ಷೇರುಪೇಟೆ: ಐಐಪಿ-ರೂಪಾಯಿ ಪ್ರಭಾವ ನಿರೀಕ್ಷೆ

7

ಷೇರುಪೇಟೆ: ಐಐಪಿ-ರೂಪಾಯಿ ಪ್ರಭಾವ ನಿರೀಕ್ಷೆ

Published:
Updated:
ಷೇರುಪೇಟೆ: ಐಐಪಿ-ರೂಪಾಯಿ ಪ್ರಭಾವ ನಿರೀಕ್ಷೆ

ನವದೆಹಲಿ(ಪಿಟಿಐ): ಆಗಸ್ಟ್‌ನ ಕೈಗಾರಿಕೆ ಪ್ರಗತಿ ಸೂಚ್ಯಂಕ(ಐಐಪಿ) ಮತ್ತು ಇನ್ಫೋಸಿಸ್ ಸೇರಿದಂತೆ ಪ್ರಮುಖ ಕಾರ್ಪೊರೇಟ್ ಕಂಪೆನಿಗಳ ತ್ರೈಮಾಸಿಕ ಫಲಿತಾಂಶ ಈ ವಾರ ಪ್ರಕಟಗೊಳ್ಳಲಿದ್ದು, ಷೇರುಪೇಟೆ ವಹಿವಾಟಿನ ಮೇಲೆ ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅನುಭವಿಗಳು ವಿಶ್ಲೇಷಿಸಿದ್ದಾರೆ.ಇನ್ಫೋಸಿಸ್ ಇದೇ 10ರಂದು ತ್ರೈಮಾಸಿಕ ಹಣಕಾಸು ಲೆಕ್ಕಪತ್ರ ಪ್ರಕಟಿಸಲಿದೆ. ಅದರ ಬೆನ್ನಲ್ಲೇ `ಐಐಪಿ~ ಪ್ರಗತಿ ಗತಿಯ ಅಂಕಿ-ಅಂಶ ಪ್ರಕಟಗೊಳ್ಳಲಿವೆ. ಭಾರತೀಯ ರಿವರ್ಸ್ ಬ್ಯಾಂಕ್ ಪ್ರಕಟಿಸಲಿರುವ ಹಣಕಾಸು ನೀತಿ ಮೇಲೆಯೂ `ಐಐಪಿ~ ಅಂಕಿ-ಅಂಶ ಪ್ರಭಾವ ಬೀರುವುದರಿಂದ ಇದು ಬಹಳ ಪ್ರಮುಖ ಸಂಗತಿಯಾಗಿದೆ ಎಂದು `ಬೊನಾಂಜ ಪೋರ್ಟ್‌ಪೊಲಿಯೊ~ ಸಂಸ್ಥೆ ಉಪಾಧ್ಯಕ್ಷ ರಾಕೇಶ್ ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.`ಡಾಲರ್ ಎದುರು ರೂಪಾಯಿ ಮೌಲ್ಯ ಮೇಲಕ್ಕೇರಿ ಸ್ಥಿರಗೊಂಡಿರುವುದರಿಂದ ಈ ವಾರವೂ ವಿದೇಶಿ ಸಾಂಸ್ಥಿಕ ಹೂಡಿಕೆದಾರರ(ಎಫ್‌ಐಐ) ಚಟುವಟಿಕೆ ಹೆಚ್ಚಬಹುದು. ಅಕ್ಟೋಬರ್‌ನಲ್ಲಿ ಈವರೆಗೆ ರೂ3,300 ಕೋಟಿಯಷ್ಟು `ಎಫ್‌ಐಐ~ ಹೂಡಿಕೆ ದಾಖಲಾಗಿದೆ ಎಂದು `ಗ್ರೋಥ್ ಅಂಡ್ ಸೆಕ್ಯುರಿಟೀಸ್~ ಮುಖ್ಯಸ್ಥ ಮಿಲಾನ್ ಭವಿಸಿ ವಿಶ್ಲೇಷಿಸಿದ್ದಾರೆ.ಕಳೆದ ವಾರಾಂತ್ಯದಲ್ಲಿ ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯ  ರೂ51.85ರಲ್ಲಿದ್ದಿತು. ಇದು ಕಳೆದ ಐದು ತಿಂಗಳಲ್ಲಿಯೇ ರೂಪಾಯಿಯ ಗರಿಷ್ಠ ಮೌಲ್ಯದ ಮಟ್ಟವಾಗಿದೆ.`ಸರ್ಕಾರ ಕಳೆದ ವಾರ ಪ್ರಕಟಿಸಿದ ಸರಣಿ ಆರ್ಥಿಕ ಸುಧಾರಣಾ ಕ್ರಮಗಳು ಪೇಟೆಗೆ ಸಾಕಷ್ಟು ಬಲ ತುಂಬಿವೆ.ಈ ವಾರವೂ ಇದರ ಪ್ರಭಾವ ಮುಂದುವರಿಯಬಹುದು. ಯುರೋಪ್ ಬಿಕ್ಕಟ್ಟು ಇತ್ಯರ್ಥಕ್ಕೆ ಸಂಬಂಧಿಸಿದ ಬೆಳವಣಿಗೆಗಳಿಂದ ಜಾಗತಿಕ ಷೇರುಪೇಟೆಗಳೂ ಚೇತರಿಸಿಕೊಂಡಿವೆ. ಅಮೆರಿಕದ ನಿರುದ್ಯೋಗ ಪ್ರಮಾಣ ಶೇ 7.8ಕ್ಕೆ ತಗ್ಗಿದೆ. ಈ ಎಲ್ಲ ಸಂಗತಿ ಏಷ್ಯಾ ಷೇರುಪೇಟೆಗಳ ಜಿಗಿತಕ್ಕೆ ಕಾರಣವಾಗಬಹುದು ಎಂದು ಷೇರು ದಲ್ಲಾಳಿ ಸಂಸ್ಥೆ `ಎಡಿಲ್‌ವೈಸ್ ಸೆಕ್ಯುರಿಟೀಸ್~ ಭವಿಷ್ಯ ನುಡಿದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry