ಸಂಕ್ಷಿಪ್ತ ಸುದ್ದಿಗಳು

6

ಸಂಕ್ಷಿಪ್ತ ಸುದ್ದಿಗಳು

Published:
Updated:

ಕೈರೊ (ಪಿಟಿಐ): ಈಜಿಪ್ಟ್‌ನ ಪದಚ್ಯುತ ಅಧ್ಯಕ್ಷ ಮೊಹಮದ್ ಮೊರ್ಸಿ ಅವರನ್ನು ಹಿಂಸಾಕೃತ್ಯ ನಡೆಸಿದ ಮತ್ತು ಹಿಂಸೆಗೆ ಪ್ರಚೋದಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆಗೆ ಗುರಿಪಡಿಸಲಾಗುವುದು ಎಂದು ಸರ್ಕಾರಿ ಸ್ವಾಮ್ಯದ ಟಿವಿ ಚಾನೆಲ್ ವರದಿ ಮಾಡಿದೆ. ಜೈಲಿನಲ್ಲಿರುವವರ ಪಟ್ಟಿ ಹಸ್ತಾಂತರ

ಇಸ್ಲಾಮಾಬಾದ್ (ಇಎಎನ್‌ಎಸ್):  ಭಾರತದ ವಿವಿಧ ಜೈಲಿನಲ್ಲಿರುವ ಒಟ್ಟು 386 ಪಾಕಿಸ್ತಾನಿಯರ ಪಟ್ಟಿಯನ್ನು  ಭಾರತ ಪಾಕಿಸ್ತಾನಕ್ಕೆ ನೀಡಿದೆ. ಅಧಿಕೃತ ದಾಖಲೆಗಳ ಪ್ರಕಾರ, ಭಾರತದ ಜೈಲಿನಲ್ಲಿರುವ ಪಾಕಿಸ್ತಾನಿಯರ ಸಂಖ್ಯೆ 485 ಎನ್ನಲಾಗಿದೆ.ಜೆಹಾದಿ ಪರ ಪಠ್ಯಕ್ಕೆ ಇಮ್ರಾನ್ ಪಟ್ಟು

ಇಸ್ಲಾಮಾಬಾದ್ (ಪಿಟಿಐ): ಭಯೋತ್ಪಾದಕರ ಹಾವಳಿ ಹೆಚ್ಚಿರುವ ಖೈಬರ್- ಪಖ್ತುನ್‌ಕ್ವಾ ಪ್ರಾಂತ್ಯದ ಶಾಲೆಗಳ ಪಠ್ಯಪುಸ್ತಕದಿಂದ ಜೆಹಾದಿ ಪರ ಪಠ್ಯಕ್ರಮವನ್ನು  ತೆಗೆದುಹಾಕಿರುವುದನ್ನು ಮಾಜಿ ಕ್ರಿಕೆಟಿಗ ಮತ್ತು ರಾಜಕಾರಣಿ ಇಮ್ರಾನ್ ಖಾನ್ ವಿರೋಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry