ಸೋಮವಾರ, ಡಿಸೆಂಬರ್ 16, 2019
18 °C

ಷೇರುಪೇಟೆ: ಚಿನ್ನ, ತೈಲದ ಪ್ರಭಾವ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಷೇರುಪೇಟೆ: ಚಿನ್ನ, ತೈಲದ ಪ್ರಭಾವ?

ನವದೆಹಲಿ(ಪಿಟಿಐ): ಎಚ್‌ಡಿಎಫ್‌ಸಿ ಬ್ಯಾಂಕ್, ಜಿಂದಾಲ್ ಸ್ಟೀಲ್, ಹೀರೊ ಮೋಟೊ ಕಾರ್ಪ್, ಐಸಿಐಸಿಐ ಬ್ಯಾಂಕ್ ಮತ್ತು ಮಾರುತಿ ಸುಜುಕಿ ಕಂಪೆನಿಗಳು ಈ ವಾರ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿದ್ದು, ಸೂಚ್ಯಂಕ ಮತ್ತೆ ಏರಿಳಿತ ಕಾಣುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.ತೈಲ ಮತ್ತು ಚಿನ್ನದ ಬೆಲೆ ಏರಿಳಿತದ ಮೇಲೂ ಹೂಡಿಕೆದಾರರು ಗಮನ ಕೇಂದ್ರೀಕರಿಸಿದ್ದಾರೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಮತ್ತು ಚಿನ್ನದ ಧಾರಣೆ ಇಳಿದಿರುವುದರಿಂದ ಚಾಲ್ತಿ ಖಾತೆ ಕೊರತೆ(ಸಿಎಡಿ) ತಗ್ಗಲಿದೆ ಎಂಬ ವಿಶ್ಲೇಷಣೆ ಸಹ ನಡೆಯುತ್ತಿದೆ.ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಮೇ 3ರಂದು ತ್ರೈಮಾಸಿಕ ಹಣಕಾಸು ನೀತಿಯ ಪರಾಮರ್ಶೆ ಪ್ರಕಟಿಸಲಿದ್ದು, ಹಣದುಬ್ಬರ ಕಡಿಮೆ ಆಗಿರುವುದರಿಂದ ಬಡ್ಡಿದರ ಕಡಿತ ಮಾಡುವ ಸಾಧ್ಯತೆ ಇದೆ. ಈ ಅಂಶ ಕೂಡ ಷೇರುಪೇಟೆ ವಹಿವಾಟಿಗೆ ಚೇತರಿಕೆಗೆ ನೀಡಬಹುದು ಎಂದು ಇನ್ವೆಂಚರ್ ಸೆಕ್ಯುರಿಟೀಸ್ ವ್ಯವಸ್ಥಾಪಕ ನಿರ್ದೇಶಕ ನಗ್ಜಿ ಕೆ.ರೀಟಾ ಅಭಿಪ್ರಾಯಪಟ್ಟಿದ್ದಾರೆ.ಕಾರ್ಪೊರೇಟ್ ಫಲಿತಾಂಶಗಳ ಜತೆಗೆ, ಅಂತರರಾಷ್ಟ್ರೀಯ ಷೇರುಪೇಟೆಯಲ್ಲಿನ ಬೆಳವಣಿಗೆಗಳು ಈ ವಾರ ದೇಶೀಯ ಷೇರುಪೇಟೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ ಎಂಬುದು ಮಾರುಕಟ್ಟೆ ತಜ್ಞರ ಅಂದಾಜು.

ಪ್ರತಿಕ್ರಿಯಿಸಿ (+)