ಮಂಗಳವಾರ, ಜನವರಿ 28, 2020
17 °C

ಸಂಕ್ಷಿಪ್ತ ಕ್ರಿಡಾ ಸುದ್ದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟಿಟಿ: ಸ್ಫೂರ್ತಿಗೆ ಸಿಂಗಲ್ಸ್ ಗರಿ

ಬೆಂಗಳೂರು:
ಎಮ್.ವಿ.ಸ್ಫೂರ್ತಿ ಇಲ್ಲಿ ನಡೆಯುತ್ತಿರುವ ಸಿ.ವಿ.ಎಲ್‌ ಶಾಸ್ತ್ರಿ ಸ್ಮಾರಕ ರಾಜ್ಯ ಟೇಬಲ್ ಟೆನಿಸ್ ಚಾಂಪಿಯನ್‌ಷಿಪ್‌ನ ಮಹಿಳೆಯರ ಸಿಂಗಲ್ಸ್‌ ಫೈನಲ್‌ನಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಶಸ್ತಿ ಜಯಿಸಿದ್ದಾರೆ.ಸ್ಫೂರ್ತಿ ಸೋಮವಾರ ನಡೆದ ಫೈನಲ್‌ನಲ್ಲಿ ಅರ್ಚನಾ ಕಾಮತ್ ಅವರನ್ನು 11–5, 11–5, 14–12, 15–13 ರಿಂದ ಮಣಿಸಿದರು.

ಭಾನುವಾರ ನಡೆದ ಜೂನಿಯರ್ ಹಾಗೂ ಯೂತ್ ವಿಭಾಗದ ಸ್ಪರ್ಧೆಗಳಲ್ಲಿ ಸ್ಫೂರ್ತಿ ಅವರನ್ನು ಮಣಿಸಿ ಪ್ರಶಸ್ತಿ ಜಯಿಸಿದ್ದ ಅರ್ಚನಾ ಈ ಪಂದ್ಯದಲ್ಲಿ ಪರಾಭವಗೊಂಡರು.ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್ ಫೈನಲ್‌ನಲ್ಲಿ ಅನಿರ್ಭಾನ್ ರಾಯ್  9–11, 8–11, 11–4, 6–11, 11–8, 11–4, 11–7 ರಿಂದ ಸಗೈರಾಜ್ ಅವರನ್ನು ಸೋಲಿಸುವ ಮೂಲಕ ಪ್ರಶಸ್ತಿ ತಮ್ಮದಾಗಿಸಿಕೊಂಡರು.ಕುಸ್ತಿ: ಭಾರತಕ್ಕೆ 14 ಪದಕ

ನವದೆಹಲಿ (ಪಿಟಿಐ
): ಭಾರತದ ಪುರುಷರ ತಂಡ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಮುಕ್ತಾಯಗೊಂಡ ಕಾಮನ್‌ವೆಲ್ತ್‌ ಚಾಂಪಿಯನ್‌ಷಿಪ್‌ನಲ್ಲಿ 14 ಪದಕ ಗಳನ್ನು ಪಡೆದಿದೆ.ಪುರುಷರ ತಂಡದ ಸ್ಪರ್ಧಿಗಳು ಗ್ರೀಕೊ ರೋಮನ್ ಶೈಲಿ ವಿಭಾಗದಲ್ಲಿ ಏಳು ಚಿನ್ನ, ಐದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದಿದ್ದಾರೆ.

ಮಹಿಳೆಯರ ತಂಡ ಎರಡು ಚಿನ್ನ, ನಾಲ್ಕು ಬೆಳ್ಳಿ ಹಾಗೂ ಐದು ಕಂಚಿನ ಪದಕ ಪಡೆಯುವ ಮೂಲಕ ರನ್ನರ್‌ಅಪ್‌ ಆಯಿತು.ವಿಶೇಷ ಒಲಿಂಪಿಕ್ಸ್ : ಭಾರತದ ಅಥ್ಲೀಟ್‌ಗಳಿಗೆ 387 ಪದಕ

ನವದೆಹಲಿ (ಪಿಟಿಐ):
ಭಾರತದ ವಿಶೇಷ ಅಥ್ಲೀಟ್‌ಗಳು ಆಸ್ಟ್ರೇಲಿಯಾದ ನ್ಯೂ ಕ್ಯಾಸೆಲ್‌ನಲ್ಲಿ ನಡೆದ ಏಷ್ಯಾ ಫೆಸಿಪಿಕ್ ಒಲಿಂಪಿಕ್‌ನಲ್ಲಿ ಒಟ್ಟು 387 ಪದಕ ಜಯಿಸುವ ಮೂಲಕ ಮಿಂಚಿದ್ದಾರೆ.29 ರಾಷ್ಟ್ರಗಳ 2200 ಅಥ್ಲೀಟ್‌ಗಳು ಪಾಲ್ಗೊಂಡಿದ್ದ ಟೂರ್ನಿಯಲ್ಲಿ ಭಾರತ 111 ಬಂಗಾರ, 136 ಬೆಳ್ಳಿ ಮತ್ತು 140 ಕಂಚಿನ ಪದಕವನ್ನು ತನ್ನದಾಗಿಸಿಕೊಂಡಿತು.ಭಾರತದ ಸ್ಪರ್ಧಿಗಳು ಅಥ್ಲೆಟಿಕ್ಸ್, ಈಜು, ಬ್ಯಾಸ್ಕೆಟ್‌ಬಾಲ್, ಬ್ಯಾಡ್ಮಿಂಟನ್, ಕ್ರಿಕೆಟ್, ಫುಟ್‌ಬಾಲ್ ಹಾಗೂ ಟೇಬಲ್‌ ಟೆನಿಸ್ ವಿಭಾಗಗಳಲ್ಲಿ ಮಿಂಚಿದರು.ಐಒಎ ನಿರ್ಧಾರಕ್ಕೆ ಜಿತೇಂದ್ರ ಸಿಂಗ್ ಹರ್ಷ

ನವದೆಹಲಿ (ಪಿಟಿಐ
): ಭಾರತೀಯ ಒಲಿಂಪಿಕ್‌ ಸಂಸ್ಥೆಯು (ಐಒಎ), ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಒತ್ತಡಕ್ಕೆ ಮಣಿದು ತನ್ನ ಸಂವಿಧಾನದಲ್ಲಿ ತಿದ್ದುಪಡಿ ತರಲು ನಿರ್ಧರಿಸಿರುವುದಕ್ಕೆ ಕೇಂದ್ರ ಕ್ರೀಡಾ ಸಚಿವ ಜಿತೇಂದ್ರ ಸಿಂಗ್ ಹರ್ಷ ವ್ಯಕ್ತಪಡಿಸಿದ್ದಾರೆ.ಭಾನುವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಐಒಎ ಭ್ರಷ್ಟಾಚಾರ ಒಳಗೊಂಡಂತೆ ಇತರ ಯಾವುದೇ ಕ್ರಿಮಿನಲ್‌ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವವರನ್ನು ಇನ್ನು ಮುಂದೆ ಸಂಸ್ಥೆಯ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಬೇಕೆಂಬ ಮಹತ್ವದ ತಿದ್ದುಪಡಿ ತರಲು ಸಮ್ಮತಿಸಿರುವುದನ್ನು  ಸಿಂಗ್ ಸ್ವಾಗತಿಸಿದ್ದಾರೆ.ಐಒಎ ತನ್ನ ಸಂವಿಧಾನದಲ್ಲಿ ತಿದ್ದುಪಡಿ ತರಬೇಕೆಂಬ ಐಒಸಿಯ ಬೇಡಿಕೆಯನ್ನು ಸರ್ಕಾರ ಆರಂಭದಲ್ಲೆ ಬೆಂಬಲಿಸಿತ್ತು ಎಂದೂ ಅವರು ತಿಳಿಸಿದ್ದಾರೆ.ಕ್ರಿಕೆಟ್: ಬಾಂಗ್ಲಾ ಪ್ರವಾಸ ರದ್ದುಗೊಳಿಸಿದ ವಿಂಡೀಸ್

ಸೇಂಟ್‌ಜಾನ್ಸ್,ಆ್ಯಂಟಿಗ (ಐಎಎನ್‌ಎಸ್/ಸಿಎಮ್‌ಸಿ)
: ಬಾಂಗ್ಲಾದೇಶಪ್ರವಾಸವನ್ನು ರದ್ದುಗೊಳಿಸಿ ಸ್ವದೇಶಕ್ಕೆ ಹಿಂದಿರುಗುವಂತೆ 19 ವರ್ಷದೊಳಗಿನವರ ತಂಡಕ್ಕೆ  ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಸೂಚಿಸಿದೆ.ತಂಡದ ಆಟಗಾರರು ಹಾಗೂ ಸಿಬ್ಬಂದಿಯ ಭದ್ರತೆಯ ದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ವಿಂಡೀಸ್ ಕ್ರಿಕೆಟ್ ಮಂಡಳಿ ತಿಳಿಸಿದೆ.

ಪ್ರತಿಕ್ರಿಯಿಸಿ (+)