ಭಾನುವಾರ, ಮೇ 16, 2021
21 °C

ಸಂಕಷ್ಟದಲ್ಲಿ ರಾಜೂರ ಸುಣ್ಣಗಾರರ ಬದುಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಧುನಿಕ ರಾಸಾಯನಿಕ ಸುಣ್ಣ-ಬಣ್ಣಗಳ ಅಬ್ಬರಕ್ಕೆ ಸಿಲುಕಿ ತಲೆಮಾರುಗಳಿಂದ ಸುಣ್ಣ ತಯಾರಿಕೆಯನ್ನೇ ಆಶ್ರಯಿಸಿಕೊಂಡು ಬದುಕು ಸಾಗಿಸುತ್ತಿದ್ದ ಕುಟುಂಬಗಳು ಸಂಕಷ್ಟಕ್ಕೊಳಗಾಗಿವೆರೋಣ ತಾಲ್ಲೂಕಿನ ಐತಿಹಾಸಿಕ ರಾಜೂರ ಗ್ರಾಮ ತಲೆಮಾರುಗಳಿಂದಲ್ಲೂ ಸುಣ್ಣ ತಯಾರಿಕೆಯಲ್ಲಿ ಅಗ್ರಸ್ಥಾನದಲ್ಲಿದೆ. . ಒಟ್ಟು 4800 ಜನ ಸಂಖ್ಯೆ ಹೊಂದಿರುವ ರಾಜೂರ ಗ್ರಾಮದಲ್ಲಿ 800 ಕ್ಕೂ ಅಧಿಕ ಸುಣ್ಣಗಾರರಿದ್ದಾರೆ. 200 ಸುಣ್ಣದ ಭಟ್ಟಿ (ಸುಣ್ಣ ತಯಾರಿಕಾ ಕೇಂದ್ರ) ಗಳ ಮೂಲಕ 150 ಕ್ಕೂ ಹೆಚ್ಚು ಸುಣ್ಣಗಾರ ಕುಟುಂಬಗಳು ಸುಣ್ಣ ತಯಾರಿಕೆಯಲ್ಲಿ `ಅಂಬಿಗ~ ಜನಾಂಗ ತೊಡಗಿದೆ.  1930 ರಿಂದ 1990 ರ ದಶಕದ ವರೆಗೆ ರಾಜೂರ ಗ್ರಾಮದಲ್ಲಿ ಸಿದ್ದಗೊಳ್ಳುವ ಸುಣ್ಣಕ್ಕೆ ಈ ಭಾಗದಲ್ಲಿ ಎಲ್ಲಿಲ್ಲದ ಬೇಡಿಕೆ. ಹೀಗಾಗಿ ಕುಟುಂಬ ಸದಸ್ಯೆರೆಲ್ಲ ಸಾಮೂಹಿಕ ಪರಿಶ್ರಮದಿಂದ ಹಗಲು ರಾತ್ರಿ ಎನ್ನದೆ ಉತ್ಸುಕತೆಯಿಂದ ಸುಣ್ಣ ತಯಾರಿಸಿ ನಿತ್ಯ ನಗರ, ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಂಚರಿಸಿ ಸುಣ್ಣ ಮಾರಾಟ ಮಾಡುತ್ತಿದ್ದರು. ಪರಿಶ್ರಮಕ್ಕೆ ತಕ್ಕ ಆದಾಯವೂ ಸುಣ್ಣಗಾರರ ಜೇಬು ಸೇರುತ್ತಿತ್ತು.         ಟ್ರ್ಯಾಕ್ಟರ್ ಸುಣ್ಣದ ಕಲ್ಲು ಖರೀದಿಗೆ 2,500 ರೂ. (ಟ್ರ್ಯಾಕ್ಟರ್ ಬಾಡಿಗೆ ಸೇರಿ) ತಗಲುತ್ತದೆ. ಸುಣ್ಣದ ಕಲ್ಲಿನಷ್ಟೇ ಅಗತ್ಯವಾಗಿರುವ ಇದ್ದಿಲಿಗೆ ಮಾರುಕಟ್ಟೆಯಲ್ಲಿ ಚೀಲವೊಂದಕ್ಕೆ 250 ರೂ ಇದೆ. ಒಂದು ಟ್ರ್ಯಾಕ್ಟರ್ ಸುಣ್ಣದ ಕಲ್ಲಿಗೆ 6,250 ರೂ. ದರದ 25 ಚೀಲ ಇದ್ದಿಲು ಬೆರೆಸಿ, ಸುಣ್ಣ ತಯಾರಿಕಾ ಘಟಕ (ಭಟ್ಟಿ) ದಲ್ಲಿ ಕನಿಷ್ಟ 8 ರಿಂದ 10 ಗಂಟೆಗಳ ಕಾಲ ಬೇಯಿಸಿದಾಗ ಅತ್ಯುತ್ತಮ ಸುಣ್ಣ ತಯಾರಾಗುತ್ತದೆ. ಒಂದು ಟ್ರ್ಯಾಕ್ಟರ್ ಸುಣ್ಣದ ಕಲ್ಲು ಹಾಗೂ 25 ಚೀಲ ಇದ್ದಿಲು ಸೇರಿಸಿ 18 ಕ್ವಿಂಟಲ್ ಸುಣ್ಣ ತಯಾರು ಮಾಡಲಾಗುತ್ತದೆ.ವರ್ಷದಿಂದ ವರ್ಷಕ್ಕೆ ಸುಣ್ಣಗಾರರು ಕುಟುಂಬಗಳು ವಿಸ್ತಾರಗೊಳ್ಳುತ್ತಿರುವ ರಾಜೂರ ಗ್ರಾಮದಲ್ಲಿ ತಲೆಮಾರುಗಳ ಹಿಂದೆ ಗ್ರಾ.ಪಂ ನವರು ನೀಡಿದ 70*80 ವಿಸ್ತೀರ್ಣದ ಜಾಗೆಯಲ್ಲಿಯೇ 150 ಕ್ಕೂ ಅಧಿಕ ಭಟ್ಟಿ (ಸುಣ್ಣ ತಯಾರಿಕಾ ಘಟಕ) ಗಳಿವೆ. ಹೀಗಾಗಿ ಜಾಗ ಇಕ್ಕಟ್ಟಾಗಿದೆ.ಸುಣ್ಣಗಾರರ ದುಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಶಾಸಕ ಕಳಕಪ್ಪ ಬಂಡಿ ಸುವರ್ಣ ಗ್ರಾಮ ಯೋಜನೆಯಡಿಯಲ್ಲಿ ಗ್ರಾಮದ ಸುಣ್ಣಗಾರರಿಗೆ 2 ಎಕರೆ ಜಮೀನು ನೀಡಿ ಎಂಬ ಸೂಚನೆಯನ್ನು ರಾಜೂರ ಗ್ರಾ.ಪಂಗೆ ನೀಡಿದ್ದರು. ಆದರೆ, ಗ್ರಾ.ಪಂನವರು ಮಾತ್ರ ಸೂಚಿಸಿಲ್ಲ ಎಂದು ಸುಣ್ಣಗಾರ ಮುಖಂಡ ದೇವಪ್ಪ ಸುಣ್ಣಗಾರ ಆರೋಪಿಸುತ್ತಾರೆ.ಕೆನರಾ ಬ್ಯಾಂಕ್ ನೆರವು: ರಾಜೂರ ಗ್ರಾಮದ ಸುಣ್ಣಗಾರರ ಪರಿಶ್ರಮದ ಬದುಕಿಗೆ ಸ್ಥಳೀಯ ಕೆನರಾ ಬ್ಯಾಂಕ್ ನೆರವಾಗಿದೆ. 50 ಜನ ಸುಣ್ಣಗಾರರಿಗೆ 30 ಸಾವಿರ ರೂ. ಸಾಲ ಸೌಲಭ್ಯ ನೀಡಿ ಅಳಿವಿನಂಚಿನ್ಲ್ಲಲಿದ್ದ ಸುಣ್ಣ ತಯಾರಿಕೆಗೆ ನೆರವಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.