ಸಂಕ್ಷಿಪ್ತ ಸುದ್ದಿ

ಸೋಮವಾರ, ಮೇ 20, 2019
29 °C

ಸಂಕ್ಷಿಪ್ತ ಸುದ್ದಿ

Published:
Updated:

ಬಸ್ ಪಲ್ಟಿ: 23 ಸಾವು

ಡೆಹ್ರಾಡೂನ್ (ಪಿಟಿಐ): ಉತ್ತರಾಖಂಡದಲ್ಲಿ ಪ್ರಯಾಣಿಕರ ಬಸ್ ಕಂದಕಕ್ಕೆ ಉರುಳಿದ ಪರಿಣಾಮ 23 ಜನ ಸಾವನ್ನಪ್ಪಿ, ಇತರ 29 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚರ್ಕತ ಪ್ರದೇಶದಲ್ಲಿ ಬುಧವಾರ ನಡೆದಿದೆ.  13 ಜನರ ಗುರುತು ಪತ್ತೆ ಇಲ್ಲ

ಹೈದರಾಬಾದ್ (ಐಎಎನ್‌ಎಸ್): ರೈಲು ದುರಂತ ಸಂಭವಿಸಿ ಎರಡು ದಿನಗಳ ನಂತರವೂ ಮೃತರ ಗುರುತು ಪತ್ತೆ ಹಚ್ಚುವ  ಕಾರ್ಯ ಮುಂದುವರೆದಿದ್ದು,  ಗುರುತು ಪತ್ತೆ ಹಚ್ಚಲಾಗದ 13 ದೇಹಗಳು ನೆಲ್ಲೂರು ಆಸ್ಪತ್ರೆಯಲ್ಲೇ ಉಳಿದಿವೆ.ಕಟ್ಟಡದಿಂದ ಜಿಗಿದು ಸಾವು

ಹೈದರಾವಾದ್ (ಪಿಟಿಐ): ಇಲ್ಲಿನ ಕಾಚಿಬೌಲಿಯ ಇನ್ಫೋಸಿಸ್ ಕಟ್ಟಡದಿಂದ ಜಿಗಿದು ಮಹಿಳಾ ಉದ್ಯೋಗಿ ಎಸ್. ನೀಲಿಮಾ ಎಂಬುವವರು ಅನುಮಾನಾಸ್ಪದವಾಗಿ  ಮೃತಪಟ್ಟ ಘಟನೆ ನಡೆದಿದೆ.ವಿದೇಶಿ ಮಹಿಳೆ ಬಂಧನ

ತ್ರಿಶ್ಶೂರ್, ಕೇರಳ (ಪಿಟಿಐ): ಲಾಟರಿಮೊತ್ತ ರೂ 200 ಕೋಟಿ ನಿಮಗೆ ದೊರೆಯಲಿದೆ ಎಂದು ಎಸ್‌ಎಂಎಸ್‌ಗಳ ಮೂಲಕ ವ್ಯಕ್ತಿಯೊಬ್ಬರಿಗೆ ತಿಳಿಸಿ ವಂಚಿಸಲು ಯತ್ನಿಸಿದ ದಕ್ಷಿಣ ಆಫ್ರಿಕಾದ ಮೇರಿ ಹಬೀಬಾ ಅಬೈಮು (37) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ವಿದ್ಯುತ್ ಬಿಕ್ಕಟ್ಟು ನಿವಾರಣೆ

ನವದೆಹಲಿ (ಪಿಟಿಐ): ಸುಮಾರು 20 ಗಂಟೆಗಳಿಗೂ ಹೆಚ್ಚು ಕಾಲ ದೇಶದ ಅರ್ಧಕ್ಕಿಂತಲೂ ಹೆಚ್ಚು ಭಾಗದ್ಲ್ಲಲಿ ವಿದ್ಯುತ್ ವೈಫಲ್ಯಕ್ಕೆ ಕಾರಣವಾಗಿದ್ದ ಮೂರು ಪ್ರಮುಖ ಗ್ರಿಡ್‌ಗಳು ಇದೀಗ ವಿದ್ಯುತ್ ಸರಬರಾಜು ಮಾಡುತ್ತಿವೆ.ಉತ್ತರ, ಪೂರ್ವ ಹಾಗೂ ಈಶಾನ್ಯ ಗ್ರಿಡ್‌ಗಳು ಸಂಪೂರ್ಣವಾಗಿ ವಿದ್ಯುತ್ ಪೂರೈಕೆ ಮಾಡುತ್ತಿವೆ ಎಂದು ಮೂಲಗಳು ತಿಳಿಸಿವೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry