ಷೇರುಪೇಟೆಗೆ ರೂ 3381 ಕೋಟಿ

7

ಷೇರುಪೇಟೆಗೆ ರೂ 3381 ಕೋಟಿ

Published:
Updated:

ನವದೆಹಲಿ(ಪಿಟಿಐ): ದೇಶದ ಷೇರುಪೇಟೆಗೆ ಸಾಗರೋತ್ತರ ಹೂಡಿಕೆದಾರರಿಂದ ಕಳೆದ ವಾರ ರೂ3,381 ಕೋಟಿ ಹರಿದುಬಂದಿದೆ. ಇದು ಕೇಂದ್ರ ಸರ್ಕಾರ ಇತ್ತೀಚೆಗೆ ಕೈಗೊಂಡ ಸುಧಾರಣಾ ಕ್ರಮಗಳ ಪರಿಣಾಮವಾಗಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಅಕ್ಟೋಬರ್ 1ರಿಂದ 5ರ ನಡುವೆ ಭಾರತದ ಷೇರುಪೇಟೆಯಲ್ಲಿ ರೂ13,094 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.ಇದೇ ವೇಳೆ,ರೂ 9, 714 ಕೋಟಿ ಬೆಲೆಯ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಈ ವರ್ಷದಲ್ಲಿ ಈವರೆಗೆ `ಎಫ್‌ಐಐ~ಗಳಿಂದ ದೇಶದ ಷೇರುಪೇಟೆಯಲ್ಲಿ ಒಟ್ಟು ರೂ85,711 ಕೋಟಿ ಹೂಡಿಕೆ ಆದಂತಾಗಿದೆ.`ಕೇಂದ್ರದ ಸಚಿವ ಸಂಪುಟ ವಿಮೆ ಕ್ಷೇತ್ರದಲ್ಲಿನ ವಿದೇಶಿ ನೇರ ಹೂಡಿಕೆ ಮಿತಿಯನ್ನು ಶೇ 26ರಿಂದ 49ಕ್ಕೆ ಹೆಚ್ಚಿಸಿರುವುದು ಮತ್ತು ಪಿಂಚಣಿ ಕ್ಷೇತ್ರದಲ್ಲಿಯೂ `ಎಫ್‌ಡಿಐ~ಗೆ ಅವಕಾಶ ಮಾಡಿಕೊಟ್ಟಿರುವುದು ವಿದೇಶಿ ಹೂಡಿಕೆದಾರರಲ್ಲಿ ಇಲ್ಲಿನ ಮಾರುಕಟ್ಟೆ ಬಗ್ಗೆ ಉತ್ತಮ ಅಭಿಪ್ರಾಯ ಮೂಡುವಂತೆ ಮಾಡಿದೆ. ಹಾಗಾಗಿ, ಹೊರಗಿನಿಂದ ಬರುವ ಹೂಡಿಕೆ ಪ್ರಮಾಣದಲ್ಲಿ ಭಾರಿ ಹೆಚ್ಚಳ ಕಂಡುಬಂದಿದೆ~ ಎಂದು `ಸಿಎನ್‌ಐ~ ಸಂಶೋಧನೆ ವಿಭಾಗ ಮುಖ್ಯಸ್ಥ ಕಿಶೋರ್ ಓಸ್ವಾಲ್ ಅಭಿಪ್ರಾಯಪಟ್ಟಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry