ಶನಿವಾರ, ಡಿಸೆಂಬರ್ 14, 2019
20 °C

ಸಂಕ್ರಾಂತಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಕ್ರಾಂತಿ ಸಂಭ್ರಮ

ಅಂದು ರಾಜಾಜಿನಗರದ ತುಂಬೆಲ್ಲಾ  ಡೊಳ್ಳಿನ ಅಬ್ಬರ. ಎಲ್ಲಿ  ನೋಡಿದರೂ ಗ್ರಾಮೀಣ ಸೊಗಡು ಎದ್ದು ಕಾಣುತ್ತಿತ್ತು. ಇಡೀ ರಸ್ತೆಗೆ ರಸ್ತೆಯೇ ಜಾನಪದ ವೈಭವದ ಸಿರಿಯಿಂದ ಕಂಗೊಳಿಸುತ್ತಿತ್ತು. ಬೆಂಗಳೂರು ಎಂಬುದನ್ನೇ ಮರೆಸುವಂತಹ ವಾತಾವರಣ ಸೃಷ್ಟಿಯಾಗಿದ್ದು ಜ.16ರಂದು. ಸಂಕ್ರಾಂತಿ  ಸಂಭ್ರಮದ ಸಂದರ್ಭದಲ್ಲಿ.

ಪ್ರತಿ ವರ್ಷದಂತೆ ಈ ವರ್ಷವೂ ವಿಶ್ವ ಒಕ್ಕಲಿಗರ ಮಹಾ ವೇದಿಕೆ ಮತ್ತು ಹಾಗೂ ರಾಜಾಜಿನಗರ ಒಕ್ಕಲಿಗರ ಹಿತರಕ್ಷಣಾ ವೇದಿಕೆ `ಸಂಕ್ರಾಂತಿ ಹಬ್ಬ-ಒಕ್ಕಲಿಗರ ಹಬ್ಬ~ ಆಯೋಜಿಸಿದೆ. ಈ ಪರಿಕಲ್ಪನೆಯನ್ನು ಸಾಕಾರಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ರಾಜಾಜಿನಗರ ಒಕ್ಕಲಿಗರ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ಎಂ.ಎ. ಆನಂದ ಹೇಳಿದರು.

ರಾಜಾಜಿನಗರ 1ನೇ ಹಂತದಿಂದ ರಾಮಮಂದಿರ ಆಟದ ಮೈದಾನದವರೆಗೂ ಈ ಜಾನಪದ ಮೆರವಣಿಗೆ ವಿಜೃಂಭಣೆಯಿಂದ ಸಾಗಿತ್ತು.

ಶಿವಗಿರಿ ಕ್ಷೇತ್ರದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ, ಗೃಹ ಸಚಿವ ಆರ್. ಅಶೋಕ್, ಮಾಜಿ ಸಚಿವ ಡಿ.ಕೆ ಶಿವಕುಮಾರ್, ಶಾಸಕ ಬಾಲಕೃಷ್ಣ, ಅರಣ್ಯ ಖಾತೆ ಸಚಿವ ಸಿ.ಪಿ.ಯೋಗೇಶ್ವರ್, ಸಾಹಿತಿ ಸಿ.ಪಿ ಕೃಷ್ಣಕುಮಾರ್, ಶಾಸಕ ಆರ್.ಅಶ್ವತ್ಥ ನಾರಾಯಣ್ ಮತ್ತಿತರರಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಜಾನಪದ ಕಲಾ ತಂಡಗಳ ಪ್ರದರ್ಶನ ನಿಜಕ್ಕೂ ಅದ್ಭುತವೆನಿಸಿತ್ತು.

ಪ್ರತಿಕ್ರಿಯಿಸಿ (+)