ಸಂಕ್ಷಿಪ್ತ ಸುದ್ದಿ

7

ಸಂಕ್ಷಿಪ್ತ ಸುದ್ದಿ

Published:
Updated:

ಭಾರತೀಯನಿಗೆ ಪ್ರಶಸ್ತಿ

ಲಂಡನ್‌(ಪಿಟಿಐ)
: ಭಾರತದ ಸ್ವಾತಂತ್ರ್ಯ ಹೋರಾಟಗಾರರೊಬ್ಬರಿಗೆ ಜೀವಮಾನ ಸಾಧನೆಗಾಗಿ ಬ್ರಿಟನ್‌ ಸಂಸತ್್‌ನ  ಕೆಳ ಮನೆ (ಹೌಸ್‌ ಆಫ್‌ ಕಾಮನ್ಸ್‌) ಜೀವಮಾನ ಸಾಧನೆ ಪ್ರಶಸ್ತಿ ನೀಡಿದೆ. ವ್ಯಾಪಾರೋದ್ಯಮ ಸಚಿವ ಗ್ರೆಗರಿ ಬಾರ್ಕರ್‌ ಮತ್ತು ಭಾರತ ಬ್ರಿಟಿಷ್‌ ಸರ್ವಪಕ್ಷ ಸಂಸದೀಯ ಗುಂಪಿನ ಅಧ್ಯಕ್ಷ ವೀರೇಂದ್ರ ಶರ್ಮ ಅವರು ಜಂಟಿಯಾಗಿ ದಿವಂಗತ ಜವಾಹರಲಾಲ್‌ಡಾರ್ಡಾ ಅವರ ಮಗ  ವಿಜಯ್‌ಜವಾಹರಲಾಲ್‌ ಡಾರ್ಡಾ ಅವರಿಗೆ ಪ್ರಶಸ್ತಿ ನೀಡಿದರು.ಚೀನಾ: ಮೂವರಿಗೆ ಗಲ್ಲು

ಬೀಜಿಂಗ್ (ಐಎಎನ್‌ಎಸ್‌
): ಚೀನಾದಲ್ಲಿ ಭಯೋತ್ಪಾದನಾ ದಾಳಿ ನಡೆಸಿ 24 ಜನರ ಸಾವಿಗೆ ಕಾರಣರಾದ ಮೂವರು ಭಯೋತ್ಪಾದಕರಿಗೆ ಚೀನಾದ ಗ್ಸಿನ್ ಜಿಯಾಂಗ್ ಯುಗರ್ ಕೋರ್ಟ್‌ ಶುಕ್ರವಾರ ಗಲ್ಲು ಶಿಕ್ಷೆ ವಿಧಿಸಿದೆ.ಕಾನ್ಸುಲೇಟ್ ಮೇಲೆ ದಾಳಿ

ಕಾಬೂಲ್‌ (ಎಪಿ)
: ಪಶ್ಚಿಮ ಅಫ್ಘಾನಿಸ್ತಾನದಲ್ಲಿಯ ಅಮೆರಿಕ ರಾಜತಾಂತ್ರಿಕ ಕಚೇರಿ ಮೇಲೆ ಶುಕ್ರವಾರ ಬೆಳಿಗ್ಗೆ ತಾಲಿಬಾನ್‌ ಆತ್ಮಾಹುತಿ ದಳ ನಡೆಸಿದ ಕಾರ್‌ ಬಾಂಬ್‌  ಸ್ಫೋಟದಲ್ಲಿ ಇಬ್ಬರು ಬಲಿಯಾಗಿದ್ದಾರೆ. ಈ ಸಂದರ್ಭ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಅಫ್ಘನ್ನರು ಮೃತಪಟ್ಟಿದ್ದು,  ರಾಜತಾಂತ್ರಿಕ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಅಮೆರಿಕ ತಿಳಿಸಿದೆ. ದಾಳಿ ಹೊಣೆಯನ್ನು ತಾಲಿಬಾನ್‌ ಹೊತ್ತುಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry