ಗುರುವಾರ , ಮಾರ್ಚ್ 4, 2021
18 °C

ಷೇರುಪೇಟೆಯಲ್ಲಿ ಮಾರಾಟ ಒತ್ತಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಷೇರುಪೇಟೆಯಲ್ಲಿ ಮಾರಾಟ ಒತ್ತಡ

ಮುಂಬೈ (ಪಿಟಿಐ): ಸತತ ಮೂರು ವಹಿವಾಟು ದಿನಗಳಲ್ಲಿ ಏರಿಕೆ ದಾಖಲಿಸಿದ್ದ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು, ಬುಧವಾರದ ವಹಿವಾಟಿನಲ್ಲಿ 111 ಅಂಶಗಳನ್ನು ಕಳೆದುಕೊಂಡಿತು.

ಜಾಗತಿಕ ಪೇಟೆಯಲ್ಲಿನ ದುರ್ಬಲ ವಹಿವಾಟು ಮತ್ತು ವಾರಾಂತ್ಯದಲ್ಲಿ ಪೇಟೆಗೆ ಬಿಡುವು ಇರುವ ಕಾರಣಕ್ಕೆ ಬುಧವಾರ ಷೇರುಗಳ ಮಾರಾಟ ಒತ್ತಡ ಕಂಡುಬಂದಿತು.ರಿಯಾಲ್ಟಿ, ಲೋಹ, ಬ್ಯಾಂಕ್ ಮತ್ತು  ತೈಲಾಗಾರ ಷೇರುಗಳಲ್ಲಿ ತೀವ್ರ ಮಾರಾಟ ಒತ್ತಡ ಕಂಡು ಬಂದಿತು.

 ಈ ತಿಂಗಳ 17ರಂದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಲಿರುವ ವಾರ್ಷಿಕ ಹಣಕಾಸು ನೀತಿ ಮತ್ತು ಉದ್ದಿಮೆ ಸಂಸ್ಥೆಗಳು  ನಾಲ್ಕನೇ ತ್ರೈಮಾಸಿಕದ ಹಣಕಾಸು ಸಾಧನೆ ಪ್ರಕಟಿಸಲಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಅನುಸರಿಸುತ್ತಿರುವ  ಕಾದು ನೋಡುವ ಧೋರಣೆಯೂ ಪೇಟೆಯ ವಹಿವಾಟಿನ ಮೇಲೆ ಪರಿಣಾಮ ಬೀರಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.ಸಂವೇದಿ ಸೂಚ್ಯಂಕವು ಕೆಳಮಟ್ಟದಲ್ಲಿಯೇ ಆರಂಭಗೊಂಡು ದಿನದ ವಹಿವಾಟಿನ ಉದ್ದಕ್ಕೂ ನಕಾರಾತ್ಮಕವಾಗಿಯೇ ಚಲಿಸಿತು. ದಿನದ ಅಂತ್ಯಕ್ಕೆ 111.40 ಅಂಶಗಳಿಗೆ ಎರವಾಗಿ, 11,486 ಅಂಶಗಳೊಂದಿಗೆ ವಹಿವಾಟು ಕೊನೆಗೊಳಿಸಿತು.ಪೇಟೆಯಲ್ಲಿನ ವಹಿವಾಟಿನ ಮೊತ್ತವೂ ಗಮನಾರ್ಹವಾಗಿ ಕುಸಿದಿದೆ. ರಾಷ್ಟ್ರೀಯ ಷೇರುಪೇಟೆಯಲ್ಲಿನ (ನಿಫ್ಟಿ) ವಹಿವಾಟು ಕಳೆದ 50 ದಿನಗಳಲ್ಲಿನ ಕನಿಷ್ಠ ಮಟ್ಟವಾಗಿತ್ತು.ಮುಂಬೈ ಷೇರುಪೇಟೆ (ಬಿಎಸ್‌ಇ) ಮತ್ತು `ನಿಫ್ಟಿ~ ಗುರುವಾರ ಮತ್ತು ಶುಕ್ರವಾರ ಕಾರ್ಯನಿರ್ವಹಿಸುವುದಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.