ಸಂಕ್ಷಿಪ್ತ ಸುದ್ದಿ

7

ಸಂಕ್ಷಿಪ್ತ ಸುದ್ದಿ

Published:
Updated:

ಕೋರ್ಟ್‌ಗೆ ಮಾಜಿ ಜನರಲ್‌ ಮೊರೆ

ಲಾಹೋರ್‌ (ಪಿಟಿಐ):
ಪಾಕಿಸ್ತಾನದ ಮಾಜಿ ಸೇನಾಡಳಿತ­ಗಾರ ಪರ್ವೇಜ್‌ ಮುಷರಫ್‌ ಅವರು 1999ರಲ್ಲಿ ನಡೆ­ಸಿದ್ದ ಕ್ಷಿಪ್ರಕ್ರಾಂತಿಯಲ್ಲಿ ಸೇವೆಯಿಂದ ವಜಾ­ಗೊಂಡಿದ್ದ ಮಾಜಿ ಸೇನಾ ಮುಖ್ಯಸ್ಥ ಜಿಯಾವುದ್ದೀನ್‌ ಬಟ್‌ ಅವರು ಈಗ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.ಕಾನೂನನ್ನು ಉಲ್ಲಂಘಿಸಿ ತಮ್ಮನ್ನು ವಜಾಗೊಳಿಸಲಾಗಿದೆ ಎಂದು ಘೋಷಿಸು­ವಂತೆ ಅವರು ಲಾಹೋರ್‌ ಹೈಕೋರ್ಟ್‌­­ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.ಜೊತೆಗೆ, ತಮ್ಮ ಬಂಧನದ ಬಳಿಕ ಸರ್ಕಾರ ವಶಪಡಿಸಿ­ಕೊಂಡ ಆಸ್ತಿ­ಗಳನ್ನು ವಾಪಸ್‌ ನೀಡುವಂತೆ ಮತ್ತು ಪಿಂಚಣಿ ಹಾಗೂ ನಿವೃತ್ತಿ ಭತ್ಯೆಗಳನ್ನು ಒದಗಿಸು­ವಂತೆಯೂ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಸಾಂದ್ರ ನಕ್ಷತ್ರಪುಂಜ ಪತ್ತೆ

ವಾಷಿಂಗ್ಟನ್‌ (ಪಿಟಿಐ): ಒತ್ತೊತ್ತಾಗಿ ಅಸಂಖ್ಯಾತ ನಕ್ಷತ್ರ­ಗಳನ್ನು ಹೊಂದಿರುವ, ಇದುವರಗೆ ಕಾಣದಿದ್ದ ನಕ್ಷತ್ರಪುಂಜ­ವನ್ನು (ಗೆಲಾಕ್ಸಿ) ಖಗೋಳವಿಜ್ಞಾನಿಗಳು ಪತ್ತೆ­ಹಚ್ಚಿದ್ದಾರೆ.ಇದು ನಮ್ಮ ತಾರಾಪುಂಜವಾದ ‘ಕ್ಷೀರಪಥ’ದಿಂದ 5.4 ಕೋಟಿ ಬೆಳಕಿನ ವರ್ಷಗಳಷ್ಟು ದೂರದಲ್ಲಿದೆ ಎಂದು ವಿಜ್ಞಾನಿ­ಗಳು ಹೇಳಿದ್ದಾರೆ.

ಹೊಸದಾಗಿ ಪತ್ತೆಹಚ್ಚಲಾಗಿರುವ ನಕ್ಷತ್ರ­­ಪುಂಜವನ್ನು ‘ಎಂ60–ಯುಸಿಡಿ1’ ಎಂದು ಕರೆಯಲಾಗಿದೆ. ವಿರ್ಗೊ ತಾರಾ­ಪುಂಜಗಳ ಸಮೂಹದಲ್ಲಿ  ಒತ್ತೊತ್ತಾಗಿ ಅಗಣಿತ ನಕ್ಷತ್ರಗಳನ್ನು ಹೊಂದಿರುವ ‘ಎಂ60–ಯುಸಿಡಿ1’ ಪತ್ತೆಯಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.ಲೈಂಗಿಕ ಹಿಂಸೆ ತಡೆ: 113 ದೇಶಗಳ ಸಹಿ

ವಿಶ್ವಸಂಸ್ಥೆ (ಎಪಿ):
ಸಂಘರ್ಷದಲ್ಲಿ ಲೈಂಗಿಕ ಹಿಂಸಾಚಾರ ಅಂತ್ಯಗೊಳಿಸಲು ಕ್ರಮ ಕೈಗೊಳ್ಳುವ ವಿಶ್ವ­ಸಂಸ್ಥೆಯ ಹೊಸ ಘೋಷ­ಣೆಗೆ ಜಗತ್ತಿನ 113 ರಾಷ್ಟ್ರಗಳು ಸಹಿ ಹಾಕಿವೆ.ಸಿರಿಯಾದಲ್ಲಿ ವಿಶ್ವಸಂಸ್ಥೆ ತನಿಖಾ ತಂಡ

ಡಮಾಸ್ಕಸ್‌ (ಐಎಎನ್‌ಎಸ್‌):
ದೇಶ­ದಲ್ಲಿ ರಾಸಾಯನಿಕ ಅಸ್ತ್ರ ಬಳಸಿದ ಆರೋಪ ಕುರಿತು ತನಿಖೆ ಪೂರ್ಣಗೊಳಿ­ಸಲು ವಿಶ್ವಸಂಸ್ಥೆಯ ರಾಸಾಯನಿಕ ಅಸ್ತ್ರ ತನಿಖಾ ತಂಡ ಬುಧವಾರ ಸಿರಿಯಾಕ್ಕೆ ಮರಳಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.ಭಾರತ–ಚೀನಾ  ದ್ವಿಪಕ್ಷೀಯ ಮಾತುಕತೆ

ಬೀಜಿಂಗ್‌ (ಪಿಟಿಐ):
ಪ್ರಧಾನಿ ಮನ­ಮೋಹನ್‌ ಸಿಂಗ್‌ ಅವರು ಮುಂದಿನ ತಿಂಗಳು ಚೀನಾಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳ ಮಧೆ್ಯ ಕಗ್ಗಂಟಾಗಿರುವ ವಿವಿಧ ವಿಷಯಗಳ ಮೇಲಿನ ಉನ್ನತ ಅಧಿಕಾರಿಗಳ ಮಟ್ಟದ

ನಾಲ್ಕು ದಿನಗಳ ದ್ವಿಪಕ್ಷೀಯ ಮಾತುಕತೆ ಬುಧವಾರ ಆರಂಭವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry