ಶನಿವಾರ, ಮೇ 15, 2021
22 °C

ಸಂಕ್ಷಿಪ್ತ ಸುದ್ದಿ ರಾಷ್ಟೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

6 ಕೋಟಿ ಮಹಿಳೆಯರಿಂದ ಅಂತರ್ಜಾಲ ಬಳಕೆ

ಮುಂಬೈ (ಪಿಟಿಐ):
ದೇಶದಲ್ಲಿನ 15 ಕೋಟಿ ಅಂರ್ತಜಾಲ ಬಳಕೆದಾರರಲ್ಲಿ  ಶೇ 40ರಷ್ಟು  ಅಂದರೆ 6 ಕೋಟಿ ಮಹಿಳೆಯರೇ ಇದ್ದಾರೆ. ಅಲ್ಲದೇ ಅವರಲ್ಲಿ 2.4 ಕೋಟಿ ಮಹಿಳೆಯರು  ಇ-ಮೇಲ್ ನೋಡಲು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಚರ್ಚಿಸಲು, ಆನ್‌ಲೈನ್ ಮೂಲಕ ಖರೀದಿ ಮಾಡಲು ಪ್ರತಿದಿನ ಲಾಗಿನ್ ಆಗುತ್ತಾರೆ ಎಂದು ಶೋಧ ದೈತ್ಯ ತಾಣ ಗೂಗಲ್ ನಡೆಸಿದ ಅಧ್ಯಯನ ಹೇಳುತ್ತದೆ.ಮಹಿಳೆಯರಿಗೆ ಪ್ರಯಾಣ ದರ ರಿಯಾಯಿತಿ

ಜಯಲ್ (ರಾಜಸ್ತಾನ) (ಪಿಟಿಐ):
ರಾಜಸ್ತಾನ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳಲ್ಲಿ ಪ್ರಯಾಣ ಮಾಡುವ ಮಹಿಳೆಯರು ಪ್ರಯಾಣ ದರದಲ್ಲಿ ಶೇ 30 ರಷ್ಟು ರಿಯಾಯಿತಿ ಪಡೆಯಲಿದ್ದಾರೆ. ಇದೇ ಉದ್ದೇಶಕ್ಕಾಗಿ ಸರ್ಕಾರದಿಂದ  ್ಙ100ಕೋಟಿ ನಿಗದಿಪಡಿಸಲಾಗುವುದು ಎಂದು ಗುರುವಾರ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.ನೂತನ ದೋಣಿಗೆ ಚಾಲನೆ

ಚೆನ್ನೈ (ಪಿಟಿಐ):
ಪ್ರವಾಸಿಗರ ಅನುಕೂಲಕ್ಕಾಗಿ ಕನ್ಯಾಕುಮಾರಿ ದಡದಿಂದ ಸ್ವಾಮಿ ವಿವೇಕಾನಂದ ಶಿಲಾ ಸ್ಮಾರಕದವರೆಗೆ `ಎಂ.ಎಲ್.ವಿವೇಕಾನಂದ' ಎಂಬ ಹೆಸರಿನ ನೂತನ ದೋಣಿಯನ್ನು ತಮಿಳುನಾಡು ಸರ್ಕಾರ ಗುರುವಾರ ಲೋಕಾರ್ಪಣೆ ಮಾಡಿದೆ. ಸುಮಾರು 1.80 ಕೋಟಿ ವೆಚ್ಚದಲ್ಲಿ  ಈ ಹಡಗನ್ನು ಎಂ.ಎಲ್. ಭಾಗೀರಥಿ   ಹಡಗಿನ   ಬದಲು ಬಳಸಲಾಗುವುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.