ಷೇರುಪೇಟೆಯಲ್ಲಿ ಖರೀದಿ ಭರಾಟೆ

7

ಷೇರುಪೇಟೆಯಲ್ಲಿ ಖರೀದಿ ಭರಾಟೆ

Published:
Updated:

ಮುಂಬೈ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಮಂಗಳವಾರದ ವಹಿವಾಟಿನಲ್ಲಿ 76 ಅಂಶಗಳಷ್ಟು ಚೇತರಿಕೆ ಕಂಡಿದ್ದು, ಕಳೆದ 6 ತಿಂಗಳಲ್ಲೇ ಗರಿಷ್ಠ ಮಟ್ಟ 17,848 ಅಂಶಗಳಿಗೆ ಏರಿಕೆ ಪಡೆದಿದೆ.

 

ಜನವರಿ ತಿಂಗಳ ಮಾಸಿಕ ಹಣದುಬ್ಬರ ದರ ಕಳೆದ ಎರಡು ವರ್ಷಗಳ ಹಿಂದಿನ ಮಟ್ಟ ಶೇ 6.55ಕ್ಕೆ ಕುಸಿದಿರುವುದು ಷೇರುಪೇಟೆಯಲ್ಲಿ ಹೊಸ ಅಲೆ ಎಬ್ಬಿಸಿದೆ. ಹಣದುಬ್ಬರ ಇಳಿದಿರುವುದರಿಂದ ಭಾರತೀಯ ರಿಸರ್ವ್ ಬ್ಯಾಂಕ್ ಮುಂದಿನ ಹಣಕಾಸು ಪರಾಮರ್ಶೆಯಲ್ಲಿ ಅಲ್ಪಾವಧಿ ಬಡ್ಡಿ ದರ ತಗ್ಗಿಸಲಿದೆ ಎನ್ನುವ ಸಂಗತಿ ವಹಿವಾಟಿಗೆ ಬಲ ತುಂಬಿದೆ. ಕಳೆದ ಆಗಸ್ಟ್ 3ರ ನಂತರ ದಾಖಲಾಗಿರುವ ಗರಿಷ್ಠ ಏರಿಕೆ ಇದಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry