ಸಂಕ್ಷಿಪ್ತ ಸುದ್ದಿ

7

ಸಂಕ್ಷಿಪ್ತ ಸುದ್ದಿ

Published:
Updated:

4ರಂದು ಜನಸ್ಪಂದನ ಕಾರ್ಯಕ್ರಮ

ಚಿಕ್ಕಮಗಳೂರು:
ಬ್ಯಾರುವಳ್ಳಿ ಗ್ರಾಮ ಪಂಚಾಯಿತಿ ಜನಸ್ಪಂದನಾ ಕಾರ್ಯಕ್ರಮ ಜನವರಿ 4ರಂದು ಬೆಳಿಗ್ಗೆ 11ಗಂಟೆಗೆ ಪಂಚಾಯಿತಿ ಕಚೇರಿ ಆವರಣದಲ್ಲಿ ಶಾಸಕ ಬಿ.ಬಿ.ನಿಂಗಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ವಿವಿಧ ಇಲಾಖೆ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗುವುದು.ಸಹಕಾರ ಸಂಘಗಳಿಗೆ ಚುನಾವಣೆ

ಚಿಕ್ಕಮಗಳೂರು:
ಸಹಕಾರ ಸಂಘಗಳ ಹಾಗೂ ಸೌಹಾರ್ದ ಕಾಯ್ದೆಯಡಿ ನೋಂದಣಿಯಾದ ಸಹಕಾರ ಸಂಘಗಳಲ್ಲಿ 154 ಸಹಕಾರ ಸಂಘಗಳ ಆಡಳಿತ ಮಂಡಳಿಗೆ ಮಾರ್ಚ್‌ 31ರೊಳಗೆ ಚುನಾವಣೆ ನಡೆಯಬೇಕಾಗಿರುವುದರಿಂದ ಚುನಾವಣೆ ರಾಜ್ಯ ಸಹಕಾರ ಚುನಾವಣಾ ಆಯೋಗದಿಂದ ನೇಮಕಗೊಂಡ ಚುನಾವಣಾಧಿಕಾರಿಗಳ ಮೂಲಕ  ನಡೆಯಲಿದೆ.ಸಹಕಾರ ಚುನಾವಣಾ ಆಯೋಗ ಚುನಾವಣಾ ಅಧಿಸೂಚನೆಯನ್ನು ಹೊರಡಿಸಿದ್ದು, ಚುನಾವಣಾಧಿಕಾರಿಗಳು ನಿಗದಿತ ದಿನಾಂಕದಂದು ಚುನಾವಣೆ ನಡೆಸಿ ಜಿಲ್ಲೆಯ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಗೆ ಫಲಿತಾಂಶ ಕಳುಹಿಸಲಿದ್ದಾರೆ. ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆ ಫೆಬ್ರುವರಿ 2ರಂದು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ 9ಕ್ಕೆ, ಪಟ್ಟಣ ಸಹಕಾರ ಬ್ಯಾಂಕುಗಳು, ಗ್ರಾಹಕರ ಸಹಕಾರ ಸಂಘಗಳು, ಪಿಕಾರ್ಡ್ ಬ್ಯಾಂಕ್, ನೌಕರರ ಪತ್ತಿನ ಸಹಕಾರ ಸಂಘಗಳು, ಸೌಹಾರ್ದ ಸಹಕಾರಿಗಳು ಇತರೆ ಪತ್ತಿನ ಸಹಕಾರ ಸಂಘಗಳ ಚುನಾವಣೆ ಫೆ.16ಮತ್ತು 17, ಗೃಹನಿರ್ಮಾಣ ಸಹಕಾರ ಸಂಘಗಳು ಹಾಗೂ ಎಲ್ಲ ಪತ್ಯೇಕ ಸಹಕಾರ ಸಂಘಗಳಿಗೆ ಫೆ.23, ಬಾಕಿ ಉಳಿದ ಇತರೆ ಯಾವುದೇ ಸಹಕಾರ ಸಂಘಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಸಹಕಾರ ಸಂಘಗಳ ಉಪನಿಬಂಧಕರು ತಿಳಿಸಿದ್ದಾರೆ.ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗೆ ಅರ್ಜಿ

