ಭಾನುವಾರ, ಜೂನ್ 20, 2021
21 °C

ಸಂಕ್ಷಿಪ್ತ ಸುದ್ದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಚ್ಚರಿ ಮೂಡಿಸಿದ ಬಾಲಕ

ಲಂಡನ್‌ (ಪಿಟಿಐ):
ಭೌತ ವಿಜ್ಞಾನಿ ಅಲ್ಬರ್ಟ್‌ ಐನ್‌ಸ್ಟೀನ್‌ ಅವರಷ್ಟೇ ಬುದ್ಧಿಶಕ್ತಿ ಹೊಂದಿ­ದ್ದಾನೆಂದು ನಂಬಲಾಗಿರುವ ಬ್ರಿಟನ್‌ನ ನಾಲ್ಕು ವರ್ಷದ ಬಾಲಕ ವಿಶ್ವದಾದ್ಯಂತ 85 ಮಂದಿ ಸದಸ್ಯರನ್ನು ಹೊಂದಿರುವ ಪ್ರತಿಷ್ಠಿತ ಜೀನಿಯಸ್‌ ಕ್ಲಬ್‌ನ ಅತಿ ಕಿರಿಯ ಸದಸ್ಯ ಎನಿಸಿ­ಕೊಂಡಿದ್ದಾನೆ.ದಕ್ಷಿಣ ಯಾರ್ಕ್‌ಶೈರ್‌ನ ಬಾರ್ನ್ಸ್ಲೆ ಮೂಲದ ಶೆರ್ವಿನ್‌ ಶರಭಿ ಬುದ್ಧಿಮಟ್ಟ ಪರೀಕ್ಷೆ ಸ್ಪರ್ಧೆಯಲ್ಲಿ 160 ಅಂಕ ಗಳಿಸುವ ಮೂಲಕ ಮನೋ­ವಿಜ್ಞಾನಿ­ಗಳಲ್ಲಿ ಅಚ್ಚರಿ ಹುಟ್ಟಿಸಿದ್ದಾನೆ.ಮಹಿಳೆ ಬೆದರಿಸಿ ದರೋಡೆ

ಹ್ಯೂಸ್ಟನ್‌ (ಪಿಟಿಐ): 
ಸ್ಪೈಡರ್‌ ಮ್ಯಾನ್‌ ಮುಖವಾಡ ಧರಿ ಸಿದ್ದ ವ್ಯಕ್ತಿ ತನ್ನ ಸಹಚರನೊಂದಿಗೆ ಅಂಗಡಿ ಲೂಟಿ ಮಾಡಿದ ಘಟನೆ ಅಮೆರಿಕದ ಫ್ಲಾರಿಡಾದಲ್ಲಿ ನಡೆದಿದೆ.ಅಂಗಡಿ­ಯೊಂದಕ್ಕೆ ನುಗ್ಗಿ ದರೋಡೆ ಮಾಡಿದ ನಂತರ ಇವರು ಮಹಿಳೆಯೊಬ್ಬರಿಗೆ ಬಂದೂಕಿನಿಂದ ಹೆದರಿಸಿ ಅವಳ ಜೊತೆ ಸುರಕ್ಷಿತ ಸ್ಥಳ ತಲುಪಿದ ನಂತರ ಆಕೆಯನ್ನು ದಬ್ಬಿ ಅಲ್ಲಿಂದ ಪರಾರಿಯಾಗಿದ್ದಾರೆ. ಪೊಲೀಸರು ಸಾರ್ವಜನಿಕರ ಸಹಾಯ ಪಡೆದು ಆ ಇಬ್ಬರು ಲೂಟಿಕೋರರನ್ನು ಹುಡುಕುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.ಮುಷರಫ್‌ ಇಂದು ಕೋರ್ಟ್‌ಗೆ

ಇಸ್ಲಾಮಾಬಾದ್‌ (ಪಿಟಿಐ):
ದೇಶದ್ರೋಹ ಆಪಾ­ದನೆಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೆಜ್‌ ಮುಷರಫ್‌ ಖುದ್ದು ಹಾಜ­ರಾ ಗಬೇಕು ಎಂಬ ಆದೇಶದಲ್ಲಿ ಯಾವುದೇ ರೀತಿಯ ಬದಲಾವಣೆ ಇಲ್ಲ ಎಂದು ವಿಶೇಷ ನ್ಯಾಯಾಲಯವು ಸ್ಪಷ್ಟಪಡಿಸಿದೆ.ಭದ್ರತೆಯ ನೆಪವೊಡ್ಡಿ ಮುಷರಫ್‌ ಮಂಗಳವಾರ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಆದ್ದರಿಂದ ಶುಕ್ರವಾರ ಹಾಜರಾಗುವಂತೆ ಆದೇಶಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಮಾಡಲಾಗಿದೆ.ಥಾಯ್ಲೆಂಡ್‌: 200 ನಿರಾಶ್ರಿತರ ಪತ್ತೆ

ಬ್ಯಾಂಕಾಕ್‌ (ಎಎಫ್‌ಪಿ): 
ರಹಸ್ಯ ಶಿಬಿರ­ಗಳಲ್ಲಿ ಆಶ್ರಯ ಪಡೆ ದಿರುವ ಟರ್ಕಿಯ 200ಕ್ಕೂ ಹೆಚ್ಚು ಶಂಕಿತ ನಿರಾಶ್ರಿತರನ್ನು ಥಾಯ್ಲೆಂಡ್‌ ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.ದಕ್ಷಿಣ ಸಾಂಗಾಕ್ಲಾ ಪರ್ವತ ಶ್ರೇಣಿ­ಯಲ್ಲಿ ರಬ್ಬರ್‌ ತೋಟದಲ್ಲಿದ್ದ ಶಿಬಿರ­ಗಳಲ್ಲಿ ನಿರಾಶ್ರಿತರು ಆಶ್ರಯ ಪಡೆದಿರುವುದು ಬೆಳಕಿಗೆ ಬಂದಿದೆ.

‘ನಿರಾಶ್ರಿತರು ಕುಟುಂಬ ಸಮೇತ­ರಾಗಿ ಇಲ್ಲಿ ಆಶ್ರಯ ಪಡೆದಿದ್ದು, ಅವರನ್ನು ಬಂಧಿಸಲಾಗಿದೆ’ ಎಂದು ಪೊಲೀಸ್‌ ಮಹಾ­ನಿರ್ದೇಶಕ ದಟ್‌ಚೈ ಪಿಟಾನೆಲಾಬೂತ್‌ ಹೇಳಿದ್ದಾರೆ.ಆತ್ಮಹತ್ಯಾ ಬಾಂಬರ್‌ ಸಾವು

ಕಾಬೂಲ್‌ (ಐಎಎನ್‌ಎಸ್‌):
ಆತ್ಮ­ಹತ್ಯಾ ಬಾಂಬರ್‌ ಒಬ್ಬರನ್ನು ಆ ಫ್ಘಾನಿಸ್ತಾನದ ಕಂದಹಾರ್‌ ನಗರ­ದಲ್ಲಿರುವ ಭಾರತೀಯ ರಾಯಭಾರ ಕಚೇರಿ ಸಮೀಪ ಪೊಲೀಸರು ಗುಂಡಿಟ್ಟು ಸಾಯಿ­ಸಿದ ಘಟನೆ ಗುರುವಾರ ನಡೆ­ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.‘ಸ್ಫೋಟಕ ಹೊಂದಿರುವ ಜಾಕೆಟ್‌ ಧರಿಸಿದ ವ್ಯಕ್ತಿ ರಾಯಭಾರ ಕಚೇರಿಯ ದ್ವಾರದತ್ತ ತೆರಳುತ್ತಿದ್ದಾಗ ಪೊಲೀಸರು ನಿಲ್ಲುವಂತೆ ಸೂಚನೆ ನೀಡಿದ್ದಾರೆ. ಈ ಸೂಚನೆ ಪಾಲಿಸದೆ ಇದ್ದಾಗ ಸಂಶಯ­ಗೊಂಡ ಪೊಲೀಸರು ಅವನ ಮೇಲೆ ದಾಳಿ ನಡೆಸಿದರು’ ಎಂದು ಕಂದಹಾರ್‌ ಪೊಲೀಸ್‌ ವಕ್ತಾರ ಜಿಯಾ ದುರ್ರಾನಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.ಮೀನುಗಾರರ ಸಮಸ್ಯೆ: ಮಾತುಕತೆ ರದ್ದು

ಕೊಲಂಬೊ (ಐಎಎನ್‌ಎಸ್‌):
ಭಾರತ ಮತ್ತು ಶ್ರೀಲಂಕಾದ ಮೀನು­ಗಾರರ ಸಮಸ್ಯೆ ಬಗೆಹರಿಸಲು ಗುರುವಾರ ನಿಗದಿ­ಯಾ ಗಿದ್ದ ಎರಡನೇ ಸುತ್ತಿನ ಮಾತುಕತೆ  ಕೊನೆಕ್ಷಣದಲ್ಲಿ  ರದ್ದಾಗಿದೆ.

 

ಮಾತುಕತೆಗೆ ಹೊಸ ದಿನಾಂಕ ನಿಗದಿಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತದ ಮನವಿ ಮೇರೆಗೆ ಗುರುವಾರದ ಸಭೆಯನ್ನು ರದ್ದುಪಡಿಸಲಾಗಿದೆ ಎಂದು ಕ್ಸಿನ್‌ಹುವಾ ವರದಿ ಮಾಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.