ಷೇರುಗಳ ಮರು ಖರೀದಿಗೆ ಚಿಂತನೆ

7

ಷೇರುಗಳ ಮರು ಖರೀದಿಗೆ ಚಿಂತನೆ

Published:
Updated:

ನವದೆಹಲಿ (ಪಿಟಿಐ): ಜಾಗತಿಕ ಆರ್ಥಿಕ ಅಸ್ಥಿರತೆಯಿಂದ, ಷೇರುಪೇಟೆಗಳಲ್ಲಿ ತೀವ್ರ ಏರಿಳಿತ ಮುಂದುವರೆದಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಕಂಪೆನಿಗಳು ತಮ್ಮ ಷೇರುಗಳನ್ನು ತಾವೇ ಮರು ಖರೀದಿ ಮಾಡುವ ಕುರಿತು ಚಿಂತಿಸುತ್ತಿವೆ.



ಪ್ರಸಕ್ತ ಹಣಕಾಸು ವರ್ಷದಲ್ಲಿ  ಷೇರು ವಿಕ್ರಯದ ಮೂಲಕ ಒಟ್ಟು ್ಙ40 ಸಾವಿರ ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಈ ಗುರಿ ತಲುಪಲು ಮಾರುಕಟ್ಟೆ ಪೂರಕವಾಗಿಲ್ಲ.



ಈ ಹಿನ್ನೆಲೆಯಲ್ಲಿ ಷೇರು ಮರು ಖರೀದಿಯ ಮೂಲಕ ಸರ್ಕಾರಕ್ಕೆ ನೆರವಾಗುವ ಕುರಿತು ಕಂಪೆನಿಗಳು ಚಿಂತನೆ ನಡೆಸಿವೆ ಎಂದು ಮೂಲಗಳು ತಿಳಿಸಿವೆ.



್ಙ40 ಸಾವಿರ ಕೋಟಿ ಷೇರು ವಿಕ್ರಯದ ಗುರಿಯನ್ನು ತಲುಪಲು ಇನ್ನೂ ಅನೇಕ ಸಾಧ್ಯತೆಗಳಿವೆ. ಆ ಕುರಿತೂ ಚಿಂತಿಸುತ್ತಿದ್ದೇವೆ.



 ಆದರೆ, ಸದ್ಯದ ಮಾರುಕಟ್ಟೆ ಪರಿಸ್ಥಿತಿಗಳು ಷೇರು ವಿಕ್ರಯಕ್ಕೆ ಪೂರಕವಾಗಿಲ್ಲ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಆರ್ ಗೋಪಾಲನ್ ತಿಳಿಸಿದ್ದಾರೆ.



ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ `ಸೆಬಿ~ ಸರ್ಕಾರಿ ಸ್ವಾಮ್ಯದ ಕಂಪೆನಿಗಳು ತಮ್ಮ ಷೇರುಗಳನ್ನು ತಾವೇ ಮರು ಖರೀದಿಸುವ ಅವಕಾಶ ಕಲ್ಪಿಸಿದೆ.



ಪ್ರಸಕ್ತ ಹಣಕಾಸು ವರ್ಷದಲ್ಲಿ ಪವರ್ ಫೈನಾನ್ಸ್ ಕಾರ್ಪೊರೇಷನ್‌ನ ಷೇರು ವಿಕ್ರಯದ ಮೂಲಕ ಇಲ್ಲಿಯವರೆಗ ಸರ್ಕಾರ ಕೇವಲ ್ಙ1,100 ಕೋಟಿ ಮಾತ್ರ ಸಂಗ್ರಹಿಸಿದೆ.



 ಕಳೆದ ವರ್ಷ ್ಙ40 ಸಾವಿರ ಕೋಟಿ ಗುರಿ ಇದ್ದರೂ, ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಷೇರು ವಿಕ್ರಯದ ಮೂಲಕ ಕೇವಲ ್ಙ22,763 ಕೋಟಿ ಮಾತ್ರ ಸಂಗ್ರಹವಾಗಿತ್ತು.



ಒಎನ್‌ಜಿಸಿ, ಎಸ್‌ಎಐಎಲ್, ಎಚ್‌ಸಿಎಲ್, ಎನ್‌ಬಿಸಿಸಿ ಸೇರಿದಂತೆ ಹಲವು ಕಂಪೆನಿಗಳ ಷೇರು ವಿಕ್ರಯಕ್ಕೆ ಸರ್ಕಾರ ಈಗಾಗಲೇ ಅನುಮತಿ ನೀಡಿದೆ.  ಜಾಗತಿಕ ಆರ್ಥಿಕ ಅಸ್ಥಿರತೆಯಿಂದ, ಷೇರುಪೇಟೆಗಳಲ್ಲಿ ತೀವ್ರ ಏರಿಳಿತ ಮುಂದುವರೆದಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರಿ ಸ್ವಾಮ್ಯದ ಕಂಪೆನಿಗಳು ತಮ್ಮ ಷೇರುಗಳನ್ನು ತಾವೇ ಮರು ಖರೀದಿ ಮಾಡುವ ಕುರಿತು ಚಿಂತಿಸುತ್ತಿವೆ.



ಪ್ರಸಕ್ತ ಹಣಕಾಸು ವರ್ಷದಲ್ಲಿ  ಷೇರು ವಿಕ್ರಯದ ಮೂಲಕ ಒಟ್ಟು ್ಙ40 ಸಾವಿರ ಕೋಟಿ ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಈ ಗುರಿ ತಲುಪಲು ಮಾರುಕಟ್ಟೆ ಪೂರಕವಾಗಿಲ್ಲ.



ಈ ಹಿನ್ನೆಲೆಯಲ್ಲಿ ಷೇರು ಮರು ಖರೀದಿಯ ಮೂಲಕ ಸರ್ಕಾರಕ್ಕೆ ನೆರವಾಗುವ ಕುರಿತು ಕಂಪೆನಿಗಳು ಚಿಂತನೆ ನಡೆಸಿವೆ ಎಂದು ಮೂಲಗಳು ತಿಳಿಸಿವೆ.



್ಙ40 ಸಾವಿರ ಕೋಟಿ ಷೇರು ವಿಕ್ರಯದ ಗುರಿಯನ್ನು ತಲುಪಲು ಇನ್ನೂ ಅನೇಕ ಸಾಧ್ಯತೆಗಳಿವೆ. ಆ ಕುರಿತೂ ಚಿಂತಿಸುತ್ತಿದ್ದೇವೆ.



 ಆದರೆ, ಸದ್ಯದ ಮಾರುಕಟ್ಟೆ ಪರಿಸ್ಥಿತಿಗಳು ಷೇರು ವಿಕ್ರಯಕ್ಕೆ ಪೂರಕವಾಗಿಲ್ಲ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಆರ್ ಗೋಪಾಲನ್ ತಿಳಿಸಿದ್ದಾರೆ.



ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ `ಸೆಬಿ~ ಸರ್ಕಾರಿ ಸ್ವಾಮ್ಯದ ಕಂಪೆನಿಗಳು ತಮ್ಮ ಷೇರುಗಳನ್ನು ತಾವೇ ಮರು ಖರೀದಿಸುವ ಅವಕಾಶ ಕಲ್ಪಿಸಿದೆ.



ಪ್ರಸಕ್ತ ಹಣಕಾಸು ವರ್ಷದಲ್ಲಿ ಪವರ್ ಫೈನಾನ್ಸ್ ಕಾರ್ಪೊರೇಷನ್‌ನ ಷೇರು ವಿಕ್ರಯದ ಮೂಲಕ ಇಲ್ಲಿಯವರೆಗ ಸರ್ಕಾರ ಕೇವಲ ್ಙ1,100 ಕೋಟಿ ಮಾತ್ರ ಸಂಗ್ರಹಿಸಿದೆ.



 ಕಳೆದ ವರ್ಷ ್ಙ40 ಸಾವಿರ ಕೋಟಿ ಗುರಿ ಇದ್ದರೂ, ಸರ್ಕಾರಿ ಸ್ವಾಮ್ಯದ ಕಂಪೆನಿಗಳ ಷೇರು ವಿಕ್ರಯದ ಮೂಲಕ ಕೇವಲ ್ಙ22,763 ಕೋಟಿ ಮಾತ್ರ ಸಂಗ್ರಹವಾಗಿತ್ತು.



ಒಎನ್‌ಜಿಸಿ, ಎಸ್‌ಎಐಎಲ್, ಎಚ್‌ಸಿಎಲ್, ಎನ್‌ಬಿಸಿಸಿ ಸೇರಿದಂತೆ ಹಲವು ಕಂಪೆನಿಗಳ ಷೇರು ವಿಕ್ರಯಕ್ಕೆ ಸರ್ಕಾರ ಈಗಾಗಲೇ ಅನುಮತಿ ನೀಡಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry