ಶ್ರೇಷ್ಠ ಸಾಧಕರ ಚಿಂತನೆಗೆ ಪ್ರಚಾರ ಅಗತ್ಯ

7

ಶ್ರೇಷ್ಠ ಸಾಧಕರ ಚಿಂತನೆಗೆ ಪ್ರಚಾರ ಅಗತ್ಯ

Published:
Updated:

ಕೊಲರಾಡೋ (ಅಮೆರಿಕ):`ಭಾರತ ಮತ್ತು ಕರ್ನಾಟಕದ ಶ್ರೇಷ್ಠ ಸಾಧಕರ ಚಿಂತನೆ, ಸಾಧನೆಗಳನ್ನು ಪಾಶ್ಚಾತ್ಯ ಜಗತ್ತಿಗೆ ವ್ಯಾಪಕವಾಗಿ ಪರಿಚಯಿಸುವ ಅಗತ್ಯ ಇಂದು ಬಹಳಷ್ಟು ಇದೆ~ ಎಂದು ಕೊಲರಾಡೋ ಕನ್ನಡ ಕೂಟದ ಸಂಸ್ಥಾಪಕ ಡಾ .ಪ್ರಭಾಕರ್ ರಾವ್ ಅವರು ಹೇಳಿದ್ದಾರೆ. ಅವರು ಇಲ್ಲಿ `ಹರಿದಾಸ ವಂದನ~ ಕಾರ್ಯಕ್ರಮದಲ್ಲಿ ಅರಳು ಮಲ್ಲಿಗೆ ಪಾರ್ಥಸಾರಥಿ ಅವರಿಗೆ `ಕೊಲರಾಡೋ ಕನ್ನಡ ಪ್ರಶಸ್ತಿ~ ಮತ್ತು 1,50,001 ರೂಪಾಯಿ  ನೀಡಿ ಗೌರವಿಸಿ ಮಾತನಾಡಿದರು. ಅಮೆರಿಕದ ವಿವಿಧ ರಾಜ್ಯಗಳಲ್ಲಿ ಪಾರ್ಥಸಾರಥಿ ಅವರು ಸೆಪ್ಟೆಂಬರ್ ತಿಂಗಳಿಂದ ಅನೇಕ ಉಪನ್ಯಾಸಗಳನ್ನು ನೀಡಿದ್ದು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಜಾಗೃತಿ ಮೂಡಿಸಿರುವುದನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ ಎಂದರು.ಅವರು ಶ್ರೇಷ್ಠ ಸಾಧಕರ ಚಿಂತನೆ, ಸಾಧನೆ, ವಿಚಾರಸರಣಿಗಳನ್ನು ಪಾಶ್ಚಾತ್ಯ ಜಗತ್ತಿಗೆ ವ್ಯಾಪಕವಾಗಿ ಪರಿಚಯಿಸುವ ಕೆಲಸವನ್ನು ಮಾಡಿದ್ದಾರೆ. ಅವರ ಇಂಗ್ಲಿಷ್ ಗ್ರಂಥ `ವಿಷ್ಣು ಸಹಸ್ರನಾಮ~ ಕೃತಿ ಈಗಾಗಲೇ 13 ರಾಷ್ಟ್ರಗಳಲ್ಲಿ ಬಿಡುಗಡೆಯಾಗಿದೆ. 45 ಕನ್ನಡ ಗ್ರಂಥಗಳನ್ನು ರಚಿಸಿದ್ದಾರೆ  35 ಧ್ವನಿಮುದ್ರಿಕೆಗಳನ್ನು ಹೊರತಂದಿದ್ದಾರೆ. ಎಂದು ಅವರ ಸಾಧನೆಯನ್ನು ಪ್ರಭಾಕರ್ ರಾವ್ ವಿವರಿಸಿದರು. ಪ್ರಶಸ್ತಿ ಸ್ವೀಕರಿಸಿದ ಅರಳುಮಲ್ಲಿಗೆ ಪಾರ್ಥಸಾರಥಿ ಅವರು ಹರಿದಾಸರು ಮುಖ್ಯವಾಗಿ ಪುರಂದರದಾಸರು ನೀಡಿದ ಕೊಡುಗೆಯನ್ನು ವಿಶೇಷವಾಗಿ ಪ್ರಸ್ತಾಪಿಸಿದರು. ಒಬ್ಬ ವ್ಯಕ್ತಿ ಬರೆದ ಹಾಡನ್ನು ಐದು ಶತಮಾನಗಳ ಕಾಲ ಜನರು ಹೇಳುತ್ತಾ ಸಾಂಸ್ಕೃತಿಕ ಸವಿ ಸವಿದರೆ ಅದು ಪುರಂದರದಾಸರ `ಭಾಗ್ಯದ ಲಕ್ಷ್ಮಿ ಬಾರಮ್ಮ~ ಎನ್ನುವ ಹಾಡು ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry