ಗುರುವಾರ , ಅಕ್ಟೋಬರ್ 17, 2019
21 °C

ಸಂಕ್ರಾಂತಿ ಕಾಳಿಗೆ ಸಾವಯವ ಮೆರಗು

Published:
Updated:

ಶಿರಸಿ: ಇದೇ 15ರಂದು ಮಕರ ಸಂಕ್ರಾಂತಿ. ಎಳ್ಳು-ಬೆಲ್ಲ ವಿನಿಮಯದ ಹಬ್ಬ. ಗಡಿಬಿಡಿ ಬದುಕಿನಲ್ಲಿ ಪ್ಯಾಕೇಟ್‌ನಲ್ಲಿ ಸಿದ್ಧಪಡಿಸಿದ ರೆಡಿಮೇಡ್ ಎಳ್ಳು-ಬೆಲ್ಲ ಕೊಳ್ಳುವವರೇ ಅಧಿಕ. ಆದರೆ ಶಿರಸಿ ತಾಲ್ಲೂಕಿನ ಹುಣಸೇ ಕೊಪ್ಪ ಮಹಿಳೆಯರು ಹಾಗಲ್ಲ. ಸಾವ ಯವ ಸಂಕ್ರಾಂತಿ ಕಾಳು ಸಿದ್ಧಪಡಿಸಿ ವಿನಿಮಯ ಮಾಡಿಕೊಂಡು ಸಂಭ್ರಮಿ ಸುತ್ತಾರೆ.ಒಳಭಾಗಿ ಹುಣಸೇಕೊಪ್ಪದ ವರದಾ ಸದಾನಂದ ಭಟ್ಟ 38 ವರ್ಷಗಳಿಂದ ನಿರಂತರವಾಗಿ ಸಾವಯವ ಸಂಕ್ರಾಂತಿ ಕಾಳು ತಯಾರು ಮಾಡುತ್ತ ಬಂದಿದ್ದಾರೆ. ಹುಣಸೇಕೊಪ್ಪ ಮನೆಯ ಜಗುಲಿಯ ಮೇಲೆ ಎಳ್ಳು, ಏಲಕ್ಕಿ, ಬಡೆಸೊಪ್ಪು ಕಾಳುಗಳಿಗೆ ಸಕ್ಕರೆಯ ಮುಳ್ಳು ಅರಳುತ್ತಿದೆ. ಬಿಡುವಿನ ವೇಳೆ ಯಲ್ಲಿ ಮಹಿಳೆಯರೆಲ್ಲ ಒಂದೆಡೆ ಸೇರಿ ಹರಟುತ್ತ ಕೆಂಡದ ಒಲೆಯಲ್ಲಿ ಎಳ್ಳಿಗೆ ಸಕ್ಕರೆ ಪಾಕ ಬೆರೆಸುತ್ತಾರೆ. ಒಂದು ವಾರದಿಂದ ನಿತ್ಯ ಈ ಕಾಯಕ ಮಾಡಿದ ಹೆಂಗಳೆಯರು, ಪುಟ್ಟ ಮಕ್ಕಳು ಈಗ ಬಣ್ಣದ ಕಾಳು ಹಂಚುವ ತವಕ ದಲ್ಲಿದ್ದಾರೆ.ಸಾಂಪ್ರದಾಯಿಕ ಸಂಕ್ರಾಂತಿ ಆಚರಣೆ ಈ ಊರಿನಲ್ಲಿ ಇನ್ನೂ ಜೀವಂತವಾಗಿದೆ. `ಪೇಟೆಯಿಂದ ತರುವ ಸಕ್ಕರೆ ಹಿಟ್ಟಿನ ಸಂಕ್ರಾಂತಿ ಕಾಳಿಗಿಂತ ರುಚಿಕಟ್ಟಾದ ಮನೆಯಲ್ಲೇ ಸಿದ್ಧಪಡಿಸಿದ ಸಂಕ್ರಾಂತಿ ಕಾಳು ವಿನಿಮಯ ಮಾಡಿ ಕೊಳ್ಳುವದೇ ಒಂದು ಸಂಭ್ರಮ. ರಾಸಾಯನಿಕದ ಸ್ಪರ್ಶವಿಲ್ಲದೆ ಪರಿಶುದ್ಧ ಉತ್ಪನ್ನಗಳನ್ನು ಎಲ್ಲರೂ ಮನೆಯಲ್ಲೇ ಸಿದ್ಧಪಡಿಸಿ ಕೊಳ್ಳಬಹುದು. ಬೀಟ ರೂಟ್, ಅರಿಶಿಣ ಹಾಗೂ ವನಸ್ಪತಿ ರಸ ಬಳಸಿ ಬಣ್ಣದ ಕಾಳನ್ನು ಸಿದ್ಧಪಡಿಸುತ್ತೇವೆ~ ಎನ್ನುತ್ತಾರೆ ವರದಾ ಭಟ್ಟ. `ಸಂಕ್ರಾಂತಿ ಇಡೀ ಊರಿಗೆ ಹಬ್ಬ ಅಂದು ಗಣಪತಿ ದೇವಾಲಯದಲ್ಲಿ ನಡೆಯುವ ವಿಶೇಷ ಪೂಜೆಗೆ ನೂರಾರು ಜನ ಆಗಮಿಸು ತ್ತಾರೆ. ಬಂದ ಅತಿಥಿಗಳಿಗೆಲ್ಲ ಮನೆ ಯಲ್ಲೇ ತಯಾರು ಮಾಡಿದ ಸಂಕ್ರಾಂತಿ ಕಾಳು ಹಂಚುತ್ತೇವೆ. ಆದರೆ ವಾಣಿಜ್ಯಿಕ ಉದ್ದೇಶಕ್ಕಾಗಿ ನಾವು ಸಂಕ್ರಾಂತಿ ಕಾಳು ಸಿದ್ಧಪಡಿಸುವದಿಲ್ಲ. ಸ್ವ ಖುಷಿಗಾಗಿ ಇದನ್ನು ಮಾಡುತ್ತೇವೆ~ ಎನ್ನುತ್ತಾರೆ ಭವಾನಿ ಹೆಗಡೆ.ಪೇಟೆಯಲ್ಲಿ ಖರೀದಿಸುವವರೇ ಬಹಳ ಮಂದಿ. ದುಪಟ್ಟು ದರ ನೀಡಿ ಮೌಲ್ಯವರ್ಧಿಸಿ ಉತ್ಪನ್ನ ತಂದರೂ ಅದೂ ಯಂತ್ರ ನಿರ್ಮಿತವೇ. ಹೀಗಿದ್ದಾಗ ಸ್ವತಃ ಸಿದ್ಧ ಪಡಿಸುವ ಕಾಯಕ ಖುಷಿ ಕೊಡುತ್ತದೆ~ ಎಂಬುದು ಅರುಂಧತಿ, ವೀಣಾ, ಶುಭಾ, ವತ್ಸಲಾರ ಅನುಭವ.

 

Post Comments (+)