. `ಪಾಕ್ ಜನತೆ ಟ್ವೆಂಟಿ-20 ವಿಶ್ವಕಪ್ ಟೂರ್ನಿಯ ಪಂದ್ಯಗಳನ್ನು ಬಹಳ ಆಸಕ್ತಿಯಿಂದ ವೀಕ್ಷಿಸುತ್ತಿದ್ದರು. ಮಾತ್ರವಲ್ಲ ನಾವು ಫೈನಲ್ ಪ್ರವೇಶಿಸಬೇಕೆಂಬುದು ಎಲ್ಲ ಬಯಕೆಯಾಗಿತ್ತು.ಆದರೆ ಶ್ರೇಷ್ಠ ಪ್ರದರ್ಶನ ನೀಡಿದ ಲಂಕಾ ಅರ್ಹವಾಗಿ ಫೈನಲ್ ಪ್ರವೇಶಿಸಿತು~ ಎಂದು ಹಫೀಜ್ ಭಾನುವಾರ ಹೇಳಿದ್ದಾರೆ. `ಆಟಗಾರರು ನೀಡಿದ ಪ್ರದರ್ಶನದಿಂದ ತೃಪ್ತಿಯಿದೆ. ಆದರೆ ನಿರ್ಣಾಯಕ ಹಂತದಲ್ಲಿ ಎಡವಿದ್ದು ನಿರಾಸೆ ಉಂಟುಮಾಡಿದೆ~ ಎಂದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry