ಷೇರು ನಿಯಂತ್ರಣ ಮಂಡಳಿ: ಭಾವೆ ನಿವೃತ್ತಿ

7

ಷೇರು ನಿಯಂತ್ರಣ ಮಂಡಳಿ: ಭಾವೆ ನಿವೃತ್ತಿ

Published:
Updated:

ಮುಂಬೈ (ಪಿಟಿಐ): ದೇಶದ ಬಂಡವಾಳ ಮಾರುಕಟ್ಟೆಯ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿ ಮೂರು ವರ್ಷಗಳ ಕಾಲ ಅಧಿಕಾರ ನಿರ್ವಹಿಸಿದ ಚಂದ್ರಶೇಖರ್ ಭಾಸ್ಕರ್ ಭಾವೆ ಅವರು ಗುರುವಾರ ಸೇವಾ ನಿವೃತ್ತರಾದರು.ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿದ್ದ ಭಾವೆ, 1975ರ ಐಎಎಸ್ ಬ್ಯಾಚ್‌ನವರು. 2008ರ ಫೆಬ್ರುವರಿ 17ರಂದು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಷೇರುಪೇಟೆಯಲ್ಲಿ ಗಮನಾರ್ಹ ಬದಲಾವಣೆಗಳಿಗೆ ಅವರು ಕಾರಣಕರ್ತರಾಗಿದ್ದರು.ಸಿನ್ಹಾ ಹೆಗಲಿಗೆ ಹೊಣೆಗಾರಿಕೆ: ಯೂನಿಟ್ ಟ್ರಸ್ಟ್ ಆಫ್ ಇಂಡಿಯಾ  (ಯುಟಿಐ) ಮ್ಯೂಚುವಲ್ ಫಂಡ್‌ನ ಮುಖ್ಯಸ್ಥರಾಗಿದ್ದ ಅದಕ್ಕೂ ಹಿಂದೆ ಐಎಎಸ್ ಅಧಿಕಾರಿಯೂ ಆಗಿದ್ದ ಯು. ಕೆ. ಸಿನ್ಹಾ ಅವರು ಈಗ ‘ಸೆಬಿ’ಯ ಹೊಸ ಅಧ್ಯಕ್ಷರಾಗಲಿದ್ದಾರೆ. ಸಿನ್ಹಾ ಅವರು ಹೊಸ ಹೊಣೆಗಾರಿಕೆ ವಹಿಸಿಕೊಳ್ಳುವುದರಿಂದ ತೆರವಾಗುವ ಸ್ಥಾನದಲ್ಲಿ ಸಂಸ್ಥೆಯನ್ನು  ಮುನ್ನಡೆಸಲು ಸೂಕ್ತ ವ್ಯಕ್ತಿಯ ಆಯ್ಕೆ ಮಾಡಲು ಯುಟಿಐ ಎಎಂಸಿಯ ನಿರ್ದೇಶಕ ಮಂಡಳಿಯು ಶೋಧನಾ ಸಮಿತಿ ರಚಿಸಿದೆ. ಸಂಸ್ಥೆಯಲ್ಲಿಯೇ ಇರುವ ಇಲ್ಲವೇ ಸಂಸ್ಥೆಯ ಹೊರಗೆ ಇರಬಹುದಾದ ಅರ್ಹ ಅಭ್ಯರ್ಥಿ ಆಯ್ಕೆಯನ್ನು ಈ ಸಮಿತಿ ಶೀಘ್ರದಲ್ಲಿಯೇ ಪೂರ್ಣಗೊಳಿಸುವ ನಿರೀಕ್ಷೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry