ಷೇರುಪೇಟೆಯಲ್ಲಿ ಮತ್ತೆ ಕರಡಿ ಕುಣಿತ

7

ಷೇರುಪೇಟೆಯಲ್ಲಿ ಮತ್ತೆ ಕರಡಿ ಕುಣಿತ

Published:
Updated:

ಮುಂಬೈ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಗುರುವಾರದ ವಹಿವಾಟಿನಲ್ಲಿ 546 ಅಂಶಗಳಿಗೆ ಎರವಾಗಿದ್ದು, ಕಳೆದ 18 ತಿಂಗಳಲ್ಲಿ ದಿನವೊಂದರ ಗರಿಷ್ಠ ಪ್ರಮಾಣದ ಕುಸಿತ ಇದಾಗಿದೆ. ಮಧ್ಯಪ್ರಾಚ್ಯ ದೇಶಗಳಲ್ಲಿನ ರಾಜಕೀಯ ಅನಿಶ್ಚಿತತೆ ಮತ್ತು ಹಣದುಬ್ಬರ ಒತ್ತಡಗಳಿಗೆ ಸಂಬಂಧಿಸಿದ ಆತಂಕದ ಫಲವಾಗಿ ಹೂಡಿಕೆದಾರರು ಷೇರುಗಳನ್ನು ಭಾರಿ ಪ್ರಮಾಣದಲ್ಲಿ ಮಾರಾಟ ಮಾಡಲು ಮುಂದಾದರು. ಹೀಗಾಗಿ ಸೂಚ್ಯಂಕವು ಗಮನಾರ್ಹ ಕುಸಿತ ಕಂಡಿತು. ಕಚ್ಚಾ ತೈಲ ಬೆಲೆ ಹೆಚ್ಚಳ ಮತ್ತು ರಾಜಕೀಯ ಪ್ರಕ್ಷುಬ್ಧತೆಯು ಜಾಗತಿಕ ಅರ್ಥ ವ್ಯವಸ್ಥೆಯ ಚೇತರಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿರುವುದು ಹೂಡಿಕೆದಾರರನ್ನು ನಿರುತ್ಸಾಹಗೊಳಿಸಿದೆ. ಚಾಲ್ತಿ ಖಾತೆ ಕೊರತೆ ಹೆಚ್ಚಳ, ಬ್ಯಾಂಕ್ ಬಡ್ಡಿ ದರಗಳ ಏರಿಕೆ ಮುಂತಾದ ಸ್ಥಳೀಯ ಸಂಗತಿಗಳೂ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry