ಬುಧವಾರ, ಜೂನ್ 16, 2021
21 °C

ಸಂಕ್ಷಿಪ್ತ ಕ್ರೀಡಾ ಸುದ್ದಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಚಾರ್ಯ ಮೀಡಿಯಾ ಕಪ್ ಕ್ರಿಕೆಟ್ ಟೂರ್ನಿ

ಬೆಂಗಳೂರು:
ಆಚಾರ್ಯ ಸಂಸ್ಥೆ ಆಶ್ರಯದಲ್ಲಿ ಶನಿವಾರ ಆಚಾರ್ಯ ಮೀಡಿಯಾ ಕಪ್ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ಆರಂಭವಾಗಲಿದೆ. ಮೂರು ದಿನಗಳ ನಡೆಯಲಿರುವ ಈ ಟೂರ್ನಿಯಲ್ಲಿ 16 ತಂಡಗಳು ಪಾಲ್ಗೊಳ್ಳಲಿವೆ. ವಿಜೇತರು 30 ಸಾವಿರ ರೂ. ಬಹುಮಾನ ಪಡೆಯಲಿದ್ದಾರೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. 2011ರಲ್ಲಿ ನಡೆದ ಟೂರ್ನಿಯಲ್ಲಿ ಡೆಕ್ಕನ್ ಹೆರಾಲ್ಡ್ ಚಾಂಪಿಯನ್ ಆಗಿತ್ತು.ಬೆಂಗಳೂರು ಕಿಕ್ಕರ್ಸ್‌ಗೆ ಜಯ

ಬೆಂಗಳೂರು:
ಬೆಂಗಳೂರು ಕಿಕ್ಕರ್ಸ್‌ ತಂಡದವರು ಬಿಡಿಎಫ್‌ಎ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ `ಬಿ~ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 1-0ಗೋಲುಗಳಿಂದ ಸರ್ಕಾರಿ ಮುದ್ರಣಾಲಯದ ಎದುರು ಗೆಲುವು ಸಾಧಿಸಿದರು.13ನೇ ನಿಮಿಷದಲ್ಲಿ ಗೋಲು ಗಳಿಸಿದ ಕ್ರಿಸ್ಪಿನ್ ಗೆಲುವಿನ ರೂವಾರಿ ಎನಿಸಿದರು. ಓರಿಯಂಟರ್ ಹಾಗೂ ಜುಪಿಟರ್ ತಂಡಗಳ ನಡುವಿನ ದಿನದ ಇನ್ನೊಂದು ಪಂದ್ಯವು 2-2ಗೋಲುಗಳಿಂದ ಡ್ರಾದಲ್ಲಿ ಅಂತ್ಯ ಕಂಡಿತು.ಗಾಲ್ಫ್: ಖಾಲಿನ್ ಚಾಂಪಿಯನ್

ಚಂಡೀಗಡ (ಐಎಎನ್‌ಎಸ್):
ಬೆಂಗಳೂರಿನ ಗಾಲ್ಫರ್ ಖಾಲಿನ್ ಜೋಶಿ ಇಲ್ಲಿ ಮುಕ್ತಾಯವಾದ ಅಮೆಚೂರ್ ಗಾಲ್ಫ್ ಚಾಂಪಿಯನ್‌ಷಿಪ್‌ನಲ್ಲಿ ಚಾಂಪಿಯನ್ ಆದರು.ಶುಕ್ರವಾರ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ನಿಖರವಾಗಿ ಕ್ಲಬ್ ಬೀಸಿದ ಖಾಲಿನ್ ಅವರು 71 ಪಾಯಿಂಟ್‌ಗಳೊಂದಿಗೆ ಕರ್ನಾಟಕದ ಇನ್ನೊಬ್ಬ ಗಾಲ್ಫರ್ ಎಸ್. ಚಿಕ್ಕರಂಗಪ್ಪ ಅವರನ್ನು ಹಿಂದಿಕ್ಕುವ ಮೂಲಕ ಪ್ರಶಸ್ತಿ ತಮ್ಮದಾಗಿಸಿಕೊಂಡರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.