ಚಿಕ್ಕಮಗಳೂರು:
ಕೆ.ಆರ್.ಪೇಟೆ ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕರ ಹುದ್ದೆ ನೇಮಕಾತಿಗೆ ಪ್ರವರ್ಗ 2ಎ ಗೆ ಸೇರಿದ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಎಸ್ಎಸ್ಎಲ್ ಸಿಯಲ್ಲಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯ ಅಧಿಕಾರಿಯಿಂದ ಪಡೆದು ಇದೇ 13ರೊಳಗೆ ಸಲ್ಲಿಸಬಹುದು. ವಯೋಮಿತಿ 18ರಿಂದ 36 ವರ್ಷ ತಹಶೀಲ್ದಾರರಿಂದ ಪಡೆದ ವಾಸ ಸ್ಥಳ ದೃಢೀಕರಣ ಪತ್ರ, ಉದ್ಯೋಗಕ್ಕಾಗಿ ಪಡೆದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಚುನಾವಣೆ ಮತ್ತು ಪಡಿತರ ಚೀಟಿ ನಕಲನ್ನು ಲಗತ್ತಿಸಬೇಕೆಂದು ಮುಖ್ಯ ಗ್ರಂಥಾಲಯ ಅಧಿಕಾರಿಗಳು ತಿಳಿಸಿದ್ದಾರೆ.ಎಂ.ಫಿಲ್ ಶಿಷ್ಯವೇತನಕ್ಕೆ ಅರ್ಜಿ

ಚಿಕ್ಕಮಗಳೂರು:
ಕುವೆಂಪು ವಿಶ್ವವಿದ್ಯಾನಿಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಘಟಕದ ವತಿಯಿಂದ 2013–14ನೇ ಸಾಲಿನ ಎಂ.ಫಿಲ್ ಮತ್ತು ಪಿಎಚ್.ಡಿ ಕಿರಿಯ ಸಂಶೋಧನಾ ಶಿಷ್ಯ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಆಯ್ಕೆ ಬಯಸುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಂಶೋಧನಾರ್ಥಿಗಳು ಇದೇ 15ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಸಂಚಾಲಕರು ಪರಿಶಿಷ್ಟ ಜಾತಿ, ಪಂಗಡಗಳ ಅಭಿವೃದ್ಧಿ ಘಟಕ ಕುವೆಂಪು ವಿಶ್ವವಿದ್ಯಾನಿಲಯ ಜ್ಞಾನ ಸಹ್ಯಾದ್ರಿ ಶಂಕರಘಟ್ಟ ಅಥವಾ ದೂರವಾಣಿ 08282 256329  ಸಂಪರ್ಕಿಸಬಹುದು.ಮುಕ್ತ ವಿವಿ– ಪ್ರವೇಶ ಅವಧಿ ವಿಸ್ತರಣೆ

ಚಿಕ್ಕಮಗಳೂರು:
ರಾಜ್ಯ ಮುಕ್ತವಿಶ್ವವಿದ್ಯಾನಿಲಯ ಮುಕ್ತಗಂಗೋತ್ರಿ ವತಿಯಿಂದ ಈ ಸಾಲಿನ ಚಿಕ್ಕಮಗಳೂರು ನಗರದ ಕೆ.ಎಂ. ರಸ್ತೆಯ ಎಐಟಿ ಕ್ಯಾಂಪಸ್‌ನಲ್ಲಿ ವಿವಿಧ ಶೈಕ್ಷಣಿಕ ವಿಷಯಗಳಿಗೆ ಪ್ರವೇಶ ಆರಂಭವಾಗಿದ್ದು, ಪ್ರಥಮ, ದ್ವಿತೀಯ, ತೃತೀಯ ಬಿ.ಎ., ಬಿ.ಕಾಂ, ಪ್ರಥಮ, ದ್ವಿತೀಯ ಎಂ.ಎ.,ಎಂ.ಕಾಂ., ಬಿ.ಎಲ್.ಐ.ಎಸ್ಸಿ,ಎಲ್.ಎಲ್.ಎಂ. ಡಿಪ್ಲೊಮಾ, ಪಿ.ಜಿ. ಡಿಪ್ಲೊಮಾ  ಮತ್ತು ಸರ್ಟಿಫಿಕೇಟ್ ಕೋರ್ಸ್, ಎಲ್ಲ ಎಂ.ಎಸ್ಸಿ ಕೋರ್ಸ್  ಪ್ರವೇಶವನ್ನು ಇದೇ 4ರೊಳಗೆ 400 ರೂಪಾಯಿ ದಂಡ ಶುಲ್ಕದೊಂದಿಗೆ ವಿಸ್ತರಿಸಲಾಗಿದೆ.ಆಸಕ್ತ ವಿದ್ಯಾರ್ಥಿಗಳು ಅರ್ಜಿ ಭರ್ತಿ ಮಾಡಿ ದಾಖಲಾತಿ ಮತ್ತು ನಿಗದಿತ ಶುಲ್ಕವನ್ನು ಬ್ಯಾಂಕಿನಲ್ಲಿ ಜಮೆ ಮಾಡಿ, ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಪಡೆಯಬಹುದು. ಪ್ರವೇಶ ಪಡೆದವರಿಗೆ ಸಿದ್ಧ ಪಾಠಗಳನ್ನು ವಿತರಿಸಲಾಗುವುದು. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ವಿದ್ಯಾರ್ಥಿನಿಯರಿಗೆ ಬೋಧನಾ ಶುಲ್ಕದಲ್ಲಿ ಶೇ 25 ರಿಯಾಯಿತಿ ನೀಡಲಾಗುವುದು. ಎಸ್ಎಸ್ಎಲ್‌ಸಿ, ಅಥವಾ ಪಿಯುಸಿ ಅನುತ್ತೀರ್ಣರಾಗಿರಲಿ 18 ವರ್ಷ ತುಂಬಿದ ಯಾವುದೇ ವ್ಯಕ್ತಿಯು ಬಿ.ಎ,ಬಿ.ಕಾಂ ಗೆ ನೇರ ಪ್ರವೇಶ ಪಡೆಯಬಹುದು. ಹೆಚ್ಚಿನ ಮಾಹಿತಿಗೆ ದೂರವಾಣಿ 08262 220105, 8197818807 ಸಂಪರ್ಕಿಸಬಹುದು.ಜನವರಿ ತಿಂಗಳ ಎಎವೈ ಪಡಿತರ ಬಿಡುಗಡೆ

ಚಿಕ್ಕಮಗಳೂರು:
ಜಿಲ್ಲೆಯ ಜನವರಿ ತಿಂಗಳ ಎಎವೈ ಪಡಿತರ ಚೀಟಿದಾರರಿಗೆ 29 ಕೆ.ಜಿ.ಅಕ್ಕಿ 6ಕೆ.ಜಿ.ಗೋಧಿ, ಬಿಪಿಎಲ್ ಪಡಿತರ ಚೀಟಿದಾರರಿಗೆ  ಒಬ್ಬ ಸದಸ್ಯರಿಗೆ 9ಕೆ.ಜಿ.ಅಕ್ಕಿ, ಇಬ್ಬರು ಸದಸ್ಯರಿಗೆ 18 ಕೆ.ಜಿ. ಮೂವರು ಮತ್ತು ಅದಕ್ಕಿಂತ ಮೇಲ್ಪಟ್ಟ ಕುಟುಂಬದ ಸದಸ್ಯರಿಗೆ 27 ಕೆ.ಜಿ. ಅಕ್ಕಿ, ಇದರಂತೆ ತಲಾ 1, 2, 3 ಕೆ.ಜಿ.ಗೋಧಿ  ಬಿಡುಗಡೆ ಮಾಡಲಾಗಿದೆ. ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಯಿಂದ ತಿಂಗಳೊಳಗೆ ಪಡಿತರ ಪಡೆಯಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry