ಸೋಮವಾರ, ಮೇ 10, 2021
26 °C

ಸಂಕ್ಷಿಪ್ತ ಸುದ್ದಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಳೇಗಣಸಿದ್ಧಿ, ಮಹಾರಾಷ್ಟ್ರ (ಪಿಟಿಐ): ಅಣ್ಣಾ ಹಜಾರೆ ಅವರಿಗೆ ಮಂಗಳವಾರ ಇಡೀ ದಿನ `ಮಾತನಾಡುವ ಸರದಿ (ಟಾಕಥಾನ್)~.ಅವರು ಪ್ರಬಲ ಲೋಕಪಾಲ ಮಸೂದೆಗಾಗಿ ಒತ್ತಾಯಿಸಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ತಿಂಗಳು ಸುಮಾರು 12 ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿ ಯಶಸ್ವಿಯಾದ ನಂತರ ಇದೇ ಮೊದಲ ಬಾರಿಗೆ ಇಲ್ಲಿ ಸುಮಾರು 17 ಟಿವಿ ಚಾನೆಲ್‌ಗಳಿಗೆ ಸತತ ಸುಮಾರು 11 ಗಂಟೆಗಳ ಕಾಲ ಸಂದರ್ಶನ ನೀಡಿದರು.ನಿತಿನ್ ಗಡ್ಕರಿ ಚೇತರಿಕೆ

ಮುಂಬೈ (ಪಿಟಿಐ): ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ  ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಮಧುಮೇಹದಿಂದ ಬಳಲುತ್ತಿದ್ದಾರೆ.ಅವರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಇದೀಗ ನಿಯಂತ್ರಣದಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅವರು ಇನ್ನೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದು, ನಂತರ ಕೆಲವು ವಾರಗಳ ಕಾಲ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ಮಾಡಿದ್ದಾರೆ.ಗಾಯಾಳುಗಳಿಗೆ ಫ್ಲ್ಯಾಟ್: ಹೈಕೋರ್ಟ್ ಒಪ್ಪಿಗೆ

ನವದೆಹಲಿ (ಐಎಎನ್‌ಎಸ್): ಹೈಕೋರ್ಟ್ ಆವರಣದಲ್ಲಿ ಸಂಭವಿಸಿದ ಸ್ಫೋಟದಲ್ಲಿ ಸತ್ತವರ ಕುಟುಂಬ ಹಾಗೂ ಗಾಯಗೊಂಡವರಿಗೆ ವಾಸಕ್ಕೆ ಫ್ಲ್ಯಾಟ್‌ಗಳನ್ನು ಆದ್ಯತೆ ಮೇಲೆ ನೀಡುವ ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಪ್ರಸ್ತಾವನೆಯನ್ನು ದೆಹಲಿ ಹೈಕೋರ್ಟ್ ಒಪ್ಪಿಕೊಂಡಿದೆ.1981ರ ಯೋಜನೆಯನ್ವಯ ಉತ್ತರ ದೆಹಲಿಯ ರೋಹಿಣಿ ವಸತಿ ಸಮುಚ್ಚಯದ ಫ್ಲ್ಯಾಟ್‌ಗಳನ್ನು ಆದ್ಯತೆಯ ಮೇಲೆ ನೀಡಲು ದೆಹಲಿ ಅಭಿವೃದ್ಧಿ ಪ್ರಾಧಿಕಾರ ಮುಂದೆ ಬಂದಿದೆ. ಉದ್ದೇಶಿತ ಯೋಜನೆಯ ಪೂರ್ಣ ವಿವರವನ್ನು ಸಲ್ಲಿಸುವಂತೆ ನ್ಯಾಯಾಲಯ ಪ್ರಾಧಿಕಾರಕ್ಕೆ ಸೂಚನೆ ನೀಡಿದೆ.ಸಿಡಬ್ಲ್ಯುಜಿ: ಸಿಬಿಐನಿಂದ ಹೊಸ  ಪ್ರಕರಣ ದಾಖಲು

ನವದೆಹಲಿ (ಪಿಟಿಐ): ಕಾಮನ್‌ವೆಲ್ತ್ ಕ್ರೀಡಾಕೂಟಗಳಿಗಾಗಿ (ಸಿಡಬ್ಲ್ಯುಜಿ) ಇಲ್ಲಿನ ಶ್ರೀ ಫೋರ್ಟ್ ಕ್ರೀಡಾ ಸಂಕೀರ್ಣದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಿಸುವಾಗ ನಡೆದ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ಬುಧವಾರ ಹೊಸ ಪ್ರಕರಣ ದಾಖಲಿಸಿದ್ದು, ಜೊತೆಗೆ ದೆಹಲಿ ಮತ್ತು ಮುಂಬೈನಲ್ಲಿ ಕಾರ್ಯಾಚರಣೆಯನ್ನೂ ಕೈಗೊಂಡಿದೆ.

ಬೆಳಿಗ್ಗೆ ಸಿಡಬ್ಲ್ಯುಜಿ ಹಗರಣದಲ್ಲಿ 15ನೇ ಎಫ್‌ಐಆರ್ ದಾಖಲಿಸಿದ ನಂತರ ಸಿಬಿಐ ಅಧಿಕಾರಿಗಳ ತಂಡವು ದೆಹಲಿ, ಮುಂಬೈ ಹಾಗೂ ಎನ್‌ಸಿಆರ್‌ನ (ರಾಷ್ಟ್ರೀಯ ರಾಜಧಾನಿ ಪ್ರದೇಶ) 21 ಸ್ಥಳಗಳ ಮೇಲೆ ದಾಳಿ ನಡೆಸಿತು.

ಕ್ರೀಡಾಕೂಟಗಳ ಮೇಲಿನ ಮಹಾಲೇಖಪಾಲರ (ಸಿಎಜಿ) ವರದಿಯನ್ನು ಅಧ್ಯಯನ ಮಾಡಲು ಮತ್ತು ಯಾವುದೇ ಹೊಸ ಪ್ರಕರಣ ದಾಖಲಿಸಬಹುದೇ ಎಂಬುದನ್ನು ತಿಳಿಯಲು ಸರ್ಕಾರ ಕಳೆದ ತಿಂಗಳು ವಿಶೇಷ ತನಿಖಾ ತಂಡ (ಸಿಟ್) ರಚಿಸಿದ ನಂತರ ಸಿಬಿಐ ಇದೀಗ ಮೊದಲ ಪ್ರಕರಣವನ್ನು ದಾಖಲಿಸಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.