ಶುಕ್ರವಾರ, ಮೇ 14, 2021
25 °C

ಸಂಕ್ಷಿಪ್ತ ಸುದ್ದಿ/ ವಿದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತೀಯರಿಗೆ ಸಹಾಯವಾಣಿ

ದುಬೈ (ಪಿಟಿಐ):
ಸೌದಿ ಅರೇಬಿಯಾದಿಂದ ಗಡೀಪಾರಿನ ಭೀತಿ ಎದುರಿಸುತ್ತಿರುವ ಅಲ್ಲಿನ ಭಾರತೀಯರಿಗೆ ನೆರವು ಒದಗಿಸಲು ಭಾರತ ಸಂಚಾರಿ ಸಹಾಯವಾಣಿ ಕೌಂಟರ್ ತೆರೆಯಲು ನಿರ್ಧರಿಸಿದೆ. ಜೂನ್ 8ರಿಂದ ಈ ಸಹಾಯವಾಣಿ ಕೌಂಟರ್‌ಗಳು ಕಾರ್ಯನಿರ್ವಹಿಸಲಿವೆ.ಇಲ್ಲಿನ ರಾಯಭಾರ ಕಚೇರಿಯ ರಾಜತಾಂತ್ರಿಕ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ಸ್ವಯಂ ಸೇವಕರು ಮತ್ತು ಅರೇಬಿಕ್ ಭಾಷೆ ಮಾತನಾಡುವ ಅಧಿಕಾರಿಗಳು, ಶುಮೇಷಿ ತರಹೀಲ್ ಮತ್ತು ರಿಯಾದ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತೀಯರಿಗೆ ಸಹಾಯ ಮಾಡಲಿದ್ದಾರೆ ಎಂದು ರಿಯಾದ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ತಿಳಿಸಿದೆ.

ಈಗಾಗಲೇ ಅಸ್ತಿತ್ವದಲ್ಲಿರುವ 24x7 ಸಹಾಯವಾಣಿಗಳನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ಈ ಕೌಂಟರ್‌ಗಳನ್ನು ತೆರೆಯಲಾಗುತ್ತಿದೆ. ಗುರುವಾರದವರೆಗೆ 50,000ಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದು, ಅವುಗಳ ಪರಿಶೀಲನೆ ಕಾರ್ಯ ಈಗಾಗಲೇ ಮುಗಿದಿದೆ ಎಂದು ಭಾರತ ರಾಯಭಾರ ಕಚೇರಿ ತಿಳಿಸಿದೆ. ಸೌದಿ ಅರೇಬಿಯಾದ ನೂತನ ಉದ್ಯೋಗ ನೀತಿಯಿಂದ ಸುಮಾರು 20 ಲಕ್ಷಕ್ಕೂ ಹೆಚ್ಚು ಭಾರತೀಯರು ಸಂಕಷ್ಟಕ್ಕೆ ಒಳಗಾಗಿದ್ದಾರೆ.ಶಂಕರ್ ಕಣ್ಣಿನ ಆಸ್ಪತ್ರೆ ಸೇವೆ ಶ್ಲಾಘನೆ

ಲಂಡನ್(ಪಿಟಿಐ):
ಬಡ ಜನರಿಗಾಗಿ ಹತ್ತುಲಕ್ಷ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆಗಳನ್ನು ನಡೆಸಿರುವ ಭಾರತದ ಶಂಕರ ಕಣ್ಣಿನ ಆಸ್ಪತ್ರೆ ಸೇವೆಯನ್ನು ಲಂಡನ್‌ನ ಹೌಸ್ ಆಫ್ ಕಾಮನ್ಸ್ ಕೊಂಡಾಡಿದೆ.ಹೌಸ್ ಆಫ್ ಕಾಮನ್ಸ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಲೇಬರ್ ಪಕ್ಷದ ಸಂಸದ ವೀರೇಂದ್ರ ಶರ್ಮಾ ಶಂಕರ್ ಕಣ್ಣಿನ ಆಸ್ಪತ್ರೆ ಈವರೆಗೆ ಹತ್ತುಲಕ್ಷ ಉಚಿತ ಶಸ್ತ್ರಚಿಕಿತ್ಸೆ ಪೂರೈಸಿರುವುದನ್ನು ಶ್ಲಾಘಿಸಿದರು.ಶಂಕರ ಆಸ್ಪತ್ರೆ ಸ್ಥಾಪಕ ಡಾ.ಆರ್.ವಿ.ರಮಣಿ ಮಾತನಾಡಿ, ಶಂಕರ ಆಸ್ಪತ್ರೆ 15ವರ್ಷಗಳಲ್ಲಿ ಬೃಹದಾಕಾರವಾಗಿ ಬೆಳೆದಿದೆ.  ಕರ್ನಾಟಕ ಸೇರಿದಂತೆ 11 ರಾಜ್ಯಗಳ 69 ಜಿಲ್ಲೆಗಳಲ್ಲಿ ಆಸ್ಪತ್ರೆ ಕಾರ್ಯನಿರ್ವಹಿಸುತ್ತಿದೆ. ಪ್ರತಿ ದಿನ 500 ಶಸ್ತ್ರಚಿಕಿತ್ಸೆಗಳನ್ನು ನಡೆಸಲಾಗುತ್ತಿದೆ' ಎಂದು ಹೇಳಿದರು.ರಾಣಿ ಎಲಿಜಬೆತ್ ಪತಿ ಆಸ್ಪತ್ರೆಗೆ ದಾಖಲು

ಲಂಡನ್(ಪಿಟಿಐ):
ಬ್ರಿಟನ್ ರಾಣಿ ಎಲಿಜಬೆತ್ ಅವರ ಪತಿ ಫಿಲಿಪ್ (91) ಹೊಟ್ಟೆ ಶಸ್ತ್ರಚಿಕಿತ್ಸೆಗಾಗಿ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.ಹೊಟ್ಟೆಯ ಸಂಪೂರ್ಣ ತಪಾಸಣೆ ನಂತರ ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದ್ದ ಕಾರಣ ಆಸ್ಪತ್ರೆಗೆ ಸೇರಿಸಲಾಯಿತು. ಅವರು ಸುಮಾರು ಎರಡು ವಾರಗಳ ಕಾಲ ಆಸ್ಪತ್ರೆಯಲ್ಲಿ ಉಳಿಯಲಿದ್ದಾರೆ ಎಂದು ಬಕಿಂಗ್‌ಹ್ಯಾಂ ಅರಮನೆ ಪ್ರಕಟಣೆ ತಿಳಿಸಿದೆ. ಸೌಂದರ್ಯ ಸ್ಪರ್ಧೆಗೆ ವಿರೋಧ

ಜಕಾರ್ತ(ಎಎಫ್‌ಪಿ):
ಇಂಡೋನೇಷ್ಯಾದ ಜಕಾರ್ತದಲ್ಲಿ ಇದೇ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ `ಮಿಸ್ ವರ್ಲ್ಡ್' ಸೌಂದರ್ಯ ಸ್ಪರ್ಧೆಗೆ ಮುಸ್ಲಿಂ ಮೂಲಭೂತವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಸ್ಪರ್ಧೆ ಆಯೋಜಕರು ಸ್ಪರ್ಧಿಗಳಿಗೆ ಬಿಕಿನಿಗಳನ್ನು ಧರಿಸಲು ಅನುಮತಿ ನೀಡದೇ ಇದ್ದರೂ ಈ ಸ್ಪರ್ಧೆ `ಅನೈತಿಕ' ಎಂದು ಮೂಲಭೂತವಾದಿಗಳು ದೂರಿದ್ದಾರೆ. ಈ ಸ್ಪರ್ಧೆ `ಮಹಿಳೆಯರ ದೇಹದಮಹಿಳೆಯರ ಮಾರಾಟ' ಎಂದಿರುವ ಹಿಜ್ಬ್ ಉತ್ ತಹ್ರಿರ್ ಗುಂಪು ಪ್ರತಿಭಟನೆ ನಡೆಸುವ ಬೆದರಿಕೆ ಹಾಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.