ಗುರುವಾರ , ಮೇ 13, 2021
24 °C

ಸಂಕ್ಷಿಪ್ತ ಸುದ್ದಿ /ಕ್ರೀಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಜ್ಯ ರ‍್ಯಾಂಕಿಂಗ್  ಬ್ಯಾಡ್ಮಿಂಟನ್:   ಶಿಖಾ, ಧೃತಿಗೆ ಸಿಂಗಲ್ಸ್ ಕಿರೀಟ

ದಾವಣಗೆರೆ:
ನೇರ ಸೆಟ್‌ಗಳ ಸೆಣಸಾಟದಲ್ಲಿ ಎರಡನೇ ಶ್ರೇಯಾಂಕದ ಮಹಿಮಾ ಅಗರ್‌ವಾಲ್ ಮೇಲೆ ನೇರ ಸೆಟ್‌ಗಳ ಜಯ ಪಡೆದ ನಾಲ್ಕನೇ ಶ್ರೇಯಾಂಕದ ಶಿಖಾ ಗೌತಮ್, ಲಿ-ನಿಂಗ್ 5 ಸ್ಟಾರ್ ರಾಜ್ಯ ರ‍್ಯಾಂಕಿಂಗ್  ಬ್ಯಾಡ್ಮಿಂಟನ್ ಟೂರ್ನಿಯ 19 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು.ನಗರದ ಸುಭಾಷಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ, ಶಿಖಾ 21-16, 21-19ರಿಂದ ಅಗರ್‌ವಾಲ್ ಎದುರು ಜಯ ಗಳಿಸಿದರು.ಸೆಮಿಫೈನಲ್‌ನಲ್ಲಿ 21-18, 21-19ರಿಂದ ಅಗ್ರಶ್ರೇಯಾಂಕದ ಮೀರಾ ಮಹದೇವನ್ ವಿರುದ್ಧ ಶಿಖಾ ಜಯ ಸಾಧಿಸ್ದ್ದಿದಳು. ಅಪೇಕ್ಷಾ ನಾಯಕ್ ವಿರುದ್ಧ 21-13, 21-11ರಿಂದ ಜಯ ಗಳಿಸಿದ್ದ ಮಹಿಮಾ ಅಗರ್‌ವಾಲ್ ಫೈನಲ್‌ನಲ್ಲಿ  ಎಡವಿದಳು.13 ವರ್ಷದೊಳಗಿನವರ ವಿಭಾಗದಲ್ಲಿ ಉತ್ತಮ ಸಾಮರ್ಥ್ಯ ತೋರಿದ 3ನೇ ಶ್ರೇಯಾಂಕದ ಧೃತಿ ಯತೀಶ್ 21-14, 21-13ರಿಂದ ಅಗ್ರಶ್ರೇಯಾಂಕದ ಶಿವಾನಿ ಎ.ಪತಿ ವಿರುದ್ಧ ಸುಲಭ ಜಯಗಳಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಳು.ಸೆಮಿಫೈನಲ್‌ನಲ್ಲಿ ಶಿವಾನಿ 23-21, 21-13ರಿಂದ 4ನೇ ಶ್ರೇಯಾಂಕದ ಡಿ.ಶೀತಲ್ ವಿರುದ್ಧ; ಧೃತಿ 21-11, 21-9ರಿಂದ ಮೇಧಾ ಶಶಿಧರನ್ ವಿರುದ್ಧ ಜಯಗಳಿಸಿದ್ದರು.ಟೆನಿಸ್: ಅಂಕಿತಾ ರನ್ನರ್‌ಅಪ್

ನವದೆಹಲಿ (ಪಿಟಿಐ):
ಭಾರತದ ಅಂಕಿತಾ ರೈನಾ ಅವರು ಉಜ್ಬೆಕಿಸ್ತಾನದ ಕಾರ್ಷಿಯಲ್ಲಿ ನಡೆದ ಐಟಿಎಫ್ ಮಹಿಳಾ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ನಿರಾಸೆ ಅನುಭವಿಸಿದರು.ಈ ಟೂರ್ನಿಯಲ್ಲಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿದ್ದ ಅಂಕಿತಾ, 3-6,3-6ರ ನೇರ ಸೆಟ್‌ಗಳಿಂದ ಸ್ಥಳೀಯ ಸಬೀನಾ ಶರ್ಪೋವಾ ಎದುರು ಸೋತರು.`ಈ ಟೂರ್ನಿಯಲ್ಲಿ ನಾನು ಮೊದಲ ಬಾರಿಗೆ ಫೈನಲ್‌ನಲ್ಲಿ ಆಡುತ್ತಿದ್ದೆ. ತುಂಬಾ ಆತಂಕಗೊಂಡಿದ್ದೆ. ಆದ್ದರಿಂದ ಸ್ಥಿರ ಪ್ರದರ್ಶನ ನೀಡಲಾಗಲಿಲ್ಲ' ಎಂದು ಅಂಕಿತಾ ಪ್ರತಿಕ್ರಿಯಿಸಿದ್ದಾರೆ.ಈ ಟೂರ್ನಿಯ ಫೈನಲ್‌ನಲ್ಲಿ ಆಡುವ ಮೂಲಕ ಅಂಕಿತಾ, ತಮ್ಮ ರ‌್ಯಾಂಕಿಂಗ್‌ಗೆ 34 ಪಾಯಿಂಟ್‌ಗಳನ್ನು ಸೇರಿಸಿಕೊಂಡಿದ್ದಾರೆ.

ಇದೇ ಟೂರ್ನಿಯ ಡಬಲ್ಸ್‌ನಲ್ಲಿ ಮೊದಲ ಸುತ್ತಿನಲ್ಲೇ ಹೊರ ಬಿದ್ದಿದ್ದ ಅಂಕಿತಾ, ಮುಂದಿನ ವಾರ ಬುಖರಾದಲ್ಲಿ ನಡೆಯಲಿರುವ ಐಟಿಎಫ್ ಟೂರ್ನಿಯಲ್ಲಿ ಆಡಲಿದ್ದಾರೆ.ಬೋಲ್ಟ್ ತಂದೆಯ ಹಣ ಕಳವು

ಟ್ರೆಲಾನಿ, ಜಮೈಕಾ (ಐಎಎನ್‌ಎಸ್/ಸಿಎಂಸಿ):
ಜಮೈಕಾದ ಒಲಿಂಪಿಕ್ ಚಾಂಪಿಯನ್ ಉಸೇನ್ ಬೋಲ್ಟ್ ಅವರ ತಂದೆ ವೆಲ್ಲೆಸ್ಲಿ ಬೋಲ್ಟ್ ಅವರ ಬಳಿ ಇದ್ದ ಸುಮಾರು 2.75 ಕೋಟಿ ರೂಪಾಯಿಗಳಷ್ಟು ಹಣ ಕಳುವಾಗಿದೆ.ಇಲ್ಲಿನ ಮಾರುಕಟ್ಟೆಯ ಬಳಿ ನಿಲ್ಲಿಸಿದ್ದ ಅವರ ಟ್ರಕ್‌ನ ಕಿಟಕಿಯ ಕನ್ನಡಿಯನ್ನು ಒಡೆದು ಹಣ ಕಳವು ಮಾಡಲಾಗಿದೆ ಎಂದು ಫಾಲ್‌ಮೌತ್ ಠಾಣೆ ಪೊಲೀಸರು ತಿಳಿಸಿದ್ದಾರೆ.ಚೆಸ್: ಪ್ರಶಸ್ತಿ ಸುತ್ತಿನಿಂದ ಪ್ರಸನ್ನ ಹೊರಕ್ಕೆ

ಅಲ್ಬೇನಾ, ಬಲ್ಗೇರಿಯಾ (ಪಿಟಿಐ):
ಭಾರತದ ವಿಷ್ಣು ಪ್ರಸನ್ನ ಅವರು ಇಲ್ಲಿ ನಡೆಯುತ್ತಿರುವ ಗ್ರ್ಯಾಂಡ್ ಯುರೋಪ್‌ಅಲ್ಬೇನಾ ಅಂತರರಾಷ್ಟ್ರೀಯ ಚೆಸ್ ಟೂರ್ನಿಯಲ್ಲಿ ಮತ್ತೊಂದು ಸೋಲು ಕಂಡಿದ್ದಾರೆ.ಟೂರ್ನಿಯ ಏಳನೇ ಸುತ್ತಿನಲ್ಲಿ ಪ್ರಸನ್ನ, ಉಕ್ರೇನ್‌ನ ವಿಟಲಿಯ್ ಬೆರ್ನಾಡ್‌ಸ್ಕಿಯ್ ಎದುರು ಸೋತರು. ಹೀಗಾಗಿ ಟೂರ್ನಿಯಲ್ಲಿ ಪ್ರಶಸ್ತಿ ಗಳಿಸುವ ಪ್ರಸನ್ನ ಕನಸು ಭಗ್ನಗೊಂಡಿತು. ಏಳನೇ ಸುತ್ತಿನ ಇತರ ಪಂದ್ಯಗಳಲ್ಲಿ ಅಶ್ವಿನ್ ಜಯರಾಮ್ ಅವರು ಬಲ್ಗೇರಿಯಾದ ವಸಿಲ್ ಸ್ಪಾಸೊವ್ ಜೊತೆಗೆ; ಅನುರಾಗ್ ಮಹಮಲ್, ಅಂರ್ಜೆಟೀನಾದ ಸ್ಯಾಂಡ್ರೊ ಮರೆಕೊ ಜೊತೆಗೆ; ಸ್ವಪ್ನಿಲ್ ಧೋಪಡೆ, ಐಸ್‌ಲ್ಯಾಂಡ್‌ನ ದಗುರ್ ಅಂಗ್ರಿಮ್‌ಸನ್ ಜೊತೆಗೆ ಪಾಯಿಂಟ್ಸ್ ಹಂಚಿಕೊಂಡಿದ್ದಾರೆ. ಅಭಿಜಿತ್ ಗುಪ್ತಾ, ಬಲ್ಗೇರಿಯಾದ ಮರಿಯೊ ವುಟೊವ್ ಅವರನ್ನು; ಎನ್.ರಾಘವಿ, ಬಲ್ಗೇರಿಯಾದ ಇವಾಯ್ಲ್ ಅತನಾಸೊವ್ ಅವರನ್ನು ಮಣಿಸಿದ್ದಾರೆ.ಶೂಟಿಂಗ್‌ನಲ್ಲಿ ಭಾರತಕ್ಕೆ ಚಿನ್ನ

ನವದೆಹಲಿ (ಪಿಟಿಐ):
ಭಾರತ ತಂಡ ಜರ್ಮನಿಯ ಸುಹ್ಲ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಜೂನಿಯರ್ ಮಹಿಳಾ ಶೂಟಿಂಗ್ ಚಾಂಪಿಯನ್‌ಷಿಷ್‌ನ 10 ಮೀಟರ್ಸ್ ಏರ್ ರೈಫಲ್ ಸ್ಪರ್ಧೆಯಲ್ಲಿ ಬಂಗಾರದ ಸಾಧನೆ ಮಾಡಿದೆ.ಶುಕ್ರವಾರ ನಡೆದ ಪಂದ್ಯದಲ್ಲಿ ಶ್ರೀಯಾಂಕಾ ಸದಾಂಗಿ, ಅಪೂರ್ವಿ ಚಂಡೆಲಾ ಹಾಗೂ ಮಂಪಿ ದಾಸ್ ಅವರನ್ನೊಳಗೊಂಡ ಭಾರತದ ತಂಡ, ಒಟ್ಟು 1235.3 ಪಾಯಿಂಟ್‌ಗಳೊಂದಿಗೆ ಚಿನ್ನ ಬಾಚಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.