ಮಂಗಳವಾರ, ಮೇ 11, 2021
25 °C

ಶ್ವೇತಭವನದಲ್ಲಿ ಧಾರ್ಮಿಕ ಸಂವಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಅಮೆರಿಕದ ಸಾಮಾಜಿಕ- ರಾಜಕೀಯ ಪರಿಸರದಲ್ಲಿ ಹಿಂದೂ, ಬೌದ್ಧ, ಸಿಖ್ ಹಾಗೂ ಜೈನ ಸಮುದಾಯಗಳ ನಾಯಕರ ಪಾತ್ರ ಹೆಚ್ಚಿರುವ ಹಿನ್ನೆಲೆಯಲ್ಲಿ ಅವರ ಸಮಸ್ಯೆ ಮತ್ತಿತರ ವಿಷಯಗಳ ಬಗ್ಗೆ ಚರ್ಚಿಸಲು ಶ್ವೇತಭವನದಲ್ಲಿ `ಧಾರ್ಮಿಕ ಸಂವಾದ~ ಏರ್ಪಡಿಸ ಲಾಗಿತ್ತು.

ಸಭೆಯನ್ನುದ್ದೇಶಿಸಿ ಮಾತನಾಡಿದ ಶ್ವೇತಭವನ ಸಾರ್ವಜನಿಕ ಸೇವಾ ವಿಭಾಗದ ಸಹನಿರ್ದೇಶಕ ಪಾಲ್ ಮಾಂಟೆಯಿರೊ, `ಎಲ್ಲರಂತೆ ಅಮೆರಿಕದ ಧಾರ್ಮಿಕ ಸಮುದಾಯಗಳ ನಾಯಕರು ಕೂಡ ಆರೋಗ್ಯ ರಕ್ಷಣೆ, ಭದ್ರತೆ ಮತ್ತಿತರ ವಿಷಯಗಳಲ್ಲಿ ಆಸಕ್ತಿ ಹೊಂದಿದ್ದಾರೆ~ ಎಂದು ತಿಳಿಸಿದರು.

`ಪೂರ್ವಾಂತ್ಯ ರಾಷ್ಟ್ರಗಳಲ್ಲಿ ಧಾರ್ಮಿಕ ಸಂಪ್ರದಾಯಗಳು ಸಮಾನತೆಯನ್ನು ಸಾರುತ್ತವೆ. ಅಂಥ ಸಂಪ್ರದಾಯಗಳನ್ನು ನಾವು ಅರ್ಥ ಮಾಡಿಕೊಂಡು, ಪರಸ್ಪರ ಹೇಗೆ ಅಳವಡಿಸಿಕೊಳ್ಳಬೇಕೆಂದು ಚಿಂತಿಸಬೇಕು~ ಎಂಬುದಾಗಿ ಅಮೆರಿಕದ ಹಿಂದೂ ಸೇವಾ ದತ್ತಿ ಸಂಸ್ಥೆಯ ಅಂಜು ಭಾರ್ಗವ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.