ಸಂಕ್ಷಿಪ್ತ ವಿದೇಶ ಸುದ್ದಿ

7

ಸಂಕ್ಷಿಪ್ತ ವಿದೇಶ ಸುದ್ದಿ

Published:
Updated:

ಅಂತಿಮ ಸುತ್ತಿಗೆ ಝುಂಪಾ ಕಾದಂಬರಿ

ವಾಷಿಂಗ್ಟನ್‌ (ಐಎಎನ್‌ಎಸ್‌)
:  ಅಮೆರಿಕದ ರಾಷ್ಟ್ರೀಯ ಪುಸ್ತಕ ಪ್ರಶಸ್ತಿಯ ಅಂತಿಮ ಸುತ್ತಿಗೆ ಪುಲಿಟ್ಜರ್‌ ಪ್ರಶಸ್ತಿ ಪುರಸ್ಕೃತೆ, ಭಾರತ ಮೂಲದ ಝಂಪಾ ಲಾಹಿರಿ ಅವರ ಕಾದಂಬರಿ ಆಯ್ಕೆಯಾಗಿದೆ.  

ಇವರ ಕಾದಂಬರಿ ‘ದಿ ಲೊಲ್ಯಾಂಡ್‌’ ಮ್ಯಾನ್‌ ಬುಕರ್‌ ಪ್ರಶಸ್ತಿಯ ಅಂತಿಮ ಸುತ್ತಿಗೆ  ಕೂಡ ಆಯ್ಕೆಯಾಗಿದೆ.ಕಕ್ಕರ್‌ ವರ್ಣಚಿತ್ರಕ್ಕೆ ` 2.5 ಕೋಟಿ

ನ್ಯೂಯಾರ್ಕ್‌ (ಪಿಟಿಐ): ಭುಪೇನ್‌ ಕಕ್ಕರ್‌ ಅವರ ‘ಅಮೆರಿಕನ್‌ ಸರ್ವೆ ಆಫೀಸರ್‌’ ಎಂಬ ಶೀರ್ಷಿಕೆಯ ತೈಲ ವರ್ಣ ಚಿತ್ರವು ಇತ್ತೀಚೆಗೆ ನಡೆದ ಹರಾಜಿನಲ್ಲಿ ‘ ` 2.5 ಕೋಟಿಗೆ ಮಾರಾಟವಾಗಿದೆ.ಯೆಮನ್‌ ಸ್ಫೋಟ: 65 ಸಾವು

ಅಡೆನ್‌ (ಯೆಮನ್‌):
ಶಾಬ್ವಾದ ಅಜ್ಜಾನ್‌ ಸೇನಾನೆಲೆ ಮತ್ತು ಪೊಲೀಸ್‌ ಪ್ರಧಾನ ಕಚೇರಿ  ಮೇಲೆ ಶುಕ್ರವಾರ ಏಕಕಾಲಕ್ಕೆ ನಡೆದ ಸರಣಿ ಆತ್ಮಹತ್ಯಾ ಕಾರ್‌ ಬಾಂಬ್‌ ಸ್ಫೋಟದಲ್ಲಿ ಯೋಧರು ಮತ್ತು ಮತ್ತು ಭದ್ರತಾ ಸಿಬ್ಬಂದಿ ಸೇರಿ 65 ಜನರು ಮೃತಪಟ್ಟಿದ್ದಾರೆ.ಅಲ್‌ ಖೈದಾ  ಆತ್ಮಹತ್ಯಾ ದಳದ ಸದಸ್ಯರು ಈ ದಾಳಿ ನಡೆಸಿದ್ದು, ಘಟನೆಯಲ್ಲಿ ಸೇನೆಯ ಐವರು ಹಿರಿಯ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. 38 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ.ಮಂಗಳನಲ್ಲಿ ಜೀವಿಯ ಕುರುಹು ಇಲ್ಲ

ವಾಷಿಂಗ್ಟನ್‌ (ಐಎಎನ್‌ಎಸ್‌
): ‘ಮಂಗಳ ಗ್ರಹದಲ್ಲಿ ಜೀವಿಯ ಕುರುಹು ಇರಲು ಸಾಧ್ಯವಿಲ್ಲ’ ಎಂಬ ಸ್ಪಷ್ಟ ಸಂದೇಶವನ್ನು ಕ್ಯೂರಿಯಾಸಿಟಿ ರೋವರ್‌ ಅಂಗಾರಕನ ಅಂಗಳದಿಂದ ಕಳುಹಿಸಿದೆ.  ಜೀವಿಗಳಿಗೆ ಅಗತ್ಯವಾದ ಮಿಥೇನ್‌ ಎಂಬ ಅನಿಲದ ಲವಲೇಶವೂ  ಮಂಗಳನ ವಾತಾವರಣದಲ್ಲಿ ಕಂಡುಬಂದಿಲ್ಲ ಎಂದು ನಾಸಾ ಸ್ಪಷ್ಟಪಡಿಸಿದೆ. ಇದರಿಂದಾಗಿ ಮಂಗಳನ ಅಂಗಳದಲ್ಲಿ ಜೀವಿಯ ಕುರುಹುವಿನ ಹುಡುಕಾಟದಲ್ಲಿದ್ದ ವಿಜ್ಞಾನಿಗಳ ಕುತೂಹಲಕ್ಕೆ ತೆರೆ ಬಿದ್ದಿದೆ.ಮನೀಷ್‌ ಷಾ ಅಮೆರಿಕ ನ್ಯಾಯಾಧೀಶ

ವಾಷಿಂಗ್ಟನ್‌ (ಐಎಎನ್ಎಸ್‌
): ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಅವರು ತಮ್ಮ ತವರು ರಾಜ್ಯ ಇಲಿ­ನಾಯ್‌ನ ಉತ್ತರ ಜಿಲ್ಲೆ ನ್ಯಾಯಾಧೀಶ­ರನ್ನಾಗಿ ಭಾರತ ಸಂಜಾತ ಮನೀಷ್‌ ಎಸ್‌. ಷಾ ಅವರನ್ನು ನೇಮಕ ಮಾಡಿದ್ದಾರೆ.ನ್ಯೂಯಾರ್ಕ್‌ನಲ್ಲಿ ಜನಿಸಿರುವ ಮನೀಷ್‌ ಷಾ, 2001ರಿಂದ ಇಲಿನಾಯ್ ಉತ್ತರ ಜಿಲ್ಲೆಯಲ್ಲಿ ಸಹಾಯಕ ಅಟಾರ್ನಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸದ್ಯ  ಅಪರಾಧ ವಿಭಾಗದ ಮುಖ್ಯಸ್ಥರಾಗಿದ್ದಾರೆ.ನ್ಯೂಜಿಲೆಂಡ್‌ ಸಲಿಂಗಿಗಳ ಸ್ವರ್ಗ

ವೆಲ್ಲಿಂಗ್ಟನ್‌ (ಐಎಎನ್‌ಎಸ್‌)
: ಸಲಿಂಗ ವಿವಾಹವನ್ನು ನ್ಯೂಜಿ­ಲೆಂಡ್‌ ಸರ್ಕಾರ ಕಾನೂನುಬದ್ಧಗೊಳಿಸಿದ ನಂತರ  ವಿವಾಹ­ಕ್ಕಾಗಿಯೇ ಇಲ್ಲಿಗೆ ಬರುವ ವಿದೇಶಿ ಸಲಿಂಗಿಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದೆ.ಈ ಕಾನೂನು ಜಾರಿಯಾದ ನಂತರದ ಒಂದೇ ತಿಂಗಳಲ್ಲಿ 25ಕ್ಕೂ ಹೆಚ್ಚು ಸಲಿಂಗಿಗಳ  ಜೋಡಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ.ಚೀನಾ, ಬ್ರಿಟನ್, ಅಮೆರಿಕ ಸೇರಿ ವಿದೇಶಗಳಿಂದ ಮದುವೆ­ಯಾ­ಗುವ ಕಾರಣಕ್ಕಾಗಿಯೇ ಸಲಿಂಗಿಗಳು ಇಲ್ಲಿಗೆ ಬರುತ್ತಿ­ದ್ದಾರೆ. ಆಗಸ್ಟ್‌ 19ರಿಂದ ಇಲ್ಲಿಯವರೆಗೆ ನೋಂದಣಿ­ಯಾದ 82 ಸಲಿಂಗ ವಿವಾಹಗಳ ಪೈಕಿ 24 ಜೋಡಿಗಳು ವಿದೇಶಿ­ಯರು. ಉಳಿದವರು ಸ್ಥಳೀಯರು ಎಂಬ ಅಂಕಿ, ಅಂಶ­ಗಳ­ನ್ನು ಜನನ, ಮರಣ ಮತ್ತು ವಿವಾಹ ನೋಂದಣಾ­ಧಿಕಾರಿ­ಗಳು ತಿಳಿಸಿದ್ದಾರೆ.ಪ್ರಪಂಚದ ಮೂಲೆ, ಮೂಲೆಗಳಿಂದ ವಿವಾಹ ನೋಂದಣಿಗಾಗಿ ಸಲಿಂಗಿಗಳು  ನ್ಯೂಜಿಲೆಂಡ್‌ಗೆ ಬರುತ್ತಿರು­ವುದು ಸಂತಸದ ವಿಷಯ. ಬರುವ ದಿನಗಳಲ್ಲಿ ಈ ಸಂಖ್ಯೆ ಇನ್ನೂ ಹೆಚ್ಚಾಗಲಿದೆ ಎನ್ನುತ್ತಾರೆ ಜೆಫ್‌ ಮೊಂಟ್ಗೊಮೆರಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry