ಸಂಕ್ರಾಂತಿ ಬಳಿಕ ಸ್ಪಷ್ಟ ತೀರ್ಮಾನ

7

ಸಂಕ್ರಾಂತಿ ಬಳಿಕ ಸ್ಪಷ್ಟ ತೀರ್ಮಾನ

Published:
Updated:

ರಾಯಚೂರು: ರಾಜ್ಯದ ಈಗಿನ ಸರ್ಕಾರದ ಬಗ್ಗೆ ಮಾತನಾಡಲು ಯಾವುದೇ ಮುಲಾಜಿಲ್ಲ. ಈ ಸರ್ಕಾರವನ್ನು ಉಳಿಸುವ ಅಥವಾ ತೆಗೆಯುವ ಕುರಿತು ಕರ್ನಾಟಕ ಜನತಾ ಪಕ್ಷವು (ಕೆಜೆಪಿ) ಸಂಕ್ರಾಂತಿ ಹಬ್ಬದ ಬಳಿಕ  ಸ್ಪಷ್ಟ ತೀರ್ಮಾನ ಕೈಗೊಳ್ಳಲಿದೆ ಎಂದು ಪಕ್ಷದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ತಿಳಿಸಿದರು.ಪಕ್ಷಕ್ಕೆ ಬರುವವರು ಬರಲಿ; ಬಾರದೆ ಇರುವವರು ಇರಲಿ ಎಂದು ಅವರು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಈಶ್ವರಪ್ಪ ಅವರ ನಿವಾಸದ ಮೇಲೆ ಲೋಕಾಯುಕ್ತ ದಾಳಿ ಕುರಿತು ಪ್ರಶ್ನಿಸಿದಾಗ, `ದೇವ್ರೇ ಕಾಯ್ಲಿ . ಅವರು ದೊಡ್ಡವರು. ನಾನು ನಿನ್ನೆ ಮೊನ್ನೆ ಹುಟ್ಟಿದ ಪಕ್ಷದ ಅಧ್ಯಕ್ಷ. ಅವರ ಬಗ್ಗೆ ನಾನೇನೂ ಹೇಳಲೊಲ್ಲೆ ಎಂದು ಉತ್ತರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry