ಶನಿವಾರ, ಜನವರಿ 25, 2020
19 °C

ಸಂಕ್ಷಿಪ್ತ ಸುದ್ದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಹನ ಡಿಕ್ಕಿ: ಯುವಕನ ಸಾವು

ಬೆಂಗಳೂರು: ಯುವಕನೊಬ್ಬನಿಗೆ ಟ್ಯಾಕ್ಸಿಯೊಂದು ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಯಲಹಂಕ ಸಮೀಪದ ಜಕ್ಕೂರು ಬಳಿ ಗುರುವಾರ ರಾತ್ರಿ ಸಂಭವಿಸಿದೆ. ಮುಖೇಶ್(26) ಮೃತಪಟ್ಟವರು.

ಕೆಟ್ಟು ನಿಂತ ಲಾರಿ ಪರಿಶೀಲಿಸಲು ಕೆಳಗಿಳಿದಾಗ ವೇಗವಾಗಿ ಬಂದ ಟ್ಯಾಕ್ಸಿಯೊಂದು ಡಿಕ್ಕಿ ಹೊಡೆದಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಾಹನ ಚಾಲಕ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಯಲಹಂಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಉಚಿತ ಬ್ರೈಲ್ ಕ್ಯಾಲೆಂಡರ್

ನಗರದ ಐ.ಡಿ.ಎಲ್. ಪೌಂಡೇಷನ್ ಅಂಧರಿಗೆ 2012ರ ಬ್ರೈಲ್ ಕ್ಯಾಲೆಂಡರ್‌ಅನ್ನು ಉಚಿತವಾಗಿ ನೀಡಲಿದೆ.  ಇದರಿಂದ ಅಂಧರು ದಿನಾಂಕ,  ದಿನ ,  ತಿಂಗಳು,  ಹಬ್ಬ ಮತ್ತು ರಜಾ ದಿನಗಳನ್ನು ತಿಳಿದು ಕೊಳ್ಳಬಹುದು. ಇದು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿದ್ದು,  6 ಚುಕ್ಕಿಗಳನ್ನೊಳಗೊಂಡ ಬ್ರೈಲ್ ಕ್ಯಾಲೆಂಡರ್. ಆಸಕ್ತರು: 9342530290 ಸಂಪರ್ಕಿಸಬಹುದು.ಹುಣ್ಣಿಮೆ ಹಾಡು

ಕಾಡುಮಲ್ಲೇಶ್ವರ ಗೆಳೆಯರ ಬಳಗವು `ಹುಣ್ಣಿಮೆ ಹಾಡು ಹಾಗೂ ಬೆಳ್ಳಿ ಹಬ್ಬ~ ಮಹೋತ್ಸವವನ್ನು ಜ. 8 ಹಾಗೂ 9 ರಂದು ಕಾಡು ಮಲ್ಲೇಶ್ವರ ಬಯಲು ರಂಗಮಂದಿರದಲ್ಲಿ ಏರ್ಪಡಿಸಿದೆ.

 

ವಾದ್ಯ ಗಾಯಕಿ ಡಾ.ಅನಸೂಯ ಕುಲಕರ್ಣಿ ಅವರಿಂದ ಬಿದಿರಿನ ವಾದ್ಯ (ಅಕ್ರಂಗ್) ಮತ್ತು ರೇಮೋನಿ ಅವರ ಹಾಡುಗಾರಿಕೆ ಇದೆ  ಎಂದು ಬಳಗದ ಅಧ್ಯಕ್ಷ ಬಿ.ಕೆ.ಶಿವರಾಂ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರತಿಕ್ರಿಯಿಸಿ (+)