ಸಂಕ್ಷಿಪ್ತ ವಿದೇಶ ಸುದ್ದಿ

7

ಸಂಕ್ಷಿಪ್ತ ವಿದೇಶ ಸುದ್ದಿ

Published:
Updated:

ಸಹೋದ್ಯೋಗಿಯಿಂದ ಆರು ಪೊಲೀಸರ ಹತ್ಯೆ

ಕಂದಹಾರ್ (ಎಎಫ್‌ಪಿ): ದಕ್ಷಿಣ ಆಫ್ಘಾನಿಸ್ತಾನದ ಗಿರ್ಶೆಕ್ ಜಿಲ್ಲೆಯಲ್ಲಿ ಸಹೋದ್ಯೋಗಿಯೊಬ್ಬ ಆರು ಪೊಲೀಸರಿಗೆ ವಿಷ ಉಣಿಸಿ, ನಂತರ ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಶನಿವಾರ ನಡೆದಿದೆ.ಕಡಲ್ಗಳ್ಳರ ಬಂಧನ

ಕ್ವಾಲಾಲಂಪುರ (ಪಿಟಿಐ): ಮಲೇಷ್ಯಾದ ಬೊರ್ನೊ ದ್ವೀಪದ ಬಳಿ ಸರಕು ಸಾಗಾಣೆ ಹಡಗನ್ನು ಅಪಹರಿಸಲು ಯತ್ನಿಸಿದ ಇಂಡೋನೇಷ್ಯಾದ ನಾಲ್ವರು ಕಡಲ್ಗಳ್ಳರನ್ನು ನೌಕಾ ಪಡೆ ಬಂಧಿಸಿದೆ. ಹಡಗಿನಲ್ಲಿದ್ದ ನಾಲ್ವರು ಭಾರತೀಯರೂ ಸೇರಿದಂತೆ ಒಟ್ಟು ಒಂಬತ್ತು ಸಿಬ್ಬಂದಿ ಸುರಕ್ಷಿತವಾಗಿ ಪಾರಾಗಿದ್ದಾರೆ. ಪಾಕ್‌ನಲ್ಲಿ ಚರ್ಚ್‌ಗಳ ಮೇಲೆ ದಾಳಿ

ಇಸ್ಲಾಮಾಬಾದ್ (ಪಿಟಿಐ): ಕಳೆದ ಹತ್ತು ದಿನದಲ್ಲಿ ದಕ್ಷಿಣ ಪಾಕಿಸ್ತಾನ, ಕರಾಚಿ ಮುಂತಾದೆಡೆ ದುಷ್ಕರ್ಮಿಗಳು ಎರಡು ಚರ್ಚ್‌ಗಳ ಮೇಲೆ ದಾಳಿ ನಡೆಸಿದ್ದಾರೆ.ಭಾರತ-ಪಾಕ್‌ಗೆ ಒಂದೇ ಕರೆನ್ಸಿ: ಪಿಪಿಪಿ ಸಲಹೆ

ಲಾಹೋರ್ (ಪಿಟಿಐ):ವ್ಯಾಪಾರ ಸಂಬಂಧ ವೃದ್ಧಿಸಲು ಭಾರತ ಮತ್ತು ಪಾಕಿಸ್ತಾನಗಳು ಒಂದೇ ಬಗೆಯ ಕರೆನ್ಸಿ (ನೋಟು) ಚಲಾವಣೆಗೆ ತರುವ ನಿಟ್ಟಿನಲ್ಲಿ ಯೋಚಿಸುವ ಅಗತ್ಯವಿದೆ ಎಂದು ಆಡಳಿತಾರೂಢ ಪಾಕಿಸ್ತಾನ ಪೀಪಲ್ಸ್ ಪಾರ್ಟಿ (ಪಿಪಿಪಿ) ಮುಖಂಡ ಜಹಾಂಗೀರ್ ಬದ್ರ್ ಸಲಹೆ ಮಾಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry