ಶನಿವಾರ, ಫೆಬ್ರವರಿ 27, 2021
28 °C
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ

ಕೆಲ ಷರತ್ತಿಗೊಪ್ಪಿದರೆ 15 ನಿಮಿಷಗಳಲ್ಲಿ ಜಿಎಸ್‌ಟಿ ಪಾಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಲ ಷರತ್ತಿಗೊಪ್ಪಿದರೆ 15 ನಿಮಿಷಗಳಲ್ಲಿ ಜಿಎಸ್‌ಟಿ ಪಾಸ್‌

ಮುಂಬೈ (ಪಿಟಿಐ): ಪಕ್ಷದ ಷರತ್ತುಗಳನ್ನು ನರೇಂದ್ರ ಮೋದಿ ಸರ್ಕಾರವು ಒಪ್ಪಿದರೆ, ಕೇವಲ ‘15 ನಿಮಿಷಗಳಲ್ಲಿ’ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಮಸೂದೆಗೆ ಸಂಸತ್ತಿನಲ್ಲಿ ಅನುಮೋದನೆ ದೊರೆಯುತ್ತದೆ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಶನಿವಾರ ತಿಳಿಸಿದ್ದಾರೆ.

ಮ್ಯಾನೇಜ್‌ಮೆಂಟ್ ವಿದ್ಯಾರ್ಥಿಗಳೊಟ್ಟಿಗಿನ ಸಂವಾದದಲ್ಲಿ ರಾಹುಲ್ ಅವರು ಜಿಎಸ್‌ಟಿ ಜಾರಿ ವಿಷಯದಲ್ಲಿ ವಿರೋಧ ಪಕ್ಷಗಳ ಆತಂಕಗಳನ್ನು ಪರಿಗಣಿಸದ ಮೋದಿ ಅವರ ಧೋರಣೆಯನ್ನು ಟೀಕಿಸಿದರು.

‘ಒಟ್ಟಾಗಿ ಕುರಿತು ಸಮಾಲೋಚಿಸಿದರೆ ಜಿಎಸ್‌ಟಿ ವಿಷಯದಲ್ಲಿ ‌ಸಂಧಾನ ಸಾಧ್ಯವಿದೆ. ಆದರೆ, ಸರ್ಕಾರಕ್ಕೆ ಹಾಗೆ ಮಾಡುವ ಮನಸಿಲ್ಲ. ಷರತ್ತುಗಳನ್ನು ಒಪ್ಪಿದ ದಿನವೇ ಸಂಸತ್ತಿನಲ್ಲಿ ನಾವು ಜಿಎಸ್‌ಟಿಗೆ ಅನುಮೋದನೆ ನೀಡುತ್ತೇವೆ. ಅದಕ್ಕೆ ಬರಿ 15 ನಿಮಿಷಗಳು ಸಾಕು’ ಎಂದು ರಾಹುಲ್ ನುಡಿದಿದ್ದಾರೆ.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಟಾರ್ಟ್‌ಅಪ್‌ ಯೋಜನೆಯನ್ನು ಟೀಕಿಸಿದ ಅವರು, ಒಂದೆಡೆ ಸ್ಟಾರ್ಟ್‌ಅಪ್‌ಗೆಳಿಗೆ ಪ್ರೇರಿಪಿಸುವುದು ಮತ್ತೊಂದೆಡೆ ‘ಅಸಹಿಷ್ಣು’ರಾಗಿರುವುದು ವಿರೋಧಾಭಾಸ ಎಂದರು.

ಭಾರತದ ಕುರಿತು ಆರ್‌ಎಸ್‌ಎಸ್ ‘ನಿಷ್ಠುರ ದೃಷ್ಟಿಕೋನ’ ಹೊಂದಿದೆ. ಆದರೆ, ಸ್ಟಾರ್ಟ್‌ಅಪ್‌ಗಳಿಗೆ ವಿಚಾರಗಳ ಮುಕ್ತ ಚಲನೆಯ ಅಗ್ಯತವಿದೆ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.