ಸಂಕ್ಷಿಪ್ತ ಕ್ರೀಡಾ ಸುದ್ದಿಗಳು

7

ಸಂಕ್ಷಿಪ್ತ ಕ್ರೀಡಾ ಸುದ್ದಿಗಳು

Published:
Updated:

ರಣಜಿ ಆಡಲಿರುವ ಸಚಿನ್, ಜಹೀರ್

ಮುಂಬೈ (ಪಿಟಿಐ):
ಸಚಿನ್ ತೆಂಡೂಲ್ಕರ್ ಮತ್ತು ಜಹೀರ್ ಖಾನ್ ನವೆಂಬರ್ ತಿಂಗಳ ಮೊದಲ ವಾರ ಮುಂಬೈನಲ್ಲಿ ನಡೆಯಲಿರುವ ರೈಲ್ವೇಸ್ ವಿರುದ್ಧದ ರಣಜಿ ಪಂದ್ಯದಲ್ಲಿ ಆಡಲಿದ್ದಾರೆ. ಈ ಪಂದ್ಯ ವಾಂಖೇಡೆ ಕ್ರೀಡಾಂಗಣದಲ್ಲಿ ನ. 2ರಿಂದ 5ರ ವರೆಗೆ ನಡೆಯಲಿದೆ.ಸಚಿನ್ 2009ರ ರಣಜಿ ಋತುವಿನ ಫೈನಲ್ ಪಂದ್ಯದಲ್ಲಿ ಕೊನೆಯದಾಗಿ ಮುಂಬೈ ಪರ ಆಡಿದ್ದರು. ಜಹೀರ್ ಖಾನ್ ಕಳೆದ ಋತುವಿನಲ್ಲಿ ಎರಡು ಪಂದ್ಯಗಳಲ್ಲಿ ಮುಂಬೈ ತಂಡವನ್ನು ಪ್ರತಿನಿಧಿಸಿದ್ದರು.

ಎರಡನೇ ಸುತ್ತಿಗೆ ಸಾನಿಯಾ- ನೂರಿಯಾ

ಮಾಸ್ಕೊ (ಪಿಟಿಐ):
ಸಾನಿಯಾ ಮಿರ್ಜಾ ಮತ್ತು ಸ್ಪೇನ್‌ನ ನೂರಿಯಾ ಲಗೊಸ್ತೆರಾ ಜೋಡಿ ಇಲ್ಲಿ ನಡೆಯುತ್ತಿರುವ ಕ್ರೆಮ್ಲಿನ್ ಕಪ್ ಟೆನಿಸ್ ಟೂರ್ನಿಯ ಡಬಲ್ಸ್ ವಿಭಾಗದ ಎರಡನೇ ಸುತ್ತು ಪ್ರವೇಶಿಸಿತು.ಮಂಗಳವಾರ ನಡೆದ ಪಂದ್ಯದಲ್ಲಿ ಭಾರತ- ಸ್ಪೇನ್ ಜೋಡಿ 6-3, 5-7, 10-6 ರಲ್ಲಿ ಬೆಲಾರಸ್‌ನ ಡರ್ಯಾ ಕುತ್ಸೋವಾ ಮತ್ತು ಉಕ್ರೇನ್‌ನ ಓಲ್ಗಾ ಸಾವ್‌ಚುಕ್ ಎದುರು ಪ್ರಯಾಸದ ಜಯ ಸಾಧಿಸಿತು.ಒಂದು ಗಂಟೆ 27 ನಿಮಿಷಗಳ ಹೋರಾಟದ ಬಳಿಕ ಸಾನಿಯಾ- ನೂರಿಯಾ ಗೆಲುವು ತಮ್ಮದಾಗಿಸಿಕೊಂಡರು. ಈ ಪಂದ್ಯದಲ್ಲಿ ಎರಡೂ ಎರಡೂ ತಂಡದವರು ಸಾಕಷ್ಟು ಅನಗತ್ಯ ತಪ್ಪುಗಳನ್ನೆಸಗಿದರು. ಸಾನಿಯಾ ಮತ್ತು ನೂರಿಯಾ ತಮಗೆ ಲಭಿಸಿದ 11 `ಬ್ರೇಕ್ ಪಾಯಿಂಟ್~ ಅವಕಾಶಗಳಲ್ಲಿ ಎಂಟನ್ನೂ ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದರು.ಟೆನಿಸ್: ಸನಮ್‌ಗೆ ಗೆಲುವು

ನಾನ್‌ಜಿಂಗ್, ಚೀನಾ (ಪಿಟಿಐ):
ಭಾರತದ ಸನಮ್ ಸಿಂಗ್ ಏಷ್ಯಾ ಪೆಸಿಫಿಕ್ ಆಸ್ಟ್ರೇಲಿಯಾ ಓಪನ್   ವೈಲ್ಡ್‌ಕಾರ್ಡ್ ಪ್ಲೇ ಆಫ್ ಟೆನಿಸ್ ಟೂರ್ನಿಯ ಫೈನಲ್ ಸುತ್ತು ಪ್ರವೇಶಿಸಿದರು.ಮೊದಲ ಎರಡು ಸುತ್ತುಗಳಲ್ಲಿ `ಬೈ~ ಪಡೆದಿದ್ದ ಸನಮ್ ಮಂಗಳವಾರ ನಡೆದ ಮೂರನೇ ಸುತ್ತಿನ ಪಂದ್ಯದಲ್ಲಿ 6-3, 6-1 ರಲ್ಲಿ ಚೀನಾದ ದೆ ಜು ವಿರುದ್ಧ ಗೆದ್ದರು. ಬುಧವಾರ ನಡೆಯುವ ಅಂತಿಮ ಪಂದ್ಯದಲ್ಲಿ ಅವರು ಚೀನಾದ ಜಿಜೆನ್ ಜಾಂಗ್  ಸವಾಲನ್ನು ಎದುರಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry