ಸಂಕ್ಷಿಪ್ತ ವಾಣಿಜ್ಯ ಸುದ್ದಿಗಳು

ಗುರುವಾರ , ಜೂಲೈ 18, 2019
28 °C

ಸಂಕ್ಷಿಪ್ತ ವಾಣಿಜ್ಯ ಸುದ್ದಿಗಳು

Published:
Updated:

ಗೃಹಸಾಲ ಬಡ್ಡಿ ಶೇ 1 `ಸಬ್ಸಿಡಿ~: ಚರ್ಚೆ ಇಂದು

ನವದೆಹಲಿ(ಪಿಟಿಐ):
ಪ್ರಸಕ್ತ ಸಾಲಿನ ಮುಂಗಡಪತ್ರದಲ್ಲಿ ಘೋಷಿಸಿದಂತೆ ರೂ.15 ಲಕ್ಷದವರೆಗಿನ `ಗೃಹಸಾಲ~ಕ್ಕೆ ಶೇ 1ರಷ್ಟು ಬಡ್ಡಿಯ ಸಹಾಯಧನ ನೀಡುವ ಯೋಜನೆ ಸಂಬಂಧ ಕೇಂದ್ರ ಸಚಿವ ಸಂಪುಟ ಮಂಗಳವಾರ ಸಭೆ ಸೇರಿ ಚರ್ಚಿಸಲಿದೆ. ಯೋಜನೆಯನ್ನು 1 ವರ್ಷದ ಅವಧಿಗೆ ಜಾರಿಗೊಳಿಸುವ ಸಂಬಂಧ ನಿರ್ಧಾರ ಕೈಗೊಳ್ಳುವ ಸಂಭವವಿದೆ ಎಂದು ಹಣಕಾಸು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.ರೈಲು: ಸೇವೆ ತೆರಿಗೆ ಇಲ್ಲ

ನವದೆಹಲಿ(ಪಿಟಿಐ):
`ಸೇವಾ ತೆರಿಗೆ~ ಹಿನ್ನೆಲೆಯಲ್ಲಿ ರೈಲು ಪ್ರಯಾಣ ಮತ್ತು ಸರಕು ಸಾಗಣೆ ದರ ಏರುವುದೇ ಎಂಬ ಕುತೂಹಲಕ್ಕೆ `ಸೆಪ್ಟೆಂಬರ್ 30~ರವರೆಗೂ ಇಲ್ಲ ಎಂಬ ಸಮಾಧಾನದ ಉತ್ತರ ದೊರಕಿದೆ.ಮುಂದಿನ ಮೂರು ತಿಂಗಳವರೆಗೂ ರೈಲು ಪ್ರಯಾಣ ಮತ್ತು ಸರಕು ಸಾಗಣೆ ವ್ಯವಸ್ಥೆಯನ್ನು `ಶೇ 12ರ ಸೇವಾ ತೆರಿಗೆ ವ್ಯಾಪ್ತಿಗೆ ತರುವುದಿಲ್ಲ~ ಎಂದು ಕೇಂದ್ರ ಸರ್ಕಾರ ಸೋಮವಾರ ಸ್ಪಷ್ಟಪಡಿಸಿದೆ. ಇದಕ್ಕೆ ಮುನ್ನ, ಹೊಸ ತೆರಿಗೆ ನೀತಿ ಭಾನುವಾರ ಜಾರಿಗೆ ಬಂದಿದ್ದು, ರೈಲು ಪ್ರಯಾಣ-ಸರಕು ಸಾಗಣೆಯನ್ನೂ `ಸೇವೆ~ ವ್ಯಾಪ್ತಿಗೆ ತರಲಾಗಿದ್ದಿತು.ರೂಪಾಯಿಗೆ ಮತ್ತೆ ಮೌಲ್ಯ

ಮುಂಬೈ(ಪಿಟಿಐ):
ರೂಪಾಯಿ ಮತ್ತೆ ಶಕ್ತಿ ಪಡೆದುಕೊಳ್ಳುತ್ತಿದ್ದು, ಅಮೆರಿಕದ ಡಾಲರ್ ಎದುರು ಸೋಮವಾರ 18 ಪೈಸೆ ಮೌಲ್ಯ ಹೆಚ್ಚಿಸಿಕೊಂಡಿತು. ಆ ಮೂಲಕ ್ಙ55.43ರಷ್ಟು ಬೆಲೆ ಪಡೆದುಕೊಂಡಿತು. ಇದು ಕಳೆದ ಎರಡು ವಾರಗಳಲ್ಲಿಯೇ ರೂಪಾಯಿಯ ಗರಿಷ್ಠ ಮೌಲ್ಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry