ಶುಕ್ರವಾರ, ಅಕ್ಟೋಬರ್ 18, 2019
28 °C

ಸಂಕ್ಷಿಪ್ತ ನಗರ ಸುದ್ದಿಗಳು

Published:
Updated:

ಸಂಶೋಧನಾ ಪ್ರಶಸ್ತಿ

ಭಾರತೀಯ ವಾಸ್ತುಶಿಲ್ಪ ಸಂಸ್ಥೆಯು ಆರ್.ವಿ.ವಾಸ್ತುಶಿಲ್ಪ ಕಾಲೇಜು ಪ್ರಾಂಶುಪಾಲರಾದ ಡಾ.ಕೆ.ಎಸ್.ಅನಂತಕೃಷ್ಣ ಅವರ ಮಾರ್ಗದರ್ಶನದ `ಸಾಂಪ್ರದಾಯಿಕ ಹಾಗೂ ಪರ್ಯಾಯ ನಿರ್ಮಾಣ ಕಟ್ಟಡಗಳ ಒಳಾಂಗಣ ಉಷ್ಣತೆ~ ಕುರಿತ ಸಂಶೋಧನ ಪ್ರಬಂಧಕ್ಕೆ `ಉತ್ತಮ ಸಂಶೋಧನಾ~ ಪ್ರಶಸ್ತಿ ನೀಡಿ ಗೌರವಿಸಿದೆ.ನವದೆಹಲಿಯಲ್ಲಿ ಫೆ.5 ರಂದು ಆರಂಭವಾಗಲಿರುವ ಸಮ್ಮೇಳನದಲ್ಲಿ  ಪ್ರಶಸ್ತಿ ನೀಡಲಾಗುವುದು. ಲೇಖಾ ಹೆಗಡೆ ರಚಿಸಿದ್ದ ಸಂಶೋಧನಾ ಮಹಾಪ್ರಬಂಧಕ್ಕೆ  ಮಣಿಪಾಲ್ ವಿಶ್ವವಿದ್ಯಾಲಯ ಪಿಎಚ್.ಡಿ ನೀಡಿದೆ.ಪ್ರವೇಶಕ್ಕೆ ಕೊನೆ ದಿನಾಂಕ ವಿಸ್ತರಣೆ

ಕುವೆಂಪು ವಿ.ವಿ. ದೂರಶಿಕ್ಷಣ ನಿರ್ದೇಶನಾಲಯವು 2011-12 ನೇ ಸಾಲಿನ ಪ್ರವೇಶಕ್ಕೆ ವಿವಿಧ ಕೋರ್ಸುಗಳಾದ ಬಿಎ, ಬಿಕಾಂ, ಬಿಬಿಎಂ, ಬಿ.ಎಸ್ಸಿ, ಎಂ.ಎ, ಎಂ.ಕಾಂ, ಎಂ.ಎಸ್ಸಿ  ಹಾಗೂ ಪಿಜಿ ಡಿಪ್ಲೊಮ ಕೋರ್ಸುಗಳಿಗೆ ಪ್ರವೇಶದ ದಿನವನ್ನು ವಿಸ್ತರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.ದಂಡಶುಲ್ಕ 100 ರೂ. ದೊಂದಿಗೆ ಜ.16 ಹಾಗೂ 300 ರೂ. ದಂಡಶುಲ್ಕದೊಂದಿಗೆ ಫೆಬ್ರುವರಿ 16 ವರೆಗೆ ಪ್ರವೇಶಕ್ಕೆ ಅವಕಾಶವಿದೆ. ಮಾಹಿತಿಗೆ: ಮಾನಸ ಎಜುಕೇಷನಲ್ ಟ್ರಸ್ಟ್, ಮಲ್ಲೇಶ್ವರಂ. ಮೊಬೈಲ್: 98804 98484 ಸಂಪರ್ಕಿಸಿ.ರ‌್ಯಾಂಕ್ ವಿದ್ಯಾರ್ಥಿಗಳು

ಬೆಂಗಳೂರು ವಿಶ್ವವಿದ್ಯಾಲಯ ನಡೆಸಿದ 2011 ರ ಪದವಿ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗಳಲ್ಲಿ ಪಿಇಎಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳೊಂದಿಗೆ ರ‌್ಯಾಂಕ್‌ಗಳನ್ನು ಪಡೆದಿರುತ್ತಾರೆ.ಅನುಶಾ ಆರ್.ಸಿಂಗ್ (ಬಿಕಾಂ-ಪ್ರಥಮ ರ‌್ಯಾಂಕ್), ಅಮೃತಾ ಎಸ್.ರಾವ್ (ಬಿಕಾಂ ನಾಲ್ಕನೇ ರ‌್ಯಾಂಕ್), ಕವಿತಾ ಬಿ.ಎಸ್. (ಬಿಬಿಎಂ-ಪ್ರಥಮ ರ‌್ಯಾಂಕ್) ಶ್ರುತಿ ಶ್ರೀ (ಎಂಎಸ್‌ಸಿ ಮೈಕ್ರೋ ಬಯಾಲಜಿ-ಎರಡನೇ ರ‌್ಯಾಂಕ್), ದೆಬರಾಟಿ ಗೋಶ್ (ಎಂಎಸ್‌ಸಿ ಬಯೋಟೆಕ್ನಾಲಜಿ-ಮೂರನೇ ರ‌್ಯಾಂಕ್) ಪಡೆದಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.ಹೊಸ ದೂರವಾಣಿ ಕೈಪಿಡಿ ವಿತರಣೆ

ಬಿಎಸ್‌ಎನ್‌ಎಲ್ ಬೆಂಗಳೂರಿನ ಹೊಸ ದೂರವಾಣಿ ಕೈಪಿಡಿಯನ್ನು  ಮಂಗಳವಾರ (ಜ.3) ನೀಡುತ್ತಲಿದೆ.

ವೈಟ್ ಫೀಲ್ಡ್‌ನವರು ಅವಲಹಳ್ಳಿ ದೂರವಾಣಿ ವಿನಿಮಯ ಕೇಂದ್ರ, ಟೆಕ್ ಮಾರ್ಕ್ ಐಟಿಪಿಎಲ್, ವರ್ತೂರು ಬಸ್ ನಿಲ್ದಾಣ ಹತ್ತಿರ, ಬ್ರೂಕ್ ಫೀಲ್ಡ್ ದೂರವಾಣಿ ವಿನಿಮಯ ಕೇಂದ್ರ, ಮಾರತ್‌ಹಳ್ಳಿ ಆಕಾಶ ವಿಹಾರ ಹತ್ತಿರ ಪಡೆಯಬಹುದಾಗಿದೆ.ಗ್ರಾಹಕರು ತಮ್ಮ ಬಳಿಯಲ್ಲಿರುವ ಹಳೆಯ ದೂರವಾಣಿ ಡೈರೆಕ್ಟರಿಗಳನ್ನು  ನೀಡಿ ಹೊಸ ಡೈರೆಕ್ಟರಿಗಳನ್ನು ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.ಅಣಬೆ ಬೇಸಾಯ ತರಬೇತಿ

ಹುಳಿಮಾವುನಲ್ಲಿರುವ ತೋಟಗಾರಿಕೆ ಇಲಾಖೆಯ ಜೈವಿಕ ಕೇಂದ್ರವು ಜನವರಿ 6 ಮತ್ತು 7 ರಂದು ಎರಡು ದಿನಗಳ ಕಾಲ ಅಣಬೆ ಬೇಸಾಯ  ಕುರಿತು ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ.

ರೈತರು, ಸಾರ್ವಜನಿಕರು, ವಿದ್ಯಾರ್ಥಿಗಳಿಗೆ ಮತ್ತು ಅಣಬೆ ಬೆಳೆಗಾರರು ಭಾಗವಹಿಸಬಹುದು ಎಂದು ಪ್ರಕಟಣೆ ತಿಳಿಸಿದೆ.ಎರಡು ದಿನಗಳು ಮುಂಚಿತವಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ಹುಳಿಮಾವು ಇವರ ಬಳಿ  ಹೆಸರು ನೋಂದಾಯಿಸಿಕೊಳ್ಳಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗೆ: 96202 03623 ಮೊಬೈಲ್ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.ಗ್ರಾ.ಪಂ.ಕಾರ್ಯಾಲಯ ಸ್ಥಳಾಂತರ


ಬೆಂಗಳೂರು ಉತ್ತರ ತಾಲ್ಲೂಕು ದಾಸನಪುರ ಮಾಚೋಹಳ್ಳಿ ಗ್ರಾಮ ಪಂಚಾಯಿತಿ ಕಚೇರಿಯನ್ನು ಜಿಲ್ಲಾಧಿಕಾರಿಗಳ ಆದೇಶದನ್ವಯ ಕಡಬಗೆರೆ ಗ್ರಾಮಕ್ಕೆ ವರ್ಗಾಯಿಸಲಾಗಿದೆ.

ಇನ್ನು ಮುಂದೆ ಯಾವುದೇ ರೀತಿಯ ಕಚೇರಿ ವ್ಯವಹಾರಗಳಿಗೆ ಹೊಸ ವಿಳಾಸವನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

ವಿಳಾಸ: ಕಡಬಗೆರೆ ಗ್ರಾಮ ಪಂಚಾಯಿತಿ, ದಾಸನಪುರ ಹೋಬಳಿ, ಬೆಂಗಳೂರು ಉತ್ತರ ತಾಲ್ಲೂಕು.

Post Comments (+)