ಶನಿವಾರ, ಏಪ್ರಿಲ್ 17, 2021
23 °C

ಸಂಕ್ಷೀಪ್ತ ಚಿತ್ರ ವಾರ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಧನ್ ಧನಾ ಧನ್’ ಮಾತು ಮುಗೀತು

‘ಧನ್ ಧನಾ ಧನ್’ ಚಿತ್ರಕ್ಕೆ ಬೆಂಗಳೂರಿನ ಭೂತ್ ಬಂಗಲಾ, ತಾವರೆಕೆರೆ, ಕಾವೇರಿ ಆಸ್ಪತ್ರೆ, ಕೆಂಪಾಪುರ, ಆರ್. ಟಿ. ನಗರದ ಸಾಯಿಬಾಬಾ ದೇವಸ್ಥಾನ ಸುತ್ತ ಮುತ್ತ ಬಿರುಸಿನ ಚಿತ್ರೀಕರಣ ನಡೆಸಿ ಇದೀಗ ಮಾತಿನ ಭಾಗದ ಡಬ್ಬಿಂಗ್ ನಡೆದು ಸಂಕಲನ ಪೂರ್ಣಗೊಂಡಿದೆ.ನಾಯಕಿ ಪಾರ್ವತಿ ಮೆನನ್ ಜಾಗಕ್ಕೆ ಶರ್ಮಿಳಾ ಮಾಂಡ್ರೆ ಬಂದಿದ್ದು, ನಿರ್ದೇಶಕ ವಿಕ್ಟರಿ ವಾಸು ಸ್ಥಳಕ್ಕೆ ರಾಮನಾಥ್ ಋಗ್ವೇದಿ ಬಂದಿದ್ದು ಈಗಾಗಲೇ ಸುದ್ದಿಯಾಗಿತ್ತು.  ಕಾರ್ತಿಕ್  ಸಂಗೀತ, ಮೋಹನ್ ಛಾಯಾಗ್ರಹಣ, ಗೋವರ್ಧನ್ ಅವರ ಸಂಕಲನ ಈ ಚಿತ್ರಕ್ಕಿದೆ.ಪ್ರೇಮ್‌ಕುಮಾರ್, ರವಿಶಂಕರ್, ಕಿಶೋರ್, ಅನಂತ್‌ನಾಗ್, ರಂಗಾಯಣ ರಘು, ಶರ್ಮಿಳಾ ಮಾಂಡ್ರೆ, ಆದಿ ಲೋಕೇಶ್ ಮುಂತಾದವರು ನಟಿಸಿದ್ದಾರೆ.

‘ಹುಡುಗರು’ ಚಿತ್ರಕ್ಕೆ ಮಾತಿನ ಮರುಲೇಪನ

ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಿಸುತ್ತಿರುವ ‘ಹುಡುಗರು’ ಚಿತ್ರದ ಮಾತಿನ ಮರುಲೇಪನ ಕಾರ್ಯ ನಡೆಯುತ್ತಿದೆ. ಚಿತ್ರ ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಂಡಿದ್ದು, ಗೀತೆಗಳ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ.ಗುರುಪ್ರಸಾದ್ (ಎದ್ದೇಳು ಮಂಜುನಾಥ) ಸಂಭಾಷಣೆ, ಸತ್ಯ ಹೆಗ್ಡೆ ಛಾಯಾಗ್ರಹಣ, ಹರಿಕೃಷ್ಣ ಸಂಗೀತ, ಮೋಹನ್ ಕಲೆ, ಇಮ್ರಾನ್ ನೃತ್ಯ, ದೀಪು ಎಸ್. ಕುಮಾರ್ ಸಂಕಲನ, ಮಲ್ಲಿಕಾರ್ಜುನ್ ನಿರ್ಮಾಣ-ನಿರ್ವಹಣೆ, ಚನ್ನ ನಿರ್ಮಾಣ- ಮೇಲ್ವಿಚಾರಣೆ ಚಿತ್ರಕ್ಕಿದೆ. ಚಿತ್ರದ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.ತಾರಾಗಣದಲ್ಲಿ ಪುನೀತ್‌ರಾಜ್‌ಕುಮಾರ್, ರಾಧಿಕಾ ಪಂಡಿತ್, ಯೋಗೀಶ್, ಶ್ರಿನಗರ್ ಕಿಟ್ಟಿ, ವಿಶಾಲ್ ಹೆಗ್ಗಡೆ, ಅಭಿನಯ (ನಾಡೋಡಿಗಳ್ ಖ್ಯಾತಿ), ಶಾಂತಮ್ಮ, ರಂಗಾಯಣ ರಘು, ಸುಧಾ ಬೆಳವಾಡಿ, ಶ್ರಿನಿವಾಸಪ್ರಭು, ಕೃಷ್ಣಾ ಅಡಿಗ, ವನಿತಾವಾಸು, ಅವಿನಾಶ್, ಆಶಾರಾಣಿ, ರಮ್ಯ ಬಾರ್ನೆ ಮುಂತಾದವರಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.