ಭಾನುವಾರ, ಜೂನ್ 20, 2021
20 °C

ಷೇರುಪೇಟೆಯ ನೀರಸ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಬಜೆಟ್ ಹಿನ್ನೆಲೆಯಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಶುಕ್ರವಾರದ ವಹಿವಾಟಿನಲ್ಲಿ 210 ಅಂಶಗಳಷ್ಟು ಇಳಿಕೆ ದಾಖಲಿಸಿತು.ಬಜೆಟ್‌ನಲ್ಲಿ ಸೇವಾ ತೆರಿಗೆ ಮತ್ತು ಅಬಕಾರಿ ತೆರಿಗೆಯನ್ನು ಶೇ 10ರಿಂದ ಶೇ 12ಕ್ಕೆ ಹೆಚ್ಚಿಸಿದ ಹಿನ್ನೆಲೆಯಲ್ಲಿ, ದಿನದ ವಹಿವಾಟಿನಲ್ಲಿ ಲೋಹ, ಬ್ಯಾಂಕಿಂಗ್, ತೈಲ ಶುದ್ಧೀಕರಣ ಮತ್ತು  ವಿದ್ಯುತ್ ವಲಯದ  ಷೇರುಗಳು ಗರಿಷ್ಠ ಮಾರಾಟದ ಒತ್ತಡ ಎದುರಿಸಿದವು.ತೀವ್ರ ಏರಿಳಿತ ಕಂಡ ಸೂಚ್ಯಂಕ ವಹಿವಾಟಿನ ಅಂತ್ಯಕ್ಕೆ ಶೇ 1.19ರಷ್ಟು ಇಳಿಕೆಯೊಂದಿಗೆ 17,466 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು.ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಕೂಡ 62 ಅಂಶಗಳಷ್ಟು ಇಳಿದು 5,317 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.