ಶ್ವಾನಭಾಷೆ ಅರ್ಥೈಸುವ ಸಾಧನ

7

ಶ್ವಾನಭಾಷೆ ಅರ್ಥೈಸುವ ಸಾಧನ

Published:
Updated:
ಶ್ವಾನಭಾಷೆ ಅರ್ಥೈಸುವ ಸಾಧನ

ಸಹಜವಾಗಿ ಮನುಷ್ಯ ಇತರರಿಗೆ ಕಲಿಸಲು ಬೇಗ ಮುಂದಾಗುತ್ತಾನೆ. ಆದರೆ ಅದೇ ತಾನು ಕಲಿಯಬೇಕು ಎಂದಾಗ ಅಥವಾ ಯಾರಾದರೂ ಕಲಿಸಲು ಬಂದರೆ ಅಷ್ಟು ಸುಲಭದಲ್ಲಿ ಒಪ್ಪಿಕೊಳ್ಳುವುದಿಲ್ಲ. ಪ್ರಾಣಿಗಳ ವಿಷಯದಲ್ಲಿಯಂತೂ ಕಲಿಸುವ ವಿಚಾರದಲ್ಲಿ ಮನುಷ್ಯ ತುಸು ದಬ್ಬಾಳಿಕೆ ಮಾಡುವುದೇ ಹೆಚ್ಚು. ಇಂತಹ ಪ್ರಕರಣಗಳಿಗೆ ಮನುಷ್ಯರ ನೆಚ್ಚಿನ ಸಾಕುಪ್ರಾಣಿ ನಾಯಿಯ ಪಜೀತಿಯೇ ಉತ್ತಮ ಉದಾಹರಣೆ.ಈ ಸೂಕ್ಷ್ಮ ಮನಸ್ಥಿತಿಯ ಪ್ರಾಣಿಯನ್ನು ಅರ್ಥ ಮಾಡಿಕೊಳ್ಳುವಲ್ಲಿ ಮನುಷ್ಯ ಈಗಲೂ ಬಹಳ ಹಿಂದೆ ಬಿದ್ದಿದ್ದಾನೆ ಎನ್ನಲೇಬೇಕು. ಕೆಲವೊಮ್ಮೆ ಆತನಿಗೆ, ಏಕೆ ತನ್ನ ನೆಚ್ಚಿನ ನಾಯಿ ಅತಿಯಾಗಿ ಬೊಗಳುತ್ತಿದೆ? ಎಂಬುದೇ ಅರ್ಥವಾಗದೆ ಕೋಲು ಹಿಡಿದು ಗದರಿಸಿ ಸುಮ್ಮನಾಗಿಸುತ್ತಾನೆ.ಇಂತಹ ಸಂದರ್ಭಗಳನ್ನು ಅಧ್ಯಯನ ನಡೆಸಿದ ತಜ್ಞರು ನಾಯಿ ಭಾಷೆ ಅರ್ಥ ಮಾಡಿಕೊಂಡರೆ, ಮನುಷ್ಯ ಮತ್ತು ಪ್ರಾಣಿಗಳ ನಡುವಿನ ಸಂವಹನಕ್ಕೆ ಹೊಸ ಮಾರ್ಗ ಕಂಡುಕೊಳ್ಳಬಹುದು ಎಂದು ಅರಿತುಕೊಂಡರು. ಹೀಗಾಗಿ ಮನುಷ್ಯ ಮತ್ತು ನಾಯಿಯ ನಡುವಿನ ಪ್ರೀತಿ, ಆತ್ಮೀಯತೆ, ನಂಬಿಕೆ ಮತ್ತಷ್ಟು ಗಟ್ಟಿಗೊಳಿಸಲು ಸಾಧ್ಯವಾಗುವಂತಹ ‘ಶ್ವಾನ ಭಾಷೆ’ಯನ್ನು  ಅರ್ಥ ಮಾಡಿಕೊಳ್ಳುವ ಸಾಧನವೊಂದನ್ನು ತಜ್ಞರು ಅಭಿವೃದ್ಧಿಪಡಿಸಿದ್ದಾರೆ.ಇನ್ನು ಮುಂದೆ ಮಾಲೀಕರು ತಮ್ಮ ‘ನಾಯಿ ಸುಮ್ಮನೆ ಬೊಗಳುತ್ತಿದೆ’ ಎನ್ನುವಂತಿಲ್ಲ, ಅದರ ಪ್ರತೀ ಬೊಗಳುವಿಕೆಗೂ ಒಂದು ನಿರ್ದಿಷ್ಟ ಅರ್ಥವಿರುತ್ತದೆ. ಅದು ಏನು ಎಂಬುದನ್ನು ನಮ್ಮ ಈ ನೂತನ ‘No More Woof’ ಹೆಸರಿನ ಸಾಧನ ತಿಳಿಸುತ್ತದೆ ಎನ್ನುತ್ತಾರೆ ಈ ಸಾಧನವನ್ನು ವಿನ್ಯಾಸಗೊಳಿ ಸಿರುವ ಸ್ವೀಡನ್ ಮೂಲದ ನಾರ್ಡಿಕ್ ಸೊಸೈಟಿ ಫಾರ್ ಇನ್‌ವೆನ್ಶನ್ ಅಂಡ್ ಡಿಸ್ಕವರಿ ತಂಡ.ಸಂಗೀತ ಕೇಳಲು ಬಳಸುವಂತಹ ಮಾದರಿಯ ಹಗುರವಾದ ಹೆಡ್‌ಸೆಟ್ ಒಂದನ್ನು ವಿಶೇಷವಾಗಿ ನಾಯಿಗೆಂದೇ ವಿನ್ಯಾಸಗೊಳಿಸಲಾಗಿದೆ. ಇದಕ್ಕೆ ಸಂವೇದಕ (sensors) ಅಳವಡಿಸಿದ್ದು, ನಾಯಿಯ ಮೆದುಳಿನಲ್ಲಿ ನಡೆಯುವ ವಿದ್ಯುತ್ ಚಟುವಟಿಕೆಗಳನ್ನು (electrical activity - electro encephalo gram; EAEG)) ಗ್ರಹಿಸುತ್ತದೆ. ಹೀಗೆ ಪಡೆದ ಸಂದೇಶವನ್ನು ರಾಸ್‌ಬೆರ್ರಿ ಪೈ ಕಂಪ್ಯೂಟರ್ ಮೂಲಕ ಭಾಷಾಂತರಿಸಿ, ಅದನ್ನು ಸಣ್ಣ ಸ್ಪೀಕರ್‌ನಲ್ಲಿ ಕೇಳುವ ವ್ಯವಸ್ಥೆ ಮಾಡಲಾಗಿದೆ.ನಾಯಿ ಭಿನ್ನ ರೀತಿ ಬೊಗಳಿದಾಗ, ಅದರ ಮೆದುಳಿನಲ್ಲಿನ ತರಂಗಗಳನ್ನು ‘ಹಸಿವಾಗಿದೆ’ ಅಥವಾ ‘ಆ ವ್ಯಕ್ತಿ ಯಾರು’? ಎಂಬಂತೆ ವಿಶ್ಲೇಷಿಸುವ ಮತ್ತು ಕೆಲವು ಆಲೋಚನೆಗಳನ್ನು ಮೂಲ ಇಂಗ್ಲಿಷ್ ಭಾಷೆಗೆ ಭಾಷಾಂತರಿಸಬಲ್ಲ ಸಾಮರ್ಥ್ಯ ವನ್ನು ಈ ವಿದ್ಯುನ್ಮಾನ ಸಾಧನ ಹೊಂದಿದೆ. ಈ ಸಾಧನ ಇನ್ನೂ ಪ್ರಾಥಮಿಕ ಹಂತದಲ್ಲಿದ್ದು ಇನ್ನೂ ಹೆಚ್ಚಿನ ವೈಜ್ಞಾನಿಕ ಪ್ರಯತ್ನ ಗಳಿಂದ ಶೀಘ್ರವೇ ಪ್ರಾಣಿಗಳು ಮತ್ತು ಮನುಷ್ಯನ ನಡುವಿನ ಸಂವಹನ ಸಮಸ್ಯೆ ಪರಿಹರಿಸಬಹುದು ಎಂದು ತಜ್ಞರ ತಂಡವು www.Indiegogo.comನಲ್ಲಿ ತಿಳಿಸಿದೆ.ಒಂದೊಮ್ಮೆ ಈ ಸಾಧನ  ಸಂಪೂರ್ಣ ಯಶಸ್ವಿಯಾದಲ್ಲಿ ಏಪ್ರಿಲ್‌ ನಂತರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗು ವುದು. ಆ ಮೂಲಕ ವಿಶ್ವದಾದ್ಯಂತ ಇರುವ ಸಾಕುನಾಯಿಗಳ ಮಾಲಿಕರಿಗೆ ತಲುಪಿಸಲು  ಯತ್ನಿಸಲಾಗುವುದು ಎಂದಿದ್ದಾರೆ.ಐದು ವರ್ಷದಲ್ಲಿ ಈ ಸಾಧನವು ಸಾಕುಪ್ರಾಣಿಗಳು ಮತ್ತು ಪ್ರಾಣಿಗಳ ಜತೆಗಿನ ನಮ್ಮ ಸಂಬಂಧದಲ್ಲಿ ಹೊಸ ಕ್ರಾಂತಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ನಾಯಿ, ಡಾಲ್ಫಿನ್, ಮಂಗ ಮತ್ತು ಇತರ ಪ್ರಾಣಿಗಳ ಜತೆ ಸಂವಹನ ನಡೆಸಬೇಕೆನ್ನುವ ಮನುಷ್ಯನ ಶತಮಾನಗಳಿಂದಲೂ ಪ್ರಯತ್ನ ನಡೆಸುತ್ತಿದ್ದಾನೆ. ಇದೀಗ ತಜ್ಞರು ಕಂಡುಹಿಡಿದಿರುವ ಈ ಸಾಧನ ಬಳಕೆಗೆ ಬಂದಲ್ಲಿ ಪ್ರಾಣಿಗಳ ಜತೆಗಿನ ಸಂವಹನ ಕ್ಷೇತ್ರದಲ್ಲಿ ಹೆಚ್ಚು ಪರಿಣಾಮಕಾರಿ ಎನಿಸಲಿದೆ ಎಂದು ಡಾ. ಡೂಲಿಟಲ್ ಅಭಿಪ್ರಾಯಪಟ್ಟಿದ್ದಾರೆ.ಈ ಮೊದಲು ಡಾಲ್ಫಿನ್‌ಗಳು ಹೊರಡಿಸುವ ಹೆಚ್ಚಿನ ಮತ್ತು ಕಡಿಮೆ ಕಂಪನಾಂಕಗಳ ಶಬ್ದಗಳನ್ನು ಅರಿಯಲು ಮತ್ತು ಅವು ತಮ್ಮ ನಡುವೆ ಸಂವಹನ ನಡೆಸಲು ಹಾಗೂ ಆಹಾರವನ್ನು ಹುಡುಕಲು ಬಳಸುವ ಪ್ರತಿಧ್ವನಿ ವ್ಯವಸ್ಥೆಯನ್ನು ಪತ್ತೆ ಮಾಡಲು ತಜ್ಞರು ಇತ್ತೀಚೆಗೆ ಸ್ಪೀಕರ್ ಒಂದನ್ನು ಅಭಿವೃದ್ಧಿಪಡಿಸಿದ್ದರು.ಸಂಶೋಧಕರು ಮೊದಲು ನಿರ್ದಿಷ್ಟವಾದ ಧ್ವನಿ ಸರಣಿಯನ್ನು ಸ್ಪೀಕರ್ ಮೂಲಕ ಹರಿಬಿಡುವ ಮೂಲಕ ಡಾಲ್ಫಿನ್‌ಗಳ ಪ್ರತಿಕ್ರಿಯೆಯನ್ನು ದಾಖಲು ಮಾಡಿದರು. ಹೀಗೆ ಪದೇ ಪದೇ ಸ್ವೀಕರ್‌ನಿಂದ ನಿರ್ದಿಷ್ಟ ಧ್ವನಿ ಹೊರಡಿಸಿ ಪ್ರತಿಕ್ರಿಯೆ ಪಡೆಯುವ ಮೂಲಕ ಅವು ಏನು ಹೇಳುತ್ತಿವೆ ಎಂಬುದನ್ನು ಅರಿಯುವ ಪ್ರಯತ್ನ ಮಾಡಿದರು. ಇದರಿಂದ ಮನುಷ್ಯ ಮತ್ತು ಡಾಲ್ಫಿನ್ ಮಧ್ಯೆ ಸಂವಹನದ ಸಾಧ್ಯತೆಯನ್ನು ಪತ್ತೆಹಚ್ಚಿದರು ಎಂದು ಅವರು ತಿಳಿಸಿದ್ದಾರೆ.ಡಾಲ್ಫಿನ್‌ನಂತಹ ಜೀವಿಯ ಸಂವಹನ ಭಾಷೆ ಅರಿಯುವುದು ಕಷ್ಟ. ಅದು ಹೊರಡಿಸುವ ಶಬ್ಧಗಳ ಬಗ್ಗೆ  ಸ್ವಲ್ಪ್ಪ ಮಾತ್ರ ತಿಳಿದುಕೊಂಡಿದ್ದೇವೆ. ಇದೀಗ ಈ ಹೆಡ್‌ಸೆಟ್ ಮಾದರಿಯ ನೂತನ ಸಾಧನದಿಂದ ಡಾಲ್ಫಿನ್‌ಗಳ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ನಡೆಸಲು ಸಹಾಯ ಮಾಡಬಲ್ಲದು ಎಂದು ನ್ಯೂ ಕಾಲೇಜ್ ಆಫ್ ಫ್ಲೋರಿಡಾದ ಮನಃಶಾಸ್ತ್ರಜ್ಞ ಹೈಡಿ ಹಾರ್ಲೆ ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry