ಸಂಕ್ಷಿಪ್ತ ಕ್ರೀಡಾ ಸುದ್ದಿ

7

ಸಂಕ್ಷಿಪ್ತ ಕ್ರೀಡಾ ಸುದ್ದಿ

Published:
Updated:

ರಣಜಿ: ಕರ್ನಾಟಕ ತಂಡಕ್ಕೆ  ವಿನಯ್‌ ಕುಮಾರ್‌ ನಾಯಕ

ಬೆಂಗಳೂರು
: ಆರ್‌.ವಿನಯ್‌ ಕುಮಾರ್‌ ಅವರು ಮುಂಬರುವ ರಣಜಿ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದಾರೆ. ಈ ಟೂರ್ನಿಗೆ  ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯು ಶುಕ್ರವಾರ ಸಂಭ ವನೀಯ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಸಂಭಾವ್ಯ ತಂಡ ಇಂತಿದೆ: ಆರ್‌.ವಿನಯ್‌ ಕುಮಾರ್‌ (ನಾಯಕ), ರಾಬಿನ್‌ ಉತ್ತಪ್ಪ, ಕೆ.ಎಲ್‌.ರಾಹುಲ್‌, ಆರ್‌.ಸಮರ್ಥ್‌, ಮಯಂಕ್‌ ಅಗರವಾಲ್‌, ಗಣೇಶ್‌ ಸತೀಶ್‌, ಮನೀಷ್‌ ಪಾಂಡೆ, ಸ್ಟುವರ್ಟ್‌ ಬಿನ್ನಿ, ಕುನಾಲ್‌ ಕಪೂರ್‌, ಅಮಿತ್‌ ವರ್ಮಾ, ಕರುಣ್‌ ನಾಯರ್‌, ಅಭಿಮನ್ಯು ಮಿಥುನ್‌, ಎಚ್‌.ಎಸ್‌.ಶರತ್‌, ಎಸ್‌.ಅರವಿಂದ್‌, ಕೆ.ಪಿ,ಅಪ್ಪಣ್ಣ, ಎಸ್‌.ಎಲ್‌.ಅಕ್ಷಯ್‌, ಸಿ.ಎಂ.ಗೌತಮ್‌ (ವಿಕೆಟ್‌ ಕೀಪರ್‌), ರೋನಿತ್‌ ಮೋರೆ, ಕೆ.ಸಿ.ಅವಿನಾಶ್‌, ಸುನೀಲ್‌ ರಾಜು, ಕೆ.ಗೌತಮ್‌, ಜೆ.ಸುಶಿತ್‌, ಅಬ್ರಾರ್‌ ಕಾಜಿ, ಎಸ್‌.ಕೆ.ಮೊಯಿನುದ್ದೀನ್‌, ಶ್ರೇಯಸ್‌ ಗೋಪಾಲ್‌, ಸಾದಿಕ್‌ ಕಿರ್ಮಾನಿ (ವಿಕೆಟ್‌ ಕೀಪರ್‌), ಪರಪ್ಪ ಮೋರ್ದಿ, ಅಭಿಷೇಕ್‌ ರೆಡ್ಡಿ, ಅನಿರುದ್ಧ ಜೋಶಿ ಹಾಗೂ ಡಿ.ನಿಶ್ಚಲ್‌.ಇಂದಿನಿಂದ ಐ ಲೀಗ್‌ ಫುಟ್‌ಬಾಲ್‌ ಟೂರ್ನಿ

ಕೋಲ್ಕತ್ತ (ಪಿಟಿಐ
): ಡ್ಯುರಾಂಡ್‌ ಕಪ್‌ ಗೆದ್ದ ಖುಷಿಯಲ್ಲಿರುವ ಮೊಹಮ್ಮಡನ್‌ ಸ್ಪೋರ್ಟಿಂಗ್‌ ತಂಡದವರು ಶನಿವಾರ ಇಲ್ಲಿ ಆರಂಭವಾಗಲಿರುವ ಏಳನೇ ಐ ಲೀಗ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಪುಣೆ ಫುಟ್‌ಬಾಲ್‌ ಕ್ಲಬ್ ತಂಡವನ್ನು ಎದುರಿಸಲಿದ್ದಾರೆ.ಈ ಬಾರಿಯ ಐ ಲೀಗ್‌ ಟೂರ್ನಿ ಆರಂಭಕ್ಕೆ ಮುನ್ನವೇ ಹಲವು ವಿವಾದಗಳಿಗೆ ಕಾರಣವಾಗಿದೆ. ಪ್ರಾಯೋಜಕತ್ವ ಹಾಗೂ ಪ್ರಸಾರ ಸಂಬಂಧ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ (ಎಐಎಫ್‌ಎಫ್‌) ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ.ಈ ಟೂರ್ನಿಯಲ್ಲಿ ಒಟ್ಟು 13 ತಂಡಗಳು ಪೈಪೋಟಿ ನಡೆಸಲಿವೆ. ವಿಜೇತ ತಂಡ 70 ಲಕ್ಷ ರೂಪಾಯಿ ಬಹುಮಾನ ಪಡೆಯಲಿದೆ.  ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ ನೂತನವಾಗಿ ಸೇರ್ಪಡೆಯಾಗಿದೆ. ಈ ತಂಡದ ಅಭಿಯಾನ ಭಾನುವಾರ ಬೆಂಗಳೂರಿನಲ್ಲಿ ಆರಂಭವಾಗಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